ಅವ್ಯವಸ್ಥೆಯ ಆಗರವಾದ ತುಮಕೂರು ಜಿಲ್ಲಾಸ್ಪತ್ರೆ; ಬೆಡ್ ಸಿಗದೆ ನೆಲದ ಮೇಲೆ ನರಳಾಡಿದ ಬಾಣಂತಿ
ಪಾನಮತ್ತನಾಗಿ ಕರ್ತವ್ಯಕ್ಕೆ ಬಂದ ಶಿಕ್ಷಕನನ್ನು ಅಮಾನತು ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸಕೆರೆ ಸರ್ಕಾರಿ ಶಾಲೆ ಶಿಕ್ಷಕ ಕಾಂತರಾಜು ಅಮಾನತಾದ ಶಿಕ್ಷಕ.
ತುಮಕೂರು: ಬೆಡ್ ಸಿಗದೆ ಬಾಣಂತಿ (Pregnant women) ನೆಲದ ಮೇಲೆ ಮಲಗಿರುವಂತಹ ಅಮಾನವೀಯ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೊಸಕೆರೆ ಗ್ರಾಮದ ಸುಧಾ ಬೆಡ್ ಸಿಗದೆ ನರಳಾಡುತ್ತಿರುವ ಬಾಣಂತಿ. ತುಮಕೂರು ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. 15 ದಿನಗಳ ಹಿಂದೆ ಡೆಲವರಿ ಬಳಿಕ ಊರಿಗೆ ತೆರಳಿದ್ದ ಬಾಣಂತಿ, ಹೆರಿಗೆಯಾದ ಕೆಲ ದಿನದಿಂದ ಮಗುವಿನ ಹೊಕ್ಕಳ ಬಳಿಯಿಂದ ರಕ್ತಸ್ರಾವವಾಗಿದೆ. ರಕ್ತ ಸ್ರಾವದಿಂದ ಆತಂಕಗೊಂಡ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ನವಜಾತ ಶಿಶುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಣಂತಿಗೆ ಮಾತ್ರ ಯಾವುದೇ ವ್ಯವಸ್ಥೆ ಇಲ್ಲ. ಶಿಶುಗೆ ಬಿಳಿ ರಕ್ತಕಣ ಕೊರತೆ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೊಷಕರು ಬಿಳಿ ರಕ್ತ ಕಣ ತಂದರು ವೈದ್ಯರು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪ ಮಾಡಿದ್ದಾರೆ. ಗುಬ್ಬಿ ತಾಲೂಕಿನ ಹೊಸಕೆರೆಯ ಸುಧಾ ಕುಟುಂಬಸ್ಥರು ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪಾವಮತ್ತನಾಗಿ ಕರ್ತವ್ಯಕ್ಕೆ ಬಂದ ಶಿಕ್ಷಕ ಅಮಾನತು:
ತುಮಕೂರು: ಪಾನಮತ್ತನಾಗಿ ಕರ್ತವ್ಯಕ್ಕೆ ಬಂದ ಶಿಕ್ಷಕನನ್ನು ಅಮಾನತು ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸಕೆರೆ ಸರ್ಕಾರಿ ಶಾಲೆ ಶಿಕ್ಷಕ ಕಾಂತರಾಜು ಅಮಾನತಾದ ಶಿಕ್ಷಕ. ಕಳೆದ ತಿಂಗಳಷ್ಟೇ ರಾಮನಗರ ಜಿಲ್ಲೆಯಿಂದ ಕುಣಿಗಲ್ ತಾಲೂಕಿಗೆ ವರ್ಗಾವಣೆಯಾಗಿದ್ದ ಕಾಂತರಾಜು, ನಿನ್ನೆ ಪಾನಮತ್ತರಾಗಿ ಕರ್ತವ್ಯಕ್ಕೆ ಬಂದಿದ್ದಾರೆ. ಶಿಕ್ಷಕ ವರ್ತನೆ ಕಂಡು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು. ಸದಸ್ಯರು ಮತ್ತು ಗ್ರಾಮಸ್ಥರು ದೂರು ನೀಡಿದ್ದರು. ಪರಿಶೀಲನೆ ಬಳಿಕ ಬಿಇಒ ತಿಮ್ಮರಾಜು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಕಬ್ಬಿಗೆ ಆಕಸ್ಮಿಕ ಬೆಂಕಿ:
ಕಲಬುರಗಿ: ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ. ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ತಿಪ್ಪಣ್ಣ ಮುದಬುಳ, ಬಸವರಾಜ ಪಂಚಾಳ, ಚಂದ್ರಕಾಂತ ಸೇರಿದಂತೆ ಹಲವು ರೈತರ ಕಬ್ಬು ಭಸ್ಮ ಆಗಿದೆ. ಹದಿನೈದು ಎಕರೆಯಲ್ಲಿ ಸಮೃದ್ದಿಯಾಗಿ ಬೆಳೆದು ನಿಂತಿದ್ದ ಲಕ್ಷಾಂತರ ರೂ. ಮೌಲ್ಯದ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ. ಕಬ್ಬು ಉಳಿಸಿಕೊಳ್ಳಲು ಬೆಂಕಿ ಆರಿಸಲು ರೈತರು ಹರಸಾಹಸ ಪಟ್ಟಿದ್ದಾರೆ. ಕಣ್ಣ ಮುಂದೆಯೇ ಸುಟ್ಟು ಹೋದ ಕಬ್ಬು ಬೆಳೆ ಕಂಡು ರೈತರು ಮರುಗುತ್ತಿದ್ದಾರೆ. ಕಬ್ಬು ಕಟಾವಿಗೆ ಬಂದರು, ಕಬ್ಬು ಕಟಾವು ಮಾಡದ ಸಕ್ಕರೆ ಕಾರ್ಖಾನೆಗಳು. ಒಣಗಿರೋ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
ಇದನ್ನೂ ಓದಿ:
Bengaluru: ಬೀದಿನಾಯಿಗಳ ಸಂತತಿ ತಡೆಯಲು 3 ವರ್ಷಗಳಲ್ಲಿ 15 ಕೋಟಿ ಖರ್ಚು; ಆದರೂ ಅವುಗಳ ಸಂಖ್ಯೆ ದುಪ್ಪಟ್ಟು!
Holi 2022: ‘ಹೋಳಿ ಪರಿಸರ ಸ್ನೇಹಿಯಾಗಿರಲಿ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ