ಕಾಣೆಯಾಗಿದ್ದ ಬೆಂಗಳೂರಿನ ಟೆಕ್ಕಿ ಪತ್ತೆ: ಜೈಲಿಗೆ ಬೇಕಿದ್ರೂ ಹಾಕಿ ಮನೆಗೆ ಹೋಗಲ್ಲವೆಂದು ಅಳಲು
ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ವಿಪಿನ್ ಗುಪ್ತಾನನ್ನು ಕೊಡಿಗೇಹಳ್ಳಿ ಪೊಲೀಸರು ಪತ್ತೆ ಮಾಡಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನೊಯ್ಡಾದಿಂದ ಟೆಕ್ಕಿ ಕರೆತರಲಾಗಿದ್ದು, ವಿಚಾರಣೆ ವೇಳೆ ತಾನೇ ಮನೆ ಬಿಟ್ಟುಹೋಗಿದ್ದಾಗಿ ಹೇಳಿದ್ದಾರೆ. ನನ್ನ ಜೈಲಿಗೆ ಬೇಕಿದರೂ ಹಾಕಿ ಮನೆಗೆ ಹೋಗಲ್ಲವೆಂದು ಟಿಕ್ಕಿ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 16: ಇತ್ತೀಚೆಗೆ ನಾಪತ್ತೆಯಾಗಿದ್ದ ಮಾನ್ಯತಾ ಟೆಕ್ ಪಾರ್ಕ್ನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ (techie) ವಿಪಿನ್ ಗುಪ್ತಾರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನೊಯ್ಡಾದಿಂದ ಕೊಡಿಗೇಹಳ್ಳಿ ಪೊಲೀಸರು ಟೆಕ್ಕಿ ಕರೆತಂದಿದ್ದಾರೆ. ವಿಚಾರಣೆ ವೇಳೆ ತಾನೇ ಮನೆ ಬಿಟ್ಟುಹೋಗಿದ್ದಾಗಿ ಹೇಳಿದ್ದಾರೆ. ನನ್ನ ಜೈಲಿಗೆ ಬೇಕಿದ್ದರೂ ಹಾಕಿ ನಾನು ಮನೆಗೆ ಹೋಗಲ್ಲವೆಂದು ಪೊಲೀಸರು ಮುಂದೆ ಅಳಲು ತೊಡಿಕೊಂಡಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪತ್ನಿಯಿಂದ ವಿಪಿನ್ಗೆ ಮಾನಸಿಕ ಹಿಂಸೆ
ಟೆಕ್ಕಿ ವಿಪಿನ್ ಮತ್ತು ಆತನ ಪತ್ನಿ ನಡುವೆ ವಯಸ್ಸಿನ ಅಂತರವಿತ್ತು. ವಿಪಿನ್ಗೆ 34 ವರ್ಷವಾದರೆ ಆತನ ಪತ್ನಿಗೆ 42 ವರ್ಷ. ವಿಪಿನ್ಗೆ ಪತ್ನಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಪತಿ ಕಂಟ್ರೋಲ್ ಮಾಡಲು ಮನೆಗೆ ಸಿಸಿಟಿವಿ ಹಾಕಿಸಿದ್ದಾರೆ. ಪತ್ನಿಯ ನಡೆಯಿಂದ ವಿಪಿನ್ ಸಾಕಷ್ಟು ನೊಂದಿದ್ದಾರೆ. ಹೀಗಾಗಿ ಆಕೆ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಹೋಗಿದ್ದಾರೆ. ಇನ್ನು ಪತಿ ಕಾಣೆಯಾದ ಬಗ್ಗೆ ಪತ್ನಿ ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ಪ್ರಧಾನಮಂತ್ರಿಗೂ ಟ್ಯಾಗ್ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿ ನಿಗೂಢ ನಾಪತ್ತೆ; ಹುಡುಕಿಕೊಡುವಂತೆ ಎಕ್ಸ್ ಮೂಲಕ ಪೊಲೀಸ್ ಆಯುಕ್ತರಿಗೆ ಪತ್ನಿ ಮನವಿ
ಲಖ್ನೋ ಮೂಲದ ವಿಪಿನ್ ಕೊಡಿಗೇಹಳ್ಳಿಯ ಟಾಟಾ ನಗರದಲ್ಲಿ ವಾಸವಿದ್ದರು. ಪತ್ನಿ, ಇಬ್ಬರು ಮಕ್ಕಳ ಸುಂದರ ಕುಟುಂಬ ಹೊಂದಿದ್ದಾರೆ. ಹೀಗಿದ್ದ ಟೆಕ್ಕಿ ನಾಪತ್ತೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ವಿಪಿನ್ ಮನೆಯಿಂದ ಹೋದ ಕೆಲ ಕ್ಷಣದಲ್ಲೇ ಮನೆ ಪಕ್ಕದ ಬ್ಯಾಂಕ್ನಲ್ಲಿ 1 ಲಕ್ಷ 80 ಸಾವಿರ ರೂ. ಹಣ ಡ್ರಾ ಮಾಡಿದ್ದರು. ಯಾರಿಗೂ ಗೊತ್ತಾಗದ ರೀತಿ ಬಾಗಿಲು ತೆರೆದು ಹೋಗಿದ್ದು, ಬೈಕ್ ಏರಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವಾರವಾದ್ರೂ ಪತಿ ಸುಳಿವಿಲ್ಲದೆ ಪತ್ನಿ ಕಂಗೆಟ್ಟಿದ್ದರು.
ಇದನ್ನೂ ಓದಿ: ಭಾರಿ ಮುಂಗಾರು ಮಳೆ ಮಧ್ಯೆಯೂ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ!
ವಿಪಿನ್ಗೆ ಸೋಲೋ ರೈಡ್ ಹೋಗುವ ಹವ್ಯಾಸ. ಹಲವು ಬಾರಿ ಹೀಗೆ ಸೋಲೋ ರೈಡ್ ಹೋಗಿ ಊರೂರು ಸುತ್ತಿ ವಾಪಸ್ ಆಗುತ್ತಿದ್ದರು. ಆದರೆ ಈ ಬಾರಿ ಮೊಬೈಲ್ ಕೂಡ ಸ್ವಿಚ್ ಆಪ್ ಆಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ವಿಪಿನ್ ಪತ್ನಿಗೆ ಮೊಬೈಲ್ ಗಿಫ್ಟ್ ಕೊಡಲು ಪ್ಲ್ಯಾನ್ ಮಾಡಿದ್ದು, ಅದಕ್ಕಾಗೇ ಹಣ ಡ್ರಾ ಮಾಡಿದ್ದರು. ಈಗ ಕಾಣ್ತಿಲ್ಲ ಅಂದ್ರೆ ಇದರ ಹಿಂದೆ ಯಾರದ್ದೋ ಕೈವಾಡ ಇದೆ ಅಂತ ಪತ್ನಿ ಶ್ರೀಪರ್ಣ ಅನುಮಾನ ವ್ಯಕ್ತಪಡಿಸಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಕೊಡಿಗೇಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಟೆಕ್ಕಿಯನ್ನು ಪತ್ತೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.