ಶಿವಮೊಗ್ಗ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟ: ಸಚಿವ ಮಧು ಬಂಗಾರಪ್ಪ ವಿರುದ್ಧ ಗಂಭೀರ ಆರೋಪ

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿದೆ. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಎಸ್.ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಅವರ ಆಪ್ತ ಬಳಗದ ವಿರುದ್ಧ ಬಹಿರಂಗವಾಗಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಧು ಬಂಗಾರಪ್ಪನವರ ಆಪ್ತ ಸಹಾಯಕರು ಅಧಿಕಾರಿಗಳಿಂದ ಹಣ ವಸೂಲಿ ದಂಧೆಯನ್ನೂ ಸಹ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಶಿವಮೊಗ್ಗ ಕಾಂಗ್ರೆಸ್​​ನಲ್ಲಿ  ಭಿನ್ನಮತ ಸ್ಫೋಟ: ಸಚಿವ ಮಧು ಬಂಗಾರಪ್ಪ ವಿರುದ್ಧ ಗಂಭೀರ ಆರೋಪ
Madhu bangarappa And H.s. Sundaresh
Edited By:

Updated on: Sep 23, 2026 | 10:33 PM

ಶಿವಮೊಗ್ಗ, (ಸೆಪ್ಟೆಂಬರ್ 23): ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧವೇ ಶಿವಮೊಗ್ಗದಲ್ಲಿ ಸೂಡಾ ಅಧ್ಯಕ್ಷ H.S.ಸುಂದರೇಶ್ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮಧು ಬಂಗಾರಪ್ಪ ಆಪ್ತ ಸಹಾಯಕ (ಪಿಎ) ಜಿ.ಡಿ.ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಸಂಬಂಧ ಇಂದು (ಸೆ.23) ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೂಡಾ ಅಧ್ಯಕ್ಷ H.S.ಸುಂದರೇಶ್, ಮೂರ್ಖರು, ದಡ್ಡರ ಸಂತೆಯಿಂದ ಕಾಂಗ್ರೆಸ್ ಪಕ್ಷ ತಳಮಟ್ಟಕ್ಕೆ ಹೋಗುತ್ತಿದೆ. ಇಲ್ಲಿ ಪಕ್ಷಕ್ಕೋಸ್ಕರ ದುಡಿದವರಿಗೆ ಅವಕಾಶವಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹಗುರವಾಗಿ ಮಾತನಾಡಿದವರಿಗೆ ಮಂತ್ರಿ ಮಾಡಿದ್ದಾರೆ. JDSನಿಂದ ಬಂದ ಮಧು ಬಂಗಾರಪ್ಪ ಪಕ್ಷ ಆಳುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರಿಗೆ ಗಂಧ ಗಾಳಿ ಗೊತ್ತಿಲ್ಲ. ಸಚಿವರ ಆಪ್ತ ಸಹಾಯಕರು ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಬೆದರಿಸಿ ಹಣಕ್ಕೆ ಬೇಡಿಕೆಯನ್ನಿಡುತ್ತಿದ್ದಾರೆ. 25 ಲಕ್ಷ, 5 ಲಕ್ಷಕ್ಕೆ ಬೇಡಿಕೆ ಇಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ನೋಡಿ: ಸದನದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ ಶಶಿಧರ್

Sundaresh on Madhubangarappa: ಸಚಿವ ಮಧು ಬಂಗಾರಪ್ಪ ವಿರುದ್ಧ SUDA ಅಧ್ಯಕ್ಷ ಸುಂದರೇಶ್ ವಾಗ್ದಾಳಿ | #TV9D
ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಮಂತ್ರಿ ಮಾಡಿದ್ದಾರೆ. ಜಮೀರ್ ಅಹ್ಮದ್ ಒಳ್ಳೆಯ ನಾಯಕ, ಅವರನ್ನು ಕಡೆಗಣಿಸಬಾರದು. ಕೇವಲ 1000 ಮತ ಗಳಿಸಿದ ನಾಯಕನಿಗಾಗಿ ಜಮೀರ್ ಅವರನ್ನು ಕಡೆಗಣಿಸಲಾಗಿದೆ. ದಿನೇಶ್ ಗುಂಡೂರಾವ್ ಅವರನ್ನೂ ಕಡೆಗಣಿಸಲಾಗುತ್ತಿದೆ. ಇನ್ನು ಕಿಮ್ಮನೆ ರತ್ನಾಕರ್ ಕಳೆದ ಬಾರಿಯೇ ಇದು ಕೊನೆಯ ಚುನಾವಣೆ ಎಂದು ಟಿಕೆಟ್ ಪಡೆದಿದ್ದರು. ಈಗ ಉಲ್ಟಾ ಹೊಡೆದು ಮತ್ತೆ ಟಿಕೆಟ್ ಕೇಳಲು ಮುಂದಾಗಿದ್ದಾರೆ. ಜಿಲ್ಲಾ ಮಂತ್ರಿಗೆ ಬಕೆಟ್ ಹಿಡಿಯಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

40 ವರ್ಷ ದುಡಿದಿದ್ದೇನೆ, ಕಣ್ಣೀರಿಟ್ಟ ಸುಂದರೇಶ್

ನಾನು ಕಳೆದ 40 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಕೋಟಿಗಟ್ಟಲೆ ಮನೆಯ ದುಡ್ಡನ್ನು ಪಕ್ಷಕ್ಕಾಗಿ ತಂದು ಹಾಕಿದ್ದೇನೆ. ನಮ್ಮ ಮನೆಯಲ್ಲಿ ನನಗೆ ಮೆಟ್ಟಲ್ಲಿ ಹೊಡೆಯುವುದು ಬಾಕಿ ಇದೆ, ಆ ಮಟ್ಟಿಗೆ ದುಡಿದಿದ್ದೇನೆ. ಈ ಹಿಂದೆ ಬಂಗಾರಪ್ಪ ಅವರು ಏಳು ಬಾರಿ ಪಕ್ಷ ಬಿಟ್ಟಾಗ ಅವರ ವಿರುದ್ಧ ನಾನು ಮಾತನಾಡಿದ್ದೆ. ನಾನು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಈಗ ನಮ್ಮನ್ನೇ ಕಡೆಗಣಿಸಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

Basavaraj Yaraganavi
Loading...
Unable to load recommendations.
Follow Us