AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ಸ್ಫೋಟಕ ಸಿಡಿದು ಹಸು ಸಾವು: ಓರ್ವ ಬಂಧನ

ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಹಂದಿ ಬೇಟೆಗೆಂದು ತಯಾರಿಸಿದ ಸ್ಫೋಟಕ ಸಿಡಿದು ಹಸು ಮೃತಪಟ್ಟಿದೆ. ಗುರು ಎಂಬಾತ ಹಂದಿ ಬೇಟೆಗಾಗಿ ಸ್ಫೋಟಕ ತಯಾರಿಸಿ ಗುಂಡಿಯಲ್ಲಿಟ್ಟಿದ್ದನು. ಹಸು ಅದರಲ್ಲಿ ಬಿದ್ದು ಸಾವನ್ನಪ್ಪಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಭದ್ರಾವತಿ ಪೇಪರ್ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಸ್ಫೋಟಕ ಸಿಡಿದು ಹಸು ಸಾವು: ಓರ್ವ ಬಂಧನ
ಸ್ಫೋಟಕ ಇರಿಸಿದ್ದ ಸ್ಥಳ
Basavaraj Yaraganavi
| Edited By: |

Updated on:Jun 02, 2025 | 6:49 PM

Share

ಶಿವಮೊಗ್ಗ, ಜೂನ್​ 02: ಹಂದಿ ಶಿಕಾರಿಗೆಂದು ಇಟ್ಟಿದ್ದ ಸ್ಫೋಟಕ ಸಿಡಿದು ಹಸು (Cow) ಮೃತಪಟ್ಟಿರುವ ಘಟನೆ ಭದ್ರಾವತಿ (Bhadravati) ನಗರದ ಬೊಮ್ಮನಕಟ್ಟೆ ಬಡಾವಣೆಯ ಮೂಲೆಕಟ್ಟೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಗುರು (45) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗುರು ಹಂದಿ ಶಿಕಾರಿಗೆಂದು ಸಿಡಿಮದ್ದು ತಯಾರು ಮಾಡಿದ್ದನು. ಹಿಂದಿನ ದಿನ ಸಿಡಿಮದ್ದು ತಯಾರಿಸಿ ಒಣಗಲೆಂದು ತನ್ನ ಮನೆ ಪಕ್ಕದ ಮೈದಾನದ ಗುಂಡಿಯೊಳಗೆ ಇಟ್ಟಿದ್ದನು.

ಭಾನುವಾರ (ಜೂ.01) ರಂದು ಹಸು ಮೈದಾನಕ್ಕೆ ಮೇಯಲು ಬಂದಿತ್ತು. ಈ ವೇಳೆ ಹಸು ಕಾಲು ಜಾರಿ ಗುಂಡಿಯೊಳಗೆ ಬಿದ್ದಿದೆ. ಹಸು ಬಿದ್ದ ಕೂಡಲೆ ಸಿಡಿಮದ್ದು ಬ್ಲಾಸ್ಟ್ ಆಗಿ ಹಸು ಮೃತಪಟ್ಟಿದೆ. ಸ್ಪೋಟಕವನ್ನು ಪಟಾಕಿ ಮದ್ದು ಹಾಗೂ ಬೆಂಕಿ ಕಡ್ಡಿ ಮದ್ದು ಬಳಸಿ ಆರೋಪಿ ಗುರು ತಯಾರಿಸಿದ್ದ ಎಂದು ತಿಳಿದುಬಂದಿದೆ. ಭದ್ರಾವತಿ ಪೇಪರ್ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿ ಗುರು ಅನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Mon, 2 June 25