ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತೆ ಅನ್ಯಾಯ: ಹಾಲ್ ಟಿಕೆಟ್ ನೀಡದೆ ಪರೀಕ್ಷೆ ನಡೆಸುತ್ತಿರುವ ಎನ್ಟಿಎ!
JRF ಮತ್ತು ಅಸಿಸ್ಟೆಂಟ್ ಪ್ರೊಫೆಸರ್ಗೆ ನಡೆಯುತ್ತಿರುವ ನೆಟ್ ಎಕ್ಸಾಂಗೆ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹಾಲ್ ಟಿಕೆಟ್ ಬಿಡಲಾಗಿದೆ. ಪ್ರತಿ ವರ್ಷ NTA ಇಂದ NET ಎಕ್ಸಾಂ ನಡೆಸಲಾಗುತ್ತದೆ.
ಶಿವಮೊಗ್ಗ: ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ (NTA) ಯಿಂದ ಮತ್ತೆ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದೇ ಇಂದು ಕನ್ನಡ ಪರೀಕ್ಷೆ ನಡೆಸಲಾಗಿದೆ. JRF ಮತ್ತು ಅಸಿಸ್ಟೆಂಟ್ ಪ್ರೊಫೆಸರ್ಗೆ ನಡೆಯುತ್ತಿರುವ ನೆಟ್ ಎಕ್ಸಾಂಗೆ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹಾಲ್ ಟಿಕೆಟ್ ಬಿಡಲಾಗಿದೆ. ಪ್ರತಿ ವರ್ಷ NTA ಇಂದ NET ಎಕ್ಸಾಂ ನಡೆಸಲಾಗುತ್ತದೆ. ಸ್ಥಳ, ದಿನಾಂಕ, ಸಮಯ ನಮೂದಿಸಿದ ಹಾಲ್ ಟಿಕೆಟ್ ಬಿಟ್ಟಿದ್ದು, ಕೊನೆಕ್ಷಣದಲ್ಲಿ ಹಾಲ್ ಟಿಕೆಟ್ ಬಿಟ್ಟು ಎಂಎ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ನಿನ್ನೆ ತಡರಾತ್ರಿವರೆಗೂ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಕ್ಕಿರಲಿಲ್ಲ. ದೂರದ ಜಿಲ್ಲೆಗೆ ಹೋಗಲಾಗದೇ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ತ್ಯಜಿಸಿದ್ದಾರೆ. ಪ್ರತಿ ವರ್ಷ ‘ಕನ್ನಡ’ ವಿಷಯದ ಪರೀಕ್ಷೆಗೆ NTA ಸಮಸ್ಯೆ ಮಾಡುತ್ತಿದೆ ಎನ್ನಲಾಗುತ್ತಿದೆ. ತಾಂತ್ರಿಕ ಕಾರಣ, ಪರೀಕ್ಷಾ ಕೇಂದ್ರದ ಸಮಸ್ಯೆ ಹೇಳಿ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಸಲಾಗುತ್ತಿದೆ.
ಎನ್ಟಿಎ ಒಂದೇ ಪರೀಕ್ಷೆಯನ್ನು ಎರಡೆರಡು ಹಂತದಲ್ಲಿ ಮಾಡುತ್ತಿದೆ. ಬೇರೆ ಯಾವುದೇ ಭಾಷೆ ಪರೀಕ್ಷೆಗೆ ಇಲ್ಲದ ಸಮಸ್ಯೆ ಇಲ್ಲಿ ಕನ್ನಡಕ್ಕೆ ಮಾತ್ರ ಏಕೆ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಈ ಹಿಂದೆ ವರ್ಷಕ್ಕೆ ಎರಡು ಬಾರಿ NET ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಎನ್ಟಿಎ ಕಳೆದ ವರ್ಷದಿಂದ ವರ್ಷಕ್ಕೆ ಒಮ್ಮೆ ಮಾತ್ರ ಪರೀಕ್ಷೆ ನಡೆಸುತ್ತಿದೆ. ಒಂದೇ ಪರೀಕ್ಷೆಯಿಂದ ಮೀಸಲು ಪರ್ಸೆಂಟೇಜ್ನಲ್ಲೂ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕಳೆದ ಬಾರಿ ಕೂಡ ಕನ್ನಡ ಪರೀಕ್ಷೆ ವೇಳೆಯೇ ಯಡವಟ್ಟು ಮಾಡಲಾಗಿತ್ತು. ಕನ್ನಡದ ಪರೀಕ್ಷೆಗೆ ಹಿಂದಿ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆ ನಂತರ ಮರು ಪರೀಕ್ಷೆ ಮಾಡಲಾಗಿತ್ತು. ಸರಿಯಾಗಿ ಪರೀಕ್ಷೆ ಆಯೋಜಿಸದ ಎನ್ಟಿಎ ಮತ್ತು ಯುಜಿಸಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪರೀಕ್ಷೆ ಆರಂಭವಾಗದೇ ಪರೀಕ್ಷಾರ್ಥಿಗಳು ಪರಡಾಟ
ಚಿಕ್ಕಬಳ್ಳಾಪುರ: ಜಿಲ್ಲೆಯ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೇಂಟ್ ಪ್ರೋಷೇಸರ್ ಯುಜಿಸಿ ಕನ್ನಡ ಪರೀಕ್ಷಾರ್ಥಿಗಳು ಪರದಾಡಿರುವಂತಹ ಘಟನೆ ಕೂಡ ನಡೆದಿದೆ. ಪರೀಕ್ಷಾ ಕೇಂದ್ರ ಇದ್ರೂ ಪೂರ್ವ ಸಿದ್ದತೆ ಮಾಡಿಕೊಂಡಿಲ್ಲವೆಂದು ಆರೋಪಿಸಿದರು. ಬೆಳಿಗ್ಗೆ 8.30ಗೆ ಆನ್ ಲೈನ್ ಪರೀಕ್ಷೆ ಆರಂಭವಾಗಬೇಕಿತ್ತು. ಈಗ ಪರೀಕ್ಷೆ ಕೇಂದ್ರವೇ ಇದಲ್ಲ ಎಂದು ಕಾಲೇಜಿನ ಸಿಬ್ಬಂದಿ ಹೇಳುತ್ತಿದ್ದಾರೆ. 8.30ಕ್ಕೆ ಕನ್ನಡ ವಿಷಯ ಪರೀಕ್ಷೆ ಆರಂಭವಾಗಬೇಕಿತ್ತು. ಪ್ರವೇಶ ಪತ್ರದಲ್ಲಿ ಕಾಲೇಜು ಹಾಗೂ ಪರೀಕ್ಷೆ ಕೇಂದ್ರ ನಮೂದು ಮಾಡಿರುವ ಯು.ಜಿ.ಸಿ. ಆದರೆ ಬಾರ್ ಕೋಡ್ ಬೇರೆ ಕೇಂದ್ರ ಇದೆ ಎನ್ನುತ್ತಿದ್ದಾರೆ. ನೂರಾರು ಜನ ಪರೀಕ್ಷಾರ್ಥಿಗಳ ಪರದಾಡಿದ್ದಾರೆ. ತಾಂತ್ರಿಕ ತೊಂದರೆಯಿಂದ ತಮ್ಮ ಕಾಲೇಜು ಪರೀಕ್ಷೆ ಕೇಂದ್ರವಾಗಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಯಾರನ್ನು ಕೇಳಬೇಕು ಎಂದು ಪರೀಕ್ಷಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.