AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ: ಹುಬ್ಬಳ್ಳಿಲ್ಲೊಂದು ಅಮಾನವೀಯ ಘಟನೆ

ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ಅಮಾನವೀಯ ಘಟನೆ‌ಯೊಂದು ನಡೆದು ಹೋಗಿದೆ. ಆಟವಾಡುವ ನೆಪದಲ್ಲಿ ಏಳು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರವೆಸಗಿರುವಂತಹ ಘಟನೆ ನಡೆದಿದೆ. ಸದ್ಯ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏಳು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ: ಹುಬ್ಬಳ್ಳಿಲ್ಲೊಂದು ಅಮಾನವೀಯ ಘಟನೆ
ಏಳು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ: ಹುಬ್ಬಳ್ಳಿಲ್ಲೊಂದು ಅಮಾನವೀಯ ಘಟನೆ
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 25, 2024 | 11:02 PM

Share

ಹುಬ್ಬಳ್ಳಿ, ಆಗಸ್ಟ್​ 25: ಹುಬ್ಬಳ್ಳಿಯ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಟವಾಡುವ ನೆಪದಲ್ಲಿ ಏಳು ವರ್ಷದ ಬಾಲಕಿ (girl) ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಆರೋಪಿ ನೂರ ಅಹಮ್ಮದ್​ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೊಲೆ!

ರಾಮನಗರ: ಅವಳು ಬಾಳಿ ಬದುಕಬೇಕಾದ ಪುಟ್ಟ ಕಂದಮ್ಮ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಆತನನ್ನು ನಂಬಿ ಆತನ ಗಾಡಿ ಹತ್ತಿದ್ದಳು. ಇನ್ನೇನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆ ವ್ಯಕ್ತಿ ಮಾಡಬಾರದ ಕೆಲಸ ಮಾಡಿ, 4 ವರ್ಷದ ಕಂದಮ್ಮಳನ್ನು ಕೊಲೆ ಮಾಡಿ ಬಿಸಾಡಿದ್ದ ಘಟನೆ ಇತ್ತೀಚೆಗೆ ರಾಮನಗರ ಜಿಲ್ಲೆ ಮಾಗಡಿ ಒಟ್ಟಣದಲ್ಲಿ ನಡೆದಿತ್ತು.

ಇದನ್ನೂ ಓದಿ: ನೇಹಾಳಂತೆ ಕೊಲೆ: ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಬ್ಬಾಸ್

20ನೇ ದಿನಾಂಕದಂದು ಸಂಜೆ 5 ಗಂಟೆಯಿಂದ ನಾಪತ್ತೆಯಾಗಿದ್ದ ತಮ್ಮ ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬ ವಿಚಾರ ಪೊಲೀಸರು ಪೋಷಕರಿಗೆ ತಿಳಿಸುತ್ತಿದ್ದಂತೆ, ತಂದೆ-ತಾಯಿಗೆ ಭೂಮಿ ಬಾಯಿಬಿರಿದಂತಾಗಿತ್ತು. ಆಗಾಗ ತಮ್ಮ ಮನೆಗೆ ಬಂದು ಹೋಗುತ್ತಿದ್ದ ಬೆಂಗಳೂರಿನ ಆ ಸಂಬಂಧಿ ಇರ್ಫಾನ್, ಅಂದು ಕೂಡ ತಮ್ಮ ಮನೆಗೆ ಬಂದಿದ್ದ.

ಇದನ್ನೂ ಓದಿ: ಉಡುಪಿ: ಯುವತಿಗೆ ಮಾದಕ ಪದಾರ್ಥ ನೀಡಿ ಅತ್ಯಾಚಾರವೆಸಗಿದ ಅಲ್ತಾಫ್​

ಮನೆಯಲ್ಲಿದ್ದ ಮಕ್ಕಳನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಚಾಕಲೇಟ್ ಕೊಡಿಸಿದ್ದ. ಬಳಿಕ ವಾಪಾಸ್ ತೆರಳಿದ್ದ ಆರೋಪಿ ಒಬ್ಬನೇ ತೆರಳಿಲ್ಲ. ಬದಲಿಗೆ 4 ವರ್ಷದ ಬಾಲಕಿಯನ್ನು ತನ್ನ ದ್ವಿಚಕ್ರವಾಹನ ಹೋಂಡಾದಲ್ಲಿ ಕರೆದುಕೊಂಡು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.‌ ಇದನ್ನು ಗಮನಿಸಿದ ಮಾಗಡಿ ಟೌನ್ ಪೊಲೀಸರು, ಆರೋಪಿ ಕರೆ ಮಾಡಿ ವಿಚಾರಿಸಿದಾಗ, ನಾನು ಮಗುವನ್ನು ಅಲ್ಲೆ ಬಿಟ್ಟುಬಂದಿರೋದಾಗಿ ಹೇಳಿದ್ದ. ಬಳಿಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ಠಾಣಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಮೊದಲಿಗೆ ಬಾಲಕಿ ತನ್ನ ವಾಹನದ ಜೊತೆ ಬರುವಾಗ ಅಪಘಾತವಾಗಿದೆ ಎಂದು ನಾಟಕ ಮಾಡಿದ ಆರೋಪಿ, ಬಳಿಕ ಪೊಲೀಸರ ಭಾಷೆಯಲ್ಲಿ ಕೇಳಿದಾಗ, ನಡೆದ ಕೃತ್ಯವನ್ನು ಬಾಯಿಬಿಟ್ಟಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:48 pm, Sun, 25 August 24