AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಪರ ಘೋಷಣೆ ಪ್ರಕರಣ: FSL ವರದಿ ಬಹಿರಂಗಪಡಿಸಲು ಮೀನಾಮೇಷ; ಸರ್ಕಾರದ ಮೇಲೆ ಆರ್ ಅಶೋಕ ಅನುಮಾನ

ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪಾಕ್ ಪರ ಘೋಷಣೆ ಕೂಗಿರುವ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಧ್ವನಿ ಪರಿಶೀಲನೆಗಾಗಿ ವಿಡಿಯೋವನ್ನು ಎಫ್​ಎಸ್​ಎಲ್​ಗೆ ಕಳುಸಿತ್ತು. ಈ ವರದಿಯೂ ಪೊಲೀಸರ ಕೈಸೇರಿದೆ. ಆದರೆ, ಇದುವರೆಗೆ ವರದಿ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ಮೇಲೆ ವಿಪಕ್ಷ ನಾಯಕ ಆರ್.ಅಶೋಕ ಅನುಮಾನ ವ್ಯಕ್ತಪಡಿಸಿದ್ದಾರೆ.

ಪಾಕ್ ಪರ ಘೋಷಣೆ ಪ್ರಕರಣ: FSL ವರದಿ ಬಹಿರಂಗಪಡಿಸಲು ಮೀನಾಮೇಷ; ಸರ್ಕಾರದ ಮೇಲೆ ಆರ್ ಅಶೋಕ ಅನುಮಾನ
ಪಾಕ್ ಪರ ಘೋಷಣೆ ಪ್ರಕರಣ: FSL ವರದಿ ಬಹಿರಂಗಪಡಿಸಲು ಮೀನಾಮೇಷ; ಸರ್ಕಾರದ ಮೇಲೆ ಆರ್ ಅಶೋಕ ಅನುಮಾನ
TV9 Web
| Updated By: Rakesh Nayak Manchi|

Updated on: Mar 01, 2024 | 10:39 AM

Share

ಬೆಂಗಳೂರು, ಮಾ.1: ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪಾಕ್ ಪರ ಘೋಷಣೆ ಕೂಗಿರುವ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೈಗೆ ವಿಡಿಯೋದ ಎಫ್​ಎಸ್​ಎಲ್ (FSL) ವರದಿ ಸೇರಿ ಹಲವು ಗಂಟೆಗಳು ಕಳೆದರೂ ವರದಿ ಬಹಿರಂಗಪಡಿಸಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ಮೇಲೆ ವಿಪಕ್ಷ ನಾಯಕ ಆರ್.ಅಶೋಕ (R Ashoka) ಅನುಮಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ಎಫ್ಎಸ್ಎಲ್ ವರದಿ ಕೈಸೇರಿ 5-6 ಗಂಟೆ ಕಳೆದಿದ್ದರೂ ಇನ್ನೂ ವರದಿಯನ್ನ ಬಹಿರಂಗಪಡಿಸಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಆರ್ ಅಶೋಕ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ: 7 ಮಂದಿಯ ವಿಚಾರಣೆ ನಡೆಸಿದ ಪೊಲೀಸರು

ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ ಕಾಂಗ್ರೆಸ್ ಪಕ್ಷ ನಿಜವಾಗಿಯೂ ದೇಶಪ್ರೇಮಿಗಳ ಪರ ಇದೆಯೋ ಅಥವಾ ದೇಶದ್ರೋಹಿಗಳ ಪರ ಇದೆಯೋ ಎಂಬುದನ್ನು ಕನ್ನಡಿಗರು ನಿರ್ಧಾರ ಮಾಡುತ್ತಾರೆ ಎಂದು ಅಶೋಕ ಹೇಳಿದ್ದಾರೆ.

ಆರ್.ಅಶೋಕ ಟ್ವೀಟ್

ಎಫ್​ಎಸ್​ಎಲ್​ಗೆ ಮತ್ತಷ್ಟು ವಿಡಿಯೋಗಳ ಸಲ್ಲಿಕೆ

ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಈಗಾಗಲೇ ಒಂದು ವಿಡಿಯೋದ ಎಫ್​ಎಸ್​ಎಲ್ ವರದಿ ಪೊಲೀಸರ ಕೈಸೇರಿದೆ. ಈ ನಡುವೆ ಎಫ್​ಎಸ್​ಎಲ್​ಗೆ ಮತ್ತಷ್ಟು ವಿಡಿಯೋಗಳನ್ನು ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಇನ್ನಷ್ಟು ವಿಡಿಯೋಗಳನ್ನು ಪರೀಕ್ಷೆಗಾಗಿ ಎಫ್‌ಎಸ್ ಎಲ್​ಗೆ ಕಳುಹಿಸಿದ್ದಾರೆ. ಸದ್ಯ ಆಡಿಯೋ ಉಚ್ಚಾರಣೆ ಬಗ್ಗೆ ಪೊಲೀಸರು ಎಫ್​ಎಸ್​ಎಲ್​ನಿಂದ ಮೌಖಿಕ ಮಾಹಿತಿ ಪಡೆದಿದ್ದು, ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಸಂಪೂರ್ಣ ಎಫ್​ಎಸ್​ಎಲ್ ವರದಿ ಬರಲು ಮತ್ತಷ್ಟು ಸಮಯ ಅಗತ್ಯ ಇದೆ. ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿರುವ ಬಗ್ಗೆ ಧೃಡಪಡಬೇಕು. ಧೃಡ ಆದ ಕೂಡಲೇ ಕೂಗಿದವರು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕೆ ಅಲ್ಲಿದ್ದವರ ಎಲ್ಲರ ವಾಯ್ಸ್ ಸ್ಯಾಂಪಲ್ ಅನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ನಂತರ ವಿಧಾನಸೌಧದ ಆಡಿಯೋ ಜೊತೆ ಪೊಲೀಸರು ಸಂಗ್ರಹಿಸಿದ ವಾಯ್ಸ್ ಸ್ಯಾಂಪಲ್ ಅನಾಲಿಸಿಸ್ ನಡೆಸಲಾಗುತ್ತದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
VIDEO: ಸುಈಈಈಈ... ಪ್ಯಾಟ್ ಕಮಿನ್ಸ್ ವಾಟ್ ಎ ಕ್ಯಾಚ್
ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ
ಶಿವಕುಮಾರ್ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ: ಸೋಮಣ್ಣ
ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ
ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ: ಹಾಡಿನ ಮೂಲಕ ಸ್ವಾಗತಿಸಿದ ಶಿವಶ್ರೀ
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್
ಮ್ಯಾಕ್ಸ್ ನಿರ್ದೇಶಕನ ಜೊತೆ ಸುದೀಪ್ ಮತ್ತೊಂದು ಸಿನಿಮಾ; ಸುದ್ದಿಗೋಷ್ಠಿ ಲೈವ್