
ತುಮಕೂರು: ಇದೇ ಫೆಬ್ರವರಿ 6 ರಂದು ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಮಿಸಲಿದ್ದಾರೆ. ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಹೆಚ್ಎಎಲ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಫೆಬ್ರವರಿ 6 ರಂದು ಬಾರಿ ಸರಕು ವಾಹನಗಳು, ಕೆಎಸ್ಆರ್ಟಿಸಿ ಬಸ್ಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ತುಮಕೂರು ಡಿಸಿ ವೈಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು-ಟಿಬಿ ಕ್ರಾಸ್-ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ ಗೆ ಸಂಚರಿಸುವುದು. ತಿಪಟೂರಿನಿಂದ ಬರುವ ವಾಹನಗಳು ಕೆಬಿ ಕ್ರಾಸ್-ತುರುವೇಕೆರೆ-ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸಬೇಕು ಎಂದು ಡಿಸಿ ವೈಎಸ್ ಪಾಟೀಲ್ ಆದೇಶಿಸಿದ್ದಾರೆ. ಹೆಚ್ಎಎಲ್ ಮುಂಭಾಗ ಬಾರಿ ವಾಹನಗಳ ನಿರ್ಭಂದಿಸಿ ಜಿಲ್ಲಾಡಳಿತ ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಿದೆ.
ಇದನ್ನೂ ಓದಿ: Bengaluru clean air projects: 140 ಕೋಟಿ ರೂ. ಯೋಜನೆಗಳೊಂದಿಗೆ ಬೆಂಗಳೂರಿಗೆ ಸಿಗಲಿದೆ ಸ್ವಚ್ಛ ಗಾಳಿ
ಕರ್ನಾಟಕ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಭೇಟಿ ಮಹತ್ವ ಪಡೆದುಕೊಂಡಿದೆ. ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಮೋದಿ ಆಗಮಿಸುತ್ತಿದ್ದು ತುಮಕೂರು ಜಿಲ್ಲೆಯಲ್ಲಿ ಮತಭೇಟೆಗೆ ಮೋದಿ ತಯಾರಿ ನಡೆಸಿದ್ದಾರೆ. ಮೋದಿ ಅವರು ಹೆಚ್ಎಎಲ್ ಉದ್ವಾಟನೆಗೆ ಆಗಮಿಸಲಿದ್ದು ಈಗಾಗಲೇ ಸಕಲ ತಯಾರಿ ನಡೆಸಲಾಗಿದೆ. ಫೆಬ್ರವರಿ 6 ರಂದು ಮಧ್ಯಾಹ್ನ 3.30 ಸುಮಾರಿಗೆ ಮೋದಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯಿರುವ ನೂತನ ಹೆಚ್ ಎಎಲ್ ಘಟಕಕ್ಕೆ ಆಗಮಿಸಿ ಹಲವು ಕಾರ್ಯಕ್ರಮಗಳ ಉದ್ವಾಟನೆ ನೇರವೇರಿಸಲಿದ್ದಾರೆ. ಜಲಜೀವನ್ ಮಿಷನ್ ಯೋಜನೆ ಜೊತೆಗೆ ತುಮಕೂರು ಸ್ಮಾರ್ಟ್ ಇಲಾಖೆ ಸಂಬಂದಿಸಿದ ಹಲವು ನೂತನ ಕಟ್ಟಡಗಳ ಉದ್ವಾಟನೆ ವರ್ಚುವಲ್ ಮೂಲಕ ಉದ್ವಾಟನೆ ಮಾಡಲಿದ್ದಾರೆ. ಇನ್ನೂ ಇದೇ ವೇಳೆ ಶಕ್ತಿ ಪ್ರದರ್ಶನಕ್ಕೂ ಬಿಜೆಪಿ ಸಜ್ಜಾಗಿದ್ದು ಸುಮಾರು ಐವತ್ತು ಸಾವಿರ ಜನರು ಸೇರಿಸುವ ನಿರಿಕ್ಷೇ ಇದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:36 am, Thu, 2 February 23