ಶಾಲಾ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ, ವಿದ್ಯಾರ್ಥಿಗೆ ಹಲ್ಲೆ

ತುಮಕೂರಿನ ಹುಳಿಯಾರು ಸರ್ಕಾರಿ ಶಾಲೆಯಲ್ಲಿ ಅನ್ಯಕೋಮಿನ ಯುವಕರ ಗುಂಪು ಬಾಲಕಿಯರ ಶೌಚಾಲಯದ ಮೇಲೆ ಕಲ್ಲು ತೂರಿದೆ. ಕಲ್ಲು ತೂರಾಟವನ್ನು ಪ್ರಶ್ನಿಸಿದ 10ನೇ ತರಗತಿ ವಿದ್ಯಾರ್ಥಿಯನ್ನು ಥಳಿಸಲಾಗಿದೆ. ಪೊಲೀಸರು ದೂರಿನ ಮೇರೆಗೆ ಐವರನ್ನು ಬಂಧಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಗೃಹ ಸಚಿವರ ತವರು ಜಿಲ್ಲೆಯಲ್ಲಿ ನಡೆದಿರುವುದು ಆತಂಕ ಹುಟ್ಟುಹಾಕಿದೆ.

ಶಾಲಾ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ, ವಿದ್ಯಾರ್ಥಿಗೆ ಹಲ್ಲೆ
ಯುವಕರ ಗುಂಪು
Edited By:

Updated on: Mar 15, 2025 | 12:16 PM

ತುಮಕೂರು, ಮಾರ್ಚ್ 15: ಗೃಹ ಸಚಿವರ ತವರು ಜಿಲ್ಲೆಯಲ್ಲಿ ಅನ್ಯಕೋಮಿನ ಯುವಕರು ಗೂಂಡಾ ವರ್ತನೆ ತೋರಿದ್ದಾರೆ. ಹುಳಿಯಾರು ಸರ್ಕಾರಿ ಶಾಲೆಯ (Huliyaru Government School) ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಿದ್ದಾರೆ. ಕಲ್ಲು ತೂರಿದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ (Student) ಪುಂಡರ‌ ಗುಂಪು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಳಿಯರು ನಿವಾಸಿ ಮಹಬೂಬ್ ಷರಿಫ್, ಶಂಶುದ್ದೀನ್​, ಇರ್ಫಾನ್​, ಮುಬಾರಕ್​, ಮುದಾಸೀರ್, ಯಾಸೀನ್​, ತಾಝೀಮ್​ ಕಲ್ಲು ತೂರಿ, ಹಲ್ಲೆ ಮಾಡಿದ ಆರೋಪಿಗಳು.

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆಪಿಎಸ್​ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಶುಕ್ರವಾರ (ಮಾ.14)ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಪುಂಡರು ಕಲ್ಲು ಎಸೆಯುತ್ತಿದ್ದನ್ನು ಯಶ್ವಂತ್​ ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಶಾಲೆಯ ಆವರಣದೊಳಗೆ ನುಗ್ಗಿದ ಅನ್ಯಕೋಮಿನಿ 6-7ಜನ ಪುಂಡರು ಯಶ್ವಂತ್​ನನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಚಾರ ತಿಳಿದು ಕೂಡಲೆ ಶಾಲೆಯ ಮುಖ್ಯಾಪಾದ್ಯಯರು ಸ್ಥಳಕ್ಕೆ ದೌಡಾಯಿ, ಹಲ್ಲೆ ಮಾಡುವುದನ್ನು ತಡೆದು, ಯಶ್ವಂತ್​ನನ್ನು ರಕ್ಷಿಸಿದ್ದಾರೆ. ಬಳಿಕ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬರುವುದನ್ನು ಕಂಡ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್​ರ ಬೆನ್ನು ಹಾಗೂ ತಲೆಗೆ ತೀವ್ರಪೆಟ್ಟಾಗಿದೆ. ಗಾಯಾಳು ವಿದ್ಯಾರ್ಥಿ ಯಶ್ವಂತ್​ರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
ಕಾರವಾರದಲ್ಲಿ SSLC ವಿದ್ಯಾರ್ಥಿ, ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಸಾವು
ಕುಣಿಗಲ್: ದೊಡ್ಡಕೆರೆಯಲ್ಲಿ ಮಹಿಳಾ ಟೆಕ್ಕಿ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಸ್ನೇಹಿತನ ಜತೆ ಪರಾರಿ: ಪತಿ ದುರಂತ ಸಾವು

ಇದನ್ನೂ ಓದಿ: ಬಸ್​ನಲ್ಲಿ ಉಗಿದ ಮಹಿಳೆ: ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ

ಶಾಲಾ ಆಡಳಿತ ಮಂಡಳಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮಹಬೂಬ್ ಷರೀಫ್ ಹಾಗೂ ಆತನ ಸಹಚರ ಒಟ್ಟು 7 ಜನರ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಾದ ಬೆನ್ನಲ್ಲೆ ಐವರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಬಾಕಿ ಇಬ್ಬರ ಬಂಧನಕ್ಕೆ ಹುಳಿಯಾರು ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ