ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಗೋಲ್ ಮಾಲ್: ಕೋರ್ಟ್​ ಮೊರೆ ಹೋದ ಉದ್ಯೋಗ ವಂಚಿತರು

ಶಿವಮೊಗ್ಗ ಡಿಸಿಸಿ ಬ್ಯಾಂಕ್​ನಲ್ಲಿ ಕಳೆದ ವರ್ಷ ವಿವಿಧ ಹುದ್ದೆಗಳಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕಾತಿ ನಡೆದಿತ್ತು. ಈಗ ಸರಕಾರ ಬದಲಾಗಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ. ಈ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆದಿರುವ ಕುರಿತು ಪರೀಕ್ಷೆ ಬರೆದ ಉದ್ಯೋಗ ಆಕಾಂಕ್ಷಿಗಳು ಅಂದೇ ಆರೋಪ ಮಾಡಿದ್ದರು. ಈ ನೇಮಕಾತಿ ಕುರಿತು ಮಂಜುನಾಥ್ ಎನ್ನುವ ಉದ್ಯೋಗ ಆಕಾಂಕ್ಷಿಯು ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಗೋಲ್ ಮಾಲ್: ಕೋರ್ಟ್​ ಮೊರೆ ಹೋದ ಉದ್ಯೋಗ ವಂಚಿತರು
ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಗೋಲ್ ಮಾಲ್: ಕೋರ್ಟ್​ ಮೊರೆ ಹೋದ ಉದ್ಯೋಗ ವಂಚಿತರು
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on: Jun 27, 2024 | 10:07 PM

ಶಿವಮೊಗ್ಗ, ಜೂನ್​ 27: ಶಿವಮೊಗ್ಗ ಡಿಸಿಸಿ ಬ್ಯಾಂಕ್​ನ ನೇಮಕಾತಿಯಲ್ಲಿ (DCC Bank recruitment) ಅವ್ಯವಹಾರ ನಡೆದಿದೆ. ಡಿಸಿಸಿ ಬ್ಯಾಂಕ್​ನಲ್ಲಿ ನೇಮಕಾತಿಯಲ್ಲಿ (recruitment) ಹಗರಣದ ಕುರಿತು ಅಭ್ಯರ್ಥಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಡಿಸಿಸಿ ಬ್ಯಾಂಕ್​ನಲ್ಲಿ ನೇಮಕಾತಿಯಲ್ಲಿ ಸಾಕಷ್ಟು ಲೋಪದೋಷ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.

ಶಿವಮೊಗ್ಗ ಡಿಸಿಸಿ ಬ್ಯಾಂಕ್​ನಲ್ಲಿ ಕಳೆದ ವರ್ಷ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಿತು. ಬಿಜೆಪಿ ಸರಕಾರದ ಅವಧಿಯಲ್ಲಿ ಈ ನೇಮಕಾತಿ ನಡೆದಿತ್ತು. ಈಗ ಸರಕಾರ ಬದಲಾಗಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ. ಕಳೆದ ವರ್ಷ 100ಕ್ಕೂ ಹೆಚ್ಚು ಎಫ್​ಡಿಸಿ, ಎಸ್​ಡಿಸಿ, ಚಾಲಕ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿ ನಡೆದಿತ್ತು. ಈ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆದಿರುವ ಕುರಿತು ಪರೀಕ್ಷೆ ಬರೆದ ಉದ್ಯೋಗ ಆಕಾಂಕ್ಷಿಗಳು ಅಂದೇ ಆರೋಪ ಮಾಡಿದ್ದರು. ಅಂದಿನ ಆಡಳಿತ ಮಂಡಳಿಯು ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿಯನ್ನು ಮಾಡಿತ್ತು. ಈ ನೇಮಕಾತಿ ಕುರಿತು ಮಂಜುನಾಥ್ ಎನ್ನುವ ಉದ್ಯೋಗ ಆಕಾಂಕ್ಷಿಯು ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಇದನ್ನೂ ಓದಿ: ಎಸ್​ಟಿ ನಿಗಮದ ಹಗರಣ: ಚಂದ್ರಶೇಖರ್​ ಆತ್ಮಹತ್ಯೆಯಿಂದ ನಾಗೇಂದ್ರ ರಾಜೀನಾಮೆ ತನಕ ಏನೇನು ಆಯ್ತು? ಇಲ್ಲಿದೆ ವರದಿ

ಈ ನಡುವೆ ಅನಧಿಕೃತ ವಿವಿಗೆ ಪರೀಕ್ಷೆ ನಡೆಸಲು ಸುಮಾರು 40 ಲಕ್ಷ ರೂ. ಹಣ ನೀಡಿತ್ತು. ಈ ವಿವಿಗೆ ಪರೀಕ್ಷೆ ನಡೆಸುವ ಕುರಿತು ಆಡಳಿತ ಮಂಡಳಿ ಮತ್ತು ಅಪೇಕ್ಸ್ ಬ್ಯಾಂಕ್ ನ ಸಲಹೆಯನ್ನು ಪಡೆದಿರಲಿಲ್ಲ. ಇನ್ನೂ ಕಳೆದ ವರ್ಷ ಲಿಖಿತ ಪರೀಕ್ಷೆ ಬಳಿಕ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡದೇ ವಾಪಸ್ ಪಡೆಯುವ ಮೂಲಕ ಗೊಂದಲ ಮೂಡಿಸಿತ್ತು. ವಿವಿಧ ಹುದ್ದೆಗಳ ಆಯ್ಕೆ ಸಂದರ್ಭದಲ್ಲಿ ನೇರ ಸಂದರ್ಶನದಲ್ಲೂ ತಾರತಮ್ಯ ಮಾಡಿದೆ. ತಮಗೆ ಬೇಕಾಗಿರುವ ಅಭ್ಯರ್ಥಿಗಳಿಗೆ ಮಾತ್ರ ನೇರ ಸಂದರ್ಶನ ಬರಲು ಸೂಚನೆ ನೀಡಿದ್ದರಂತೆ. ಯಾರೆಲ್ಲ ಹಣ ನೀಡಿದ್ದಾರೆ ಅವರಿಗೆ ಮಾತ್ರ ಬ್ಯಾಂಕ್​ನಲ್ಲಿ ಉದ್ಯೋಗ ಸಿಕ್ಕಿದೆ ಎನ್ನುವುದು ಒಂದಿಷ್ಟು ಪರೀಕ್ಷೆ ಬರೆದ ಅಭ್ಯರ್ಥಿಗಳ ಆರೋಪವಾಗಿದೆ.

ಡಿಸಿಸಿ ಬ್ಯಾಂಕ್​ನಲ್ಲಿ ನೇಮಕಾತಿ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ನೇಮಕಾತಿಯಲ್ಲಿ ಆಯ್ಕೆ ಆದ ಉದ್ಯೋಗಿಗಳಿಗೆ ಗೌಪ್ಯವಾಗಿ ಸಂದರ್ಶನ ಬಳಿಕ ಆದೇಶವನ್ನು ನೀಡಿದೆ. ಹೀಗೆ ಪರೀಕ್ಷೆ ಬರೆದ ಒಂದಿಷ್ಟು ಅಭ್ಯರ್ಥಿಗಳಿಗೆ ನೇಮಕಾತಿ ಮೊದಲೇ ಬ್ಯಾಂಕ್​ನಲ್ಲಿ ಉದ್ಯೋಗಿಗಳೆಂದು ಲಕ್ಷ ಲಕ್ಷ ರೂ. ವೈಯಕ್ತಿ ಸಾಲ ನೀಡಿದ್ದಾರೆ. ಇದೇ ಸಾಲದ ಹಣವು ಬ್ಯಾಂಕ್ ನ ಆಡಳಿತ ಮಂಡಳಿಯ ಹಲವರಿಗೆ ಸೇರಿದೆ ಅಂತೆ.

ಇನ್ನೂ ಆರನೇ ವೇತನ ಆಯೋಗದ ವೇತನ ಪರಿಷ್ಕರಣೆ ಆಗಿತ್ತು. 7.14 ಕೋಟಿ ರೂ. ಹಣ 23-10-2020 ರಂದು ನೌಕರರ ಉಳಿತಾಯ ಖಾತೆಗೆ ಜಮಾ ಮಾಡಿದ್ದರು. ಜಮಾ ಮಾಡಿದ ದಿನವೇ ನೌಕರರ ಉಳಿತಾಯ ಖಾತೆಯಿಂದ ಹಣ ವಾಪಸ್ ಪಡೆದಿದ್ದಾರೆ. ನೌಕರರ ಬಂದಿರುವ ಹಣದಲ್ಲಿ ಒಂದು ಪಾಲು ಅಂದಿನ ಅಧ್ಯಕ್ಷ ಮತ್ತು ಕೆಲ ಆಡಳಿತ ಮಂಡಳಿ ಕೆಲ ನಿರ್ದೇಶಕರಿಗೆ ಹಂಚಲಾಗಿದೆ ಅಂತೆ. ಇದೇ ರೀತಿ 1-7-21 ರಿಂದ 30-3-22 ವರೆಗಿನ ತುಟ್ಟಿ ಭತ್ಯೆ ಬಾಕಿ ಮೊತ್ತ 1.06 ಲಕ್ಷ ರೂ. ಹಣ 4-4-22 ರಂದು ಮತ್ತೆ ಎಲ್ಲ ನೌಕರರ ಖಾತೆಗೆ ಜಮಾ ಮಾಡಿದ್ದಾರೆ. ಜಮಾ ಮಾಡಿದ ದಿನವೇ ನೌಕರರ ಉಳಿತಾಯ ಖಾತೆಯಿಂದ ಹಣ ಡ್ರಾ ಆಗಿದೆ. ಹೀಗೆ ತುಟ್ಟಿ ಭತ್ಯೆ ಬಂದಿರುವ ಹಣದ ಒಂದು ಪಾಲನ್ನು ಅಂದಿನ ಅಧ್ಯಕ್ಷರು ಮತ್ತು ಕೆಲ ನಿರ್ದೇಶಕರು ನುಂಗಿ ಹಾಕಿದ್ದಾರಂತೆ.

ಇದನ್ನೂ ಓದಿ: ಸಚಿವ ಈಶ್ವರ್ ಖಂಡ್ರೆ ಸಹೋದರ ಅಧ್ಯಕ್ಷತೆಯ ಬೀದರ್ ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ

ಹೀಗೆ ಬ್ಯಾಂಕ್ ನಲ್ಲಿ ನೇಮಕಾತಿ ಮತ್ತು ವೇತನ ಪರಿಷ್ಕರಣೆ ಹಾಗೂ ತುಟ್ಟಿ ಭತ್ಯೆ ಹಣದಲ್ಲೂ ದೊಡ್ಡ ಮಟ್ಟದ ಗೋಲ್ ಮಾಲ್ ನಡೆದಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಕಾಂಗ್ರೆಸ್ ಮುಖಂಡರ ಆಯನೂರು ಮಂಜುನಾಥ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನೇಮಕಾತಿ ಮತ್ತು ನೌಕರರ ವೇತನ ಪರಿಷ್ಕರಣೆ ಹಾಗೂ ತುಟ್ಟಿ ಭತ್ಯೆ ಹಣದಲ್ಲೂ ಲಕ್ಷಾಂತರ ರೂ. ಗೋಲ್ ಮಾಲ್ ನಡೆದಿದೆ. ಬ್ಯಾಂಕ್​ನಲ್ಲಿ ಎಲ್ಲವೂ ಸರಿಯಿಲ್ಲ. ನಿರಂತರವಾಗಿ ಬ್ಯಾಂಕ್​ನಲ್ಲಿ ಅವ್ಯವಹಾರಗಳು ನಡೆದಿರುವ ಗಂಭೀರ ಆರೋಪಗಳು ಬಂದಿವೆ. ಡಿಸಿಸಿ ಬ್ಯಾಂಕ್​ನಲ್ಲಿ ನಡೆದಿರುವ ನೇಮಕಾತಿ ಹಗರಣದ ಕುರಿತು ಸರಕಾರವು ಗಮನ ಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್