ಸ್ಟಿಂಗ್ ಆಪರೇಷನ್ ರೂವಾರಿ ಫೋಟೋ ರಿಲೀಸ್ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ಬಾಂಬ್​ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಸ್ಟಿಂಗ್ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಸ್ಟಿಂಗ್ ಆಪರೇಷನ್ ಸೂತ್ರಧಾರಿಯ ಹೆಸರು ಇನ್ನೂ ರಿವೀಲ್ ಆಗಿಲ್ಲ.. ಆದ್ರೆ ಕುಮಾರಸ್ವಾಮಿ ಒಬ್ಬೊಬ್ಬರ ಹೆಸರನ್ನೇ ಉಲ್ಲೇಖಿಸಿ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಸ್ಟಿಂಗ್ ಸೂತ್ರಧಾರಿ ಇವರೇ ಎಂದು ಫೋಟೋ ಸಹ ಪ್ರದರ್ಶಿಸಿದರು. ಆದ್ರೆ, ಇದೀಗ ಸ್ಟಿಂಗ್ ಮಾಡಿದವರಿಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಬಂಧವಿದೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಸ್ಟಿಂಗ್ ಆಪರೇಷನ್ ರೂವಾರಿ ಫೋಟೋ ರಿಲೀಸ್ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ
HD Kumaraswamy

Updated on: Oct 15, 2026 | 7:18 PM

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರು, ಅಕ್ಟೋಬರ್ 15: ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಸರ್ಕಾರದ ವಿರುದ್ಧ ವಿಪಕ್ಷಗಳಿಗೆ ಸಿಕ್ಕ ಅತಿದೊಡ್ಡ ಅಸ್ತ್ರವಾಗಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ನಡುವೆ ಮಾತಿನ ಸಮರವನ್ನೇ ಸೃಷ್ಟಿಸಿದೆ. ಹೌದು…ಸ್ಟಿಂಗ್ ಆಪರೇಷನ್​​ ಸಂಬಂಧ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಅಕ್ಷರಶಃ ಸಿಡಿದೆದ್ದಿದ್ದು, ಸ್ಟಿಂಗ್ ಗೆ ಸಂಬಂಧಿಸಿದಂತೆ ಒಂದೊಂದೇ ಸುಳಿವು ಬಿಟ್ಟು ಕೊಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕುಮಾರಸ್ವಾಮಿ ಸ್ಟಿಂಗ್‌ ಆಪರೇಷನ್‌ ಮಾಡಿದ ವ್ಯಕ್ತಿಯ ಫೋಟೋವನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲೇ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಇದೀಗ ಸ್ಟಿಂಗ್ ಮಾಡಿದವರಿಗೆ ಕಾಂಗ್ರೆಸ್ ಹೈಕಮಾಂಡ್​​​​​ ಜೊತೆ ನಂಟು ಇದೆ ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ವಿವಾದ ಈಗ ಮತ್ತೊಂದು ಹಂತಕ್ಕೆ ಹೋಗಿದೆ.

ಬಾಗೇಪಲ್ಲಿ ಮೂಲದ ಪ್ರಶಾಂತ್‌ ಫೋಟೋ ರಿಲೀಸ್‌

ಜೆಡಿಎಸ್‌ ಕಾರ್ಯಕರ್ತರನ್ನಯ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತರ ಕಚೇರಿ ಆಗಮಿಸಿದ ಕುಮಾರಸ್ವಾಮಿ, ಬಾಗೇಪಲ್ಲಿ ಮೂಲದ ಪ್ರಶಾಂತ್‌ ಫೋಟೋವನ್ನು ರಿಲೀಸ್‌ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗಿರುವ ರೌಡಿಶೀಟರ್ ಫೋಟೋ ಬಿಡುಗಡೆ ಮಾಡಿದ ಹೆಚ್‌ಡಿಕೆ, ಸರ್ಕಾರದ ವಿರುದ್ಧ ರಾಜಕೀಯ ಷಡ್ಯಂತ್ರದ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ‘ರೇವಣ್ಣ ರೀತಿ ನನ್ನನ್ನೂ ಒಳಗೆ ಕಳುಹಿಸಲು ಯತ್ನಿಸಲಾಗ್ತಿದೆ’: ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ

ಸುರ್ಜೇವಾಲಾ ಜೊತೆ ರೌಡಿಶೀಟರ್ ಪ್ರಶಾಂತ್ ಆತ್ಮೀಯವಾಗಿ ತಬ್ಬಿಕೊಂಡು ನಿಂತಿದ್ದಾನೆ ನೋಡಿ. ಈತನನ್ನು ವಶಕ್ಕೆ ಪಡೆದು, ಬೆದರಿಸಿ ನನ್ನ ಹೆಸರನ್ನು ಹೇಳಿಸಲು ಸಂಚು ರೂಪಿಸಿದ್ದಾರೆ “ಅಸಲಿ ‘420’ಗಳು ವಿಧಾನಸೌಧದಲ್ಲಿ ಕುಳಿತಿದ್ದಾರೆ. ನನ್ನ ಹಾಗೂ ನನ್ನ ಕಾರ್ಯಕರ್ತರ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರ ಇದೆ ಎಂದು ಯಾರ ಕುಟುಂಬವನ್ನಾದರೂ ಹಾಳು ಮಾಡುತ್ತೀರಾ? ಮೊದಲು ಗೃಹ ಸಚಿವರು ತಮ್ಮ ನಾಲಿಗೆಗೆ ಲಗಾಮು ಹಾಕಿಕೊಂಡು ಮಾತನಾಡಲಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಟಿಂಗ್ ಮಾಡಿದವರಿಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಬಂಧ

ಸ್ಟಿಂಗ್ ವಿಚಾರವಾಗಿ ಇಂದು (ಅಕ್ಟೋಬರ್ 15) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸ್ಟಿಂಗ್ ಮಾಡಿದವರಿಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಬಂಧವಿದೆ, ಇಲ್ಲಿಯವರೆಗೂ ರಕ್ಷಣೆ ಕೊಟ್ಟುಕೊಂಡ ಬಂದಂತಹ ವ್ಯಕ್ತಿಗೆ ಮುಖ್ಯಮಂತ್ರಿ ಜೊತೆ ಸಂಬಂಧವಿದೆ. ಸ್ಟಿಂಗ್ ಆಪರೇಷನ್ ತನಿಖೆ ಸರ್ಕಾರ ಎಲ್ಲಿ ಮಾಡುತ್ತೇ? ಅವರಿಗೆ ಅದರ ಅವಶ್ಯಕತೆ ಇಲ್ಲ. ಸರ್ಕಾರದಲ್ಲಿ ಕ್ರಿಮಿನಲ್ಸ್ ಬಗ್ಗೆ ತನಿಖೆ ಮಾಡಲು ತಯಾರಿಲ್ಲ. ಹೀಗಾಗಿ ಅವರಿಗೆ ಅವರಿಗೆ ರಕ್ಷಣೆ ಸಿಗುತ್ತಿದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಕ್ರಿಮಿನಲ್​​​​​ಗಳಿಗೆ ರಕ್ಷಣೆ ಕೊಡುವ ನಿಮ್ಮಿಂದ (ಪ್ರಿಯಾಂಕ್ ಖರ್ಗೆ) ಪಾಠ ಕಲಿಯಬೇಕಿಲ್ಲ. ಚಮಚಾಗಿರಿ ಮಾಡುವರನ್ನ ಇಟ್ಕೊಂಡು ತನಿಖೆ ದಾರಿ ತಪ್ಪಿಸುತ್ತಿದ್ದೀರಿ. ಆ ಕ್ರಿಮಿನಲ್​ನನ್ನು ಇನ್ನೂ ಯಾಕೆ ನೀವು ಅರೆಸ್ಟ್ ಮಾಡಿಲ್ಲ? ಅವನಿಗೆ ಯ್ಯಾಕೆ ರಾಜಾತಿಥ್ಯ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅವರು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಬೇರೆ. ಯುವಕರ ಮೇಲೆ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ಶನಿವಾರ ನಮ್ಮ ಮುಖಂಡರ ಸಭೆ ಕರೆದಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ಒಟ್ಟಿನಲ್ಲಿ ಸ್ಟಿಂಗ್ ಆಪರೇಷನ್ ಸಮರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸರ್ಕಾರ ಮತ್ತು ಹೆಚ್‌ಡಿಕೆ ನಡುವಿನ ವಾಕ್ಸಮರ ಇವತ್ತು ತೀವ್ರ ಸ್ವರೂಪಪಡೆದುಕೊಂಡಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಿ ನಿಲ್ಲಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us