ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಕೊಬರಿ ಬೆಲೆಯದ್ದೇ ಚಿಂತೆ! ಅಹೋರಾತ್ರಿ ಧರಣಿ
Dry Coconut: ಕಲ್ಪತರು ನಾಡು ಎಂದೇ ಪ್ರಸಿದ್ಧವಾಗಿರುವ ತುಮಕೂರು ಜಿಲ್ಲೆಯಲ್ಲಿ ಈಗ ಕೊಬರಿ ಬೆಲೆಯದ್ದೇ ಚಿಂತೆ. ನಿಗದಿಯಾದ ಬೆಂಬಲ ಬೆಲೆಯೂ ಇಲ್ಲ, ಅತ್ತ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯೂ ಕೊಬರಿಗೆ ಸಿಗ್ತಿಲ್ಲ. ಜೊತೆಗೆ ತೆಂಗು, ಅಡಿಕೆಗೆ ರೋಗಗಳು ಬಂದಿದ್ದು ಶಾಸಕರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಾ ಆರೋಪಿಸಿದ್ದಾರೆ.

ಕಲ್ಪತರು ನಾಡು ಎಂದೇ ಪ್ರಸಿದ್ಧವಾಗಿರುವ ತುಮಕೂರು ಜಿಲ್ಲೆಯಲ್ಲಿ ಈಗ ಕೊಬರಿ (Dry Coconut) ಬೆಲೆಯದ್ದೇ ಚಿಂತೆಯಾಗಿದೆ. ನಿಗದಿಯಾದ ಬೆಂಬಲ ಬೆಲೆಯೂ ಇಲ್ಲ, ಅತ್ತ ಸೂಕ್ತ ಮಾರುಕಟ್ಟೆ ಬೆಲೆಯೂ (Dry Coconut Market prices) ಕೊಬರಿಗೆ ಸಿಗ್ತಿಲ್ಲ. ಹೀಗಾಗಿ ತುರುವೇಕೆರೆಯಲ್ಲಿ ಜೆಡಿಎಸ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗಿದೆ. ಹೌದು.. ಕಲ್ಪತರು ನಾಡು ತುಮಕೂರು (Tumkur) ಜಿಲ್ಲೆಯ ರೈತರಿಗೆ ಕೊಬರಿ ಬೆಲೆಯದ್ದೇ ಚಿಂತೆಯಾಗಿದೆ. ಸೂಕ್ತ ಬೆಲೆ ಸಿಗದೇ ಕೊಬರಿ ನಂಬಿ ಜೀವನ ಮಾಡ್ತಿದ್ದ ಲಕ್ಷಾಂತರ ರೈತರು ಈಗ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೊಬ್ಬರಿ ಮಾರಾಟವಾಗಿದೆ. ಇದರಿಂದ ಲಕ್ಷಾಂತರ ರೈತರಿಗೆ (Coconut growers) ನಷ್ಟವಾಗಿದೆ. ಕೊಬರಿಗೆ ಮತ್ತಷ್ಟು ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ತುರುವೇಕೆರೆಯಲ್ಲಿ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.
ಇನ್ನು ನೂರಾರು ಸಂಖ್ಯೆಯಲ್ಲಿ ಧರಣಿಯಲ್ಲಿ ಭಾಗವಹಿಸಿದ್ದು, ಧರಣಿಯಲ್ಲಿ ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪ ಭಾಗಿಯಾಗಿ ಸರ್ಕಾರ ಹಾಗೂ ಸ್ಥಳೀಯ ಶಾಸಕ ಮಸಾಲೆ ಜಯರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಕೊಬರಿ ಬೆಲೆ 18 ಸಾವಿರ ಇತ್ತು, ಈ ಬಾರಿ 9 ಸಾವಿರಕ್ಕೆ ಕುಸಿದಿದೆ. ಹೀಗಾಗಿ ಸರ್ಕಾರ ಕನಿಷ್ಠ 15 ಸಾವಿರ ಬೆಲೆ ನೀಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ:
ಕೊಬ್ಬರಿ ಬೆಳೆಗಾರರ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ: ಪ್ರತಿ ಕ್ವಿಂಟಾಲ್‌ಗೆ 11,750 ರೂ. ಬೆಂಬಲ ಬೆಲೆ ನಿಗದಿ
ಅಲ್ಲದೇ ತುರುವೇಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ರೈತರು ಬೇಸತ್ತಿದ್ದಾರೆ. ಸರ್ಕಾರ ಮೂರು ಫೇಸ್ ವಿದ್ಯುತ್ ನೀಡ್ತಿಲ್ಲ. 26,000 ರೂ ಡೆಪಾಸಿಟ್ ಕಟ್ಟಿಸಿಕೊಂಡಿರೂ ಟಿಸಿ ನೀಡಿಲ್ಲ. ರೈತರು ಇದರಿಂದಲೂ ರೋಸಿ ಹೋಗಿದ್ದಾರೆ ಅಂತಾ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ತೆಂಗು, ಅಡಿಕೆಗೆ ರೋಗಗಳು ಬಂದಿದ್ದು ಶಾಸಕರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಾ ಆರೋಪಿಸಿದ್ದಾರೆ.
ಒಟ್ಟಾರೆ ಜಿಲ್ಲೆಯ ಬಹುತೇಕ ಮೂರು ಫೇಸ್ ವಿದ್ಯುತ್ ಹಾಗೂ ಟಿಸಿಗಳನ್ನ ಸರ್ಕಾರ ಸಮರ್ಪಕವಾಗಿ ನೀಡ್ತಿಲ್ಲ. ಜೊತೆಗೆ ಕೊಬರಿ ಬೆಳೆಗೆ ಬೆಂಬಲ ಬೆಲೆಯೂ ಇಲ್ಲ. ಸೂಕ್ತ ಬೆಲೆಯೂ ಇಲ್ಲವಾಗಿದೆ. ಇದರಿಂದ ರೈತರು ಬೇಸತ್ತು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
