ಇಡೀ ಸಚಿವ ಸಂಪುಟ ಪಾಕ್ ಪರ ಘೋಷಣೆ ಕೂಗಿದವರ ಪರವಿದೆ: ಕೋಟ ಶ್ರೀನಿವಾಸ್ ಪೂಜಾರಿ

ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್​ನ ನಾಸೀರ್ ಹುಸೇನ್ ಬೆಂಬಲಿಗನೊಬ್ಬ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬೀಳುತ್ತಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಇಡೀ ಸಚಿವ ಸಂಪುಟ ಪಾಕ್ ಪರ ಘೋಷಣೆ ಕೂಗಿದವರ ಪರವಿದೆ ಎಂದು ಆರೋಪಿಸಿದೆ.

ಇಡೀ ಸಚಿವ ಸಂಪುಟ ಪಾಕ್ ಪರ ಘೋಷಣೆ ಕೂಗಿದವರ ಪರವಿದೆ: ಕೋಟ ಶ್ರೀನಿವಾಸ್ ಪೂಜಾರಿ
ಇಡೀ ಸಚಿವ ಸಂಪುಟ ಪಾಕ್ ಪರ ಘೋಷಣೆ ಕೂಗಿದವರ ಪರವಿದೆ ಎಂದು ಆರೋಪಿಸಿದ ಕೋಟ ಶ್ರೀನಿವಾಸ್ ಪೂಜಾರಿ
Follow us
| Updated By: Rakesh Nayak Manchi

Updated on: Mar 01, 2024 | 12:12 PM

ಬೆಂಗಳೂರು, ಮಾ.1: ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ (Congress)​ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗನೊಬ್ಬ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ (Pro-Pak Slogan) ಕೂಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ (BJP) ಮುಗಿಬೀಳುತ್ತಿದೆ. ಇಡೀ ಸಚಿವ ಸಂಪುಟ ಪಾಕ್ ಪರ ಘೋಷಣೆ ಕೂಗಿದವರ ಪರವಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojary) ಆರೋಪಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿಚಾರವಾಗಿ ಮಾತನಾಡಿದ ಅವರು, ಅಲ್ಲೂ ಇಲ್ಲೋ ಇಂತಹ ನಡೆಯುತ್ತಿತ್ತು. ನೋವಿನ ಸಂಗತಿ ಅಂದರೆ, ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದಲ್ಲಿ ಘೋಷಣೆ ಮೊಳಗಿದೆ ಎಂದರು.

ಪ್ರಕರಣ ನಡೆದ 60 ಗಂಟೆಗಳು ಕಳೆದಿವೆ. ಈವರೆಗೂ ಯಾರನ್ನು ಬಂಧಿಸಿಲ್ಲ. ಇಡೀ ಸಚಿವ ಸಂಪುಟ ಘೋಷಣೆ ಪರ ಕೂಗಿದವರ ಪರವಿದ್ದಾರೆ ಎಂದು ಹೇಳಿದ ಶ್ರೀನಿವಾಸ್ ಪೂಜಾರಿ, ನೀವು (ಕಾಂಗ್ರೆಸ್) ಶತ್ರು ರಾಷ್ಟ್ರ ಅನ್ನುವುದನ್ನು ಒಪ್ಪಿಕೊಳ್ಳಿ ಎಂದರೆ, ಅದು ನಮ್ಮ ನೆರೆ ರಾಷ್ಟ್ರ ಎನ್ನುತ್ತಾರೆ ಎಂದರು. ಬಿಜೆಪಿಗೆ ಪಾಕಿಸ್ತಾನ ಶತ್ರು ರಾಷ್ಟ್ರ ಇರಬಹುದು. ಆದರೆ, ನಮಗಲ್ಲ. ಪಾಕ್ ನಮ್ಮ ನೆರೆಯ ರಾಷ್ಟ್ರ ಎಂದು ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಪರಿಷತ್​ನಲ್ಲಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: FSL ವರದಿ ಬಹಿರಂಗಪಡಿಸಲು ಮೀನಾಮೇಷ; ಸರ್ಕಾರದ ಮೇಲೆ ಆರ್ ಅಶೋಕ ಅನುಮಾನ

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಾಸೀರ್ ಹುಸೇನ್ ಎಂಬುವವರು ಘಟನೆಯನ್ನು ಖಂಡಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ ಶ್ರೀನಿವಾಸ್ ಪೂಜಾರಿ, ನಿನ್ನೆ ನಾವು ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ಕೊಡಿಸುತ್ತೇನೆ ಎಂದಿದ್ದಾರೆ. ಅದು ನಮಗೆ ತೃಪ್ತಿ ತಂದಿದೆ ಎಂದರು.

ಕೇಂದ್ರ ಸರ್ಕಾರದ ಬಗ್ಗೆ ಜನರಿಗೆ ಸುಳ್ಳು ಮಾಹಿತಿ

ನಿನ್ನೆ ನಡೆದ ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರ್ಕಾರ ಪ್ರತಿ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಅಕ್ಕಿಯಿಂದಲೇ ಕಾಂಗ್ರೆಸ್ ಅನ್ನಭಾಗ್ಯ ಕಾರ್ಯಕ್ರಮ ಮಾಡಿದೆ ಎಂದರು.

ಬಿಜೆಪಿ ಸಂವಿಧಾನ ವಿರೋಧಿ ಅಂತಾರೆ. ಮೊನ್ನೆ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಸಂವಿಧಾನದ ಸಭೆ ನಡೆಸಿದ್ದಾರೆ. ನಿತಾಶ ಕೌಲ್ ಎಂಬವರನ್ನು ವಿದೇಶದಿಂದ ಕರೆಸಿ ಭಾಷಣ ಮಾಡಿಸಲು ಮುಂದಾಗಿದ್ದರು. ಸಂವಿಧಾನಕ್ಕೆ ಮೋಸ ಮಾಡಿದವರು ಯಾರಾದರೂ ಇದ್ದರೇ, ಅದು ಕಾಂಗ್ರೆಸ್‌ನವರು ಮಾತ್ರ ಎಂದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ: 7 ಮಂದಿಯ ವಿಚಾರಣೆ ನಡೆಸಿದ ಪೊಲೀಸರು

ಬ್ರಿಟಿಷ್ ಬರಹಗಾರ್ತಿಯಾಗಿರುವ ನಿತಾಶಾ ಕೌಲ್ ಭಾರತದ ವಿರುದ್ಧ ಅಜೆಂಡಾ ಹೊಂದಿದ್ದಾರೆ ಎನ್ನುವ ಆರೋಪವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಸಭೆಗೆ ಭಾಷಣ ಮಾಡಲು ಕಾಂಗ್ರೆಸ್ ಸರ್ಕಾರ ನಿತಾಶ ಕೌಲ್ ಅವರಿಗೆ ಆಹ್ವಾನ ನೀಡಿತ್ತು. ಇದನ್ನು ವಿಹೆಚ್​ಪಿ ವಿರೋದಿಸಿತ್ತು. ಅಲ್ಲದೆ, ಸಂಘಟನೆಯ ನಾಯಕ ಗಿರೀಶ್ ಭಾರದ್ವಾಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಒಸಿಐ ಕಾರ್ಡ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ನಮ್ಮ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ದುರುದ್ದೇಶಪೂರಿತ ಅಜೆಂಡಾದೊಂದಿಗೆ ಅವಳು ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಾಳೆ. ಭಾರತದಲ್ಲಿನ ಯಾವುದೇ ಕಾರ್ಯಕ್ರಮಗಳಿಗೆ ಡಾ ಕೌಲ್ ಅವರನ್ನು ಅತಿಥಿಯಾಗಿ ಆಹ್ವಾನಿಸುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಭಾರದ್ವಾಜ್ ಪತ್ರದಲ್ಲಿ ತಿಳಿಸಿದ್ದರು.

ಬೇಸರದಲ್ಲಿ ಕಾಂಗ್ರೆಸ್ ಶಾಸಕರು

ಕಾಂಗ್ರೆಸ್ ಸರ್ಕಾರದಲ್ಲಿ 500 ಮೀ ರಸ್ತೆ ಹಾಕಲು ದುಡ್ಡಿಲ್ಲ. ಶಾಸಕರು ಗೆದ್ದವರು ಬೇಸರದಲ್ಲಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಇಡೀ ಸದನದಲ್ಲಿ ಸುಳ್ಳು ಹೇಳಲು ಸರ್ಕಾರ ಬಳಕೆ ಮಾಡಿಕೊಂಡಿದೆ ಎಂದು ಕೋಟಿ ಶ್ರೀನಿವಾಸ್ ಪೂಜಾರಿ ಹೇಳಿದರು. ಈ ಬಾರಿಯ ಅಧಿವೇಶನವನ್ನು ಸಿಎಂ ಸಿದ್ಧರಾಮಯ್ಯ ಹಾಗೂ ಸರ್ಕಾರ ಸುಳ್ಳು ಮಾಹಿತಿ ನೀಡಲು ಬಳಸಿಕೊಂಡಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಸಮಪರ್ಕ ಅನುಷ್ಠಾನಕ್ಕೆ ಒತ್ತು ನೀಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಹಣಕಾಸಿನ ಕೊರತೆ ಎದುರಿಸುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಇದೇ ವಿಚಾರವಾಗಿ ಅಸಾಮಾಧಾನ ಹೊರಹಾಕಿದ್ದರು.

ಕಾಂತರಾಜು ವರದಿಯೋ? ಡಾ. ಹೆಗ್ಡೆ ವರದಿಯೋ?

ಕಾಂತರಾಜು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ. ಆದರೆ, ಇದು ಕಾಂತರಾಜು ವರದಿಯೋ ಅಥವಾ ಡಾ ಹೆಗ್ಡೆ ವರದಿಯೋ ಅನ್ನೋದನ್ನ ಮೊದಲು ಹೇಳಬೇಕು ಎಂದು ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಈ ಹಿಂದೆ ದ್ವಾರಕಾನಾಥ್ ವರದಿ ಕೊಟ್ಟಾಗ ಸರ್ಕಾರಕ್ಕೆ ಸಲ್ಲಿಸುವುದರ ಜತೆಗೆ ವರದಿ ಬಹಿರಂಗ ಮಾಡಿದ್ದರು. ಈಗ ಸಿಎಂ ಸಿದ್ದರಾಮಯ್ಯ ಸಹ ವರದಿಯನ್ನ ಬಹಿರಂಗ ಪಡಿಸದಂತೆ ಹೇಳಿದ್ದಾರೆ ಎಂದರು.

ಸಿಎಂ ಅವರು ರಾಜಕೀಯ ಮಾಡುತ್ತಾ ಇದ್ದಾರೆ ಅಷ್ಟೇ. ಅತ್ತ ದಾವಣಗೆರೆ ಹಾಗೂ ಕನಕಪುರದಿಂದ ಸಿಡಿಲು ಗುಡುಗು ಬಂದಿದೆ. ಶಾಮನೂರು ಶಿವಶಂಕರಪ್ಪ ಹಾಗೂ ಡಿಕೆ ಶಿವಕುಮಾರ್ ಭಯದಿಂದ ಸಿಎಂ ವರದಿ ಮುಚ್ಚಿಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ವರದಿ ಬಹಿರಂಗ ಪಡಿಸಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ