AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honey Bee Attack: ಕುಣಿಗಲ್​ನಲ್ಲಿ ಹೆಜ್ಜೇನುಗಳಿಂದ ಮತ್ತೊಂದು ದುರಂತ, ರೈತ ಮತ್ತು ಎತ್ತುಗಳ ಸ್ಥಿತಿ ಗಂಭೀರ

ಕುಣಿಗಲ್ ತಾಲೂಕಿನ ಕೆಬ್ಬಳ್ಳಿ ಗ್ರಾಮದ ಬಳಿ ಎತ್ತಿನಗಾಡಿ ಓಡಿಸುತ್ತಿದ್ದ ರೈತನ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ರೈತ ಅಸ್ವಸ್ಥರಾಗಿದ್ದಾರೆ. ಹಾಗೂ ಎತ್ತುಗಳ ಮೇಲೂ ಹೆಜ್ಜೇನು ದಾಳಿ ನಡೆದಿದ್ದು ಸ್ಥಿತಿ ಗಂಭೀರವಾಗಿದೆ.

Honey Bee Attack: ಕುಣಿಗಲ್​ನಲ್ಲಿ ಹೆಜ್ಜೇನುಗಳಿಂದ ಮತ್ತೊಂದು ದುರಂತ, ರೈತ ಮತ್ತು ಎತ್ತುಗಳ ಸ್ಥಿತಿ ಗಂಭೀರ
ಕುಣಿಗಲ್​ನಲ್ಲಿ ಹೆಜ್ಜೇನುಗಳಿಂದ ಮತ್ತೊಂದು ದುರಂತ
TV9 Web
| Edited By: |

Updated on:Jan 09, 2023 | 11:07 AM

Share

ತುಮಕೂರು: ಕಳೆದ ಕೆಲ ದಿನಗಳ ಹಿಂದೆ ತುಮಕೂರಿನ ಕುಣಿಗಲ್ ಪಟ್ಟಣದ ಸ್ಟಡ್ ಫಾರಂನಲ್ಲಿ ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದ್ದವು. ಈಗ ಅದೇ ರೀತಿಯ ಮತ್ತೊಂದು ಘಟನೆ ಮರುಕಳಿಸಿದೆ. ಕುಣಿಗಲ್ ತಾಲೂಕಿನ ಕೆಬ್ಬಳ್ಳಿ ಗ್ರಾಮದ ಬಳಿ ಎತ್ತಿನಗಾಡಿ ಓಡಿಸುತ್ತಿದ್ದ ರೈತನ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ರೈತ ಅಸ್ವಸ್ಥರಾಗಿದ್ದಾರೆ. ಹಾಗೂ ಎತ್ತುಗಳ ಮೇಲೂ ಹೆಜ್ಜೇನು ದಾಳಿ ನಡೆದಿದ್ದು ಸ್ಥಿತಿ ಗಂಭೀರವಾಗಿದೆ.

ಎತ್ತಿನ ಗಾಡಿಯಲ್ಲಿ ಹುರುಳಿ ಕಾಯಿ ತುಂಬಿಸಿಕೊಂಡು ಹೋಗುತಿದ್ದ ರೈತ ರಮೇಶ್ ಮೇಲೆ ಹೆಜ್ಜೇನು ದಾಳಿ ಮಾಡಿದೆ. ದಾಳಿಯಿಂದಾಗಿ ರೈತ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಎತ್ತುಗಳ ಮೇಲೆ ಕೂಡು ಹೆಜ್ಜೇನು ದಾಳಿ ನಡೆದಿದ್ದು ಎತ್ತುಗಳ ಸ್ಥಿತಿ ಗಂಭೀರವಾಗಿದೆ. ಪಶು ಆಸ್ಪತ್ರೆಯಲ್ಲಿ ಎತ್ತುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರಿನಲ್ಲಿ ಕೆಲವೇ ದಿನಗಳ ಅಂತರದಲ್ಲಿ ಈ ರೀತಿಯ ಎರಡು ಘಟನೆಗಳು ನಡೆದಿದ್ದು ಜನ ಚಿಂತಿಸುವಂತಾಗಿದೆ. ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Santro Ravi: ಸ್ಯಾಂಟ್ರೋ ರವಿ ಸ್ಟೋರಿಯಲ್ಲಿ ಬಿಗ್ ಟ್ವಿಸ್ಟ್, ಬೆಂಗಳೂರು ಟು ಮೈಸೂರ್ ಕಹಾನಿ ಇಲ್ಲಿದೆ

ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿ

ತುಮಕೂರು: ಜಿಲ್ಲೆಯ ಕುಣಿಗಲ್ ಪಟ್ಟಣದ ಸ್ಟಡ್ ಫಾರಂ ನಲ್ಲಿ ವಂಶಾಭಿವೃದ್ಧಿಗೆಂದು 2 ಕೋಟಿಗೆ ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಎಂಬ ಹೆಸರಿನ ಕುದುರೆಗಳು ಸಾವನ್ನಪ್ಪಿದೆ.

ತಮ್ಮ ದೇಶಗಳಲ್ಲಿ ರೇಸ್​ನಲ್ಲಿ ತೋರಿದ ಸಾಧನೆ ಪರಿಗಣಿಸಿ ವಂಶಾಭಿವೃದ್ಧಿಗೆ ಬಳಕೆ ಮಾಡಲು ಇದನ್ನು ತರಲಾಗಿದ್ದು, ಇದೀಗ ಹೆಜ್ಜೆನು ದಾಳಿಗೆ ಬಲಿಯಾಗಿದೆ. ವಂಶಾಭಿವೃದ್ಧಿಗೆ ಬಳಸುತ್ತಿದ್ದ ತಲಾ ಒಂದು ಕೋಟಿಗೂ ಅಧಿಕ ಬೆಲೆ ಬಾಳುತ್ತಿದ್ದ ಎರಡು ಕುದುರೆಗಳು ಮೃತಪಟ್ಟಿದ್ದು, ಫಾರಂ ನಲ್ಲಿ ಶೋಕ ಮಡುಗಟ್ಟಿದೆ. ಕುದುರೆಗಳ ಸಾವಿನಿಂದ ಸ್ಟಡ್ ಫಾರಂನಲ್ಲಿ ಆತಂಕ ವ್ಯಕ್ತವಾಗಿದೆ. ಫಾರಂ ನಲ್ಲಿ ಮೇಯುವಾಗ ಹೆಜ್ಜೆನು ದಾಳಿ‌ ಮಾಡಿದ್ದಾವೆ. ಈ ವೇಳೆ ಎರಡು ಕುದುರೆಗಳು ತೀವ್ರ ಅಸ್ವಸ್ಥಗೊಂಡಿದ್ದವು ಎನ್ನಲಾಗಿದೆ.

ಕುದುರೆಗಳಿಗೆ ಸ್ಟಡ್ ಫಾರಂನ ವೈದ್ಯರು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಹೆಸರಿನ ಈ ಕುದುರೆಗಳ ಅಂತ್ಯಕ್ರಿಯೆ ಸ್ಟಡ್ ಫಾರಂ ನಲ್ಲಿ ನಡೆದಿದೆ. ಏರ್ ಸಪೋರ್ಟ್ 2008 ರಲ್ಲಿ ಜನಿಸಿದ್ದು, ಸನಸ್ ಪರ್ ಅಕ್ಷಮ್ 2013 ರಲ್ಲಿ ಜನಿಸಿತ್ತು ಎನ್ನಲಾಗಿದೆ. ಈ ಎರಡು ಕುದುರೆಗಳು ತಮ್ಮ ತಮ್ಮ ದೇಶಗಳಲ್ಲಿ ಐದು ವರ್ಷಗಳ ಕಾಲ ರೇಸ್​ನಲ್ಲಿ ತೋರಿದ ಸಾಧನೆ ಪರಿಗಣಿಸಿ ಕುಣಿಗಲ್ ಸ್ಟಡ್ ಫಾರಂ ಗೆ ವಂಶಾಭಿವೃದ್ಧಿಗಾಗಿ ಬಳಕೆ ಮಾಡಲು ತರಲಾಗಿತ್ತು. ಸದ್ಯ ಕುದುರೆಗಳ ಸಾವಿನಿಂದ ಸ್ಟಡ್ ಫಾರಂ ನ ನೌಕರರಲ್ಲಿ ಶೋಕ ಮನೆ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:07 am, Mon, 9 January 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್