AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೇವಣ್ಣ ರೀತಿ ನನ್ನನ್ನೂ ಒಳಗೆ ಕಳುಹಿಸಲು ಯತ್ನಿಸಲಾಗ್ತಿದೆ’: ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ

ರೇವಣ್ಣ ಪ್ರಕರಣದಂತೆ ನನ್ನನ್ನೂ ಒಳಗೆ ಕಳುಹಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಿ ಎಂದು ಸವಾಲು ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದೆಂದು ಈ ಹಿಂದೆ ರಮೇಶ್​ ಜಾರಕಿಹೊಳಿ ಅವರೇ ಎಚ್ಚರಿಸಿದ್ದರು. ಡಿ.ಕೆ.ಶಿವಕುಮಾರ್​ಗೆ ಸಿದ್ದರಾಮಯ್ಯರ ಪೆನ್​ಡ್ರೈವ್​ ಕೊಟ್ಟ ಆ ಹೆಣ್ಮಗಳು ಯಾರು? ಎಂದೂ ಅವರು ಪ್ರಶ್ನಿಸಿದ್ದಾರೆ.

'ರೇವಣ್ಣ ರೀತಿ ನನ್ನನ್ನೂ ಒಳಗೆ ಕಳುಹಿಸಲು ಯತ್ನಿಸಲಾಗ್ತಿದೆ': ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ
ಕುಮಾರಸ್ವಾಮಿ ಸ್ಫೋಟಕ ಆರೋಪ Image Credit source: Tv9 Kannada
ಸುನಿಲ್​ ಎಮ್​ ಹೆಚ್​
| Edited By: |

Updated on:Oct 15, 2026 | 12:08 PM

Share

ಬೆಂಗಳೂರು, ಅಕ್ಟೋಬರ್​​ 15: ಸ್ಟಿಂಗ್​​ ಆಪರೇಷನ್​​ ವಿಚಾರವಾಗಿ ರಾಜ್ಯ ಕಾಂಗ್ರೆಸ್​​ ವಿರುದ್ಧ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದು, ನನ್ನನ್ನು ಫಿಕ್ಸ್ ಮಾಡಬೇಕು ಅಂತಾ ಮೊನ್ನೆಯಿಂದ ಚರ್ಚೆ ನಡೆಯುತ್ತಿದೆ. ಒಂದು ಹೆಣ್ಣು ಮಗಳನ್ನ ಕಳಿಸಿ 5 ದಿನ ರೇವಣ್ಣರನ್ನು ಒಳಗೆ ಕಳಿಸಿದ್ರಲ್ಲಾ, ಹಾಗೆ ನನ್ನನ್ನು ಒಳಗೆ ಕಳುಹಿಸಲು ಯತ್ನಿಸಲಾಗ್ತಿದೆ. ನಿಮ್ಮ ಸಿಎಂ ಮಾತನಾಡಿದ್ರಲ್ಲ ಆಡಿಯೋ ಆ ಬಗ್ಗೆ ತನಿಖೆ ಮಾಡಿದ್ರಾ? ತನಿಖೆಗೊಳಗಾಗಬೇಕಿದ್ದ ವ್ಯಕ್ತಿ ಠಾಣೆಯಲ್ಲೇ ಆರಾಮವಾಗಿ ಮಾತಾಡ್ತಾನೆ. ನಿನ್ನೆ DCP ಕಚೇರಿಯಲ್ಲಿ ಕಾಲು ಮೇಲೆ ಕಾಲು ಹಾಕಿ ಕೂತಿದ್ನಂತೆ. ಸ್ಟಿಂಗ್ ಆಪರೇಷನ್ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಶಿವಕುಮಾರ್ ಅವರೇ ಮೊದಲು ನಿಮ್ಮ ಮೊಬೈಲ್ ತನಿಖೆಗೆ ಕೊಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ನಾನು ಈಗಲೇ ಬರುತ್ತೇನೆ ಅರೆಸ್ಟ್​ ಮಾಡಿ’

ಪ್ರಕರಣ ಸಂಬಂಧ ಸಂಶಯ ಬಂದ್ರೆ ಕುಮಾರಸ್ವಾಮಿಯವರನ್ನೂ ಕರೆಸುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿದ್ದಾರೆ. ನಾನು ಈಗಲೇ ಬರುತ್ತೇನೆ ಅರೆಸ್ಟ್​ ಮಾಡಿ ಎಂದು ಪ್ರಿಯಾಂಕ್ಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಈಗಲೇ ನಾನು ಕಮಿಷನರ್​ ಕಚೇರಿಗೆ ಬರುತ್ತೇನೆ ಟಚ್​ ಮಾಡಿ ನೋಡಿ. ಗೃಹ ಇಲಾಖೆ ಏನು ನಿಮ್ಮ ಅಪ್ಪನ ಆಸ್ತಿನಾ? ತಾಕತ್‌, ಯೋಗ್ಯತೆ ಇದ್ದರೆ ಹಾಲಿ ಜಡ್ಜ್‌ ನೇತೃತ್ವದಲ್ಲಿ ತನಿಖೆ ನಡೆಸಿ. ಹೋರಾಟಕ್ಕೆ ರೆಡಿ ಇದ್ದೀನಿ, ಬನ್ನಿ ಅಖಾಡಕ್ಕೆ ಎಂದವರು ಸವಾಲು ಹಾಕಿದ್ದಾರೆ. ನಿಮ್ಮದು ನಾನು ನೋಡದೆ ಇರುವ ಅಧಿಕಾರನಾ? ಎಂದೂ ಪ್ರಶ್ನಿಸಿದ್ದಾರೆ. ಒಬ್ಬ ಮುಖ್ಯಮಂತ್ರಿನಾ ಟ್ರ್ಯಾಪ್ ಮಾಡೋಕೆ ಪ್ಲ್ಯಾನ್​ ಮಾಡ್ತಾನೆ, ಮೊದಲು ಅವನನ್ನು ಅರೆಸ್ಟ್​ ಮಾಡಿ. ಕರ್ನಾಟಕ ರಾಜ್ಯವನ್ನು ಇಂತಹ ಪರಿಸ್ಥಿತಿಗೆ ತಂದು ಬಿಟ್ಟಿದ್ದಾರೆ. ಅದಕ್ಕಾಗಿ ಇಷ್ಟು ಆಕ್ರೋಶವಾಗಿ ಪದ ಬಳಸಿ ಮತನಾಡಿದ್ದೇನೆ. ಅದಕ್ಕಾಗಿ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ. ನನಗೆ ರಕ್ತ ಕುದಿಯುತ್ತಿದೆ, ನಮ್ಮ ಈ ರಾಜ್ಯ ಉಳಿಯಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ‘ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ?’: ಕುಮಾರಸ್ವಾಮಿ ಆರೋಪಕ್ಕೆ ಪ್ರಿಯಾಂಕ್​​ ಖರ್ಗೆ ಕೌಂಟರ್​​

‘ಸಿಎಂಗೆ ಪೆನ್​ಡ್ರೈವ್​ ಕೊಟ್ಟ ಆ ಹೆಣ್ಮಗಳು ಯಾರು?’

ಸ್ಟಿಂಗ್ ಬಗ್ಗೆ ಸಿದ್ದರಾಮಯ್ಯನವರು ಸಂಪೂರ್ಣವಾಗಿ ಹೇಳಿದ್ದರೂ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿರುವ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಪಕ್ಷದ ಜಾಲತಾಣದ ಯುವಕನನ್ನು ಯಾವ ನೋಟಿಸ್ ಕೊಡದೆ ಮನೆಯಿಂದ 6 ಗಂಟೆಗೆ ಕರೆದೊಯ್ಯುತ್ತಾರೆ. ಆ ಯುವಕನಿಗೆ ಅದು ಹೇಳಿ, ಇದು ಹೇಳಿ ಎಂದು ಹಿಂಸೆ ಕೊಡ್ತಾರೆ. ಆ ಹುಡುಗರನ್ನ ಕರೆದೊಯ್ಯುವ ಬದಲು, ಸಿಎಂ ಮತ್ತು ಅವರ ಜೊತೆ ಇರುವವರ ಮೊಬೈಲ್ ಚೆಕ್ ಮಾಡಿ. ನಾವು ಸ್ಟಿಂಗ್ ಆಪರೇಷನ್ ಮಾಡಿ ಜೆ.ಪಿ.ನಗರದಲ್ಲಿ ಇಟ್ಟುಕೊಳ್ಳುತ್ತೀವಾ? ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್​ಗೆ ಸಿದ್ದರಾಮಯ್ಯರ ಪೆನ್​ಡ್ರೈವ್​ ಕೊಟ್ಟ ಆ ಹೆಣ್ಮಗಳು ಯಾರು? ಸಿದ್ದರಾಮಯ್ಯ ಎಲ್ಲಿ ದೂರು ಕೊಟ್ಟಿದ್ದಾರೆ, ಆ ಬಗ್ಗೆ ಮಾಹಿತಿ ಇಲ್ಲ. ಎಫ್​ಐಆರ್​ ಆದ ಮೇಲೆ ಅಪ್ಡೇಟ್ ಆಗಬೇಕು, ಯಾಕೆ ಆಗಿಲ್ಲ? ಸಿದ್ದರಾಮಯ್ಯರನ್ನು ಯಾಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರು? ಸಿದ್ದರಾಮಯ್ಯ ಅವರೇ ಹರಕೆ ಕುರಿ ಆಗಬೇಡಿ, ಧೈರ್ಯವಾಗಿ ಎದುರಿಸಿ. ಈ ಸರ್ಕಾರ ಕಿತ್ತು ಹಾಕುವ ಸಮಯ ಬಂದಿದೆ. ನಾನೂ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ ನಿಮ್ಮ ರೀತಿ ವಿಡಿಯೋ ಇಟ್ಟುಕೊಂಡಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಸಿದ್ದರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದೆಂದು ರಮೇಶ್​​ ಹೇಳಿದ್ದರು’

ಸ್ಟಿಂಗ್​ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದು ಯಾರು? ಸ್ಟಿಂಗ್ ಆಪರೇಷನ್ ವಿಚಾರವನ್ನು ನಾನು ಚರ್ಚಿಸಿದ್ನಾ? ಸಂಪುಟದಲ್ಲಿ ನಡೆದ ರಹಸ್ಯವನ್ನು ಮಾಧ್ಯಮಗಳಲ್ಲಿ ಬಿಟ್ಟಿದ್ಯಾರು? ಸ್ಟಿಂಗ್ ಫೈಲ್​ ಸಂಪುಟ ಸಭೆಗೆ ತೆಗೆದುಕೊಂಡು ಹೋಗಿದ್ಯಾರು? ನೈಸ್ ಅಕ್ರಮ ಹೊರಗೆ ಬರಬಾರದೆಂದು ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದೆಂದು ಈ ಹಿಂದೆ ರಮೇಶ್​ ಜಾರಕಿಹೊಳಿ ಅವರೇ ಎಚ್ಚರಿಸಿದ್ದರು. ರಾಜ್ಯದ ಜನರಿಗೆ ಕೇಳುತ್ತೇನೆ, ವಿಕೃತಿ ಮನಸ್ಸಿನ ಸಿಎಂ ಬೇಕಾ? ನಾನು ಆರಾಮಾಗಿ ನಿದ್ದೆ ಮಾಡ್ತೇನೆ, ನಿದ್ದೆಗೆಡುತ್ತಿರುವುದು ನೀವು ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:07 pm, Thu, 15 October 26

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ