AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ: ದಾರುಣ ಅಂತ್ಯ ಕಂಡ ಯುವಕ

Road Accidents: ಹೊಸ ಬೈಕ್ ಖರೀದಿಸಿದ ಮರುದಿನವೇ ಟಿಪ್ಪರ್ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರಿನ ಪಾವಗಡದಲ್ಲಿ ನಡೆದಿದೆ. ಗೆಳೆಯನ ಜೊತೆಗೆ ಸ್ವಗ್ರಾಮಕ್ಕೆ ತೆರಳುವ ವೇಳೆ ಜವರಾಯನ ಅಟ್ಟಹಾಸಕ್ಕೆ 19 ವರ್ಷದ ಯುವಕ ಬಲಿಯಾಗಿದ್ದಾನೆ. ಮತ್ತೊಂದು ಘಟನೆಯಲ್ಲಿ, ಧಾರವಾಡದ ಬೇಲೂರು ಬಳಿ ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.

ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ: ದಾರುಣ ಅಂತ್ಯ ಕಂಡ ಯುವಕ
ಮೃತ ಯುವಕImage Credit source: Tv9 Kannada
Jagadisha B
| Edited By: |

Updated on: Jun 26, 2026 | 12:20 PM

Share

ಮುಖ್ಯಾಂಶಗಳು

  • ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಭೀಕರ ಅಪಘಾತ
  • ಹೊಸ ಬೈಕ್​​ ಖರೀದಿಸಿದ ಮರುದಿನವೇ ಯುವಕನ ದಾರುಣ ಸಾವು
  • ಪ್ರಾಣಾಪಾಯದಿಂದ ಬಚಾವ್​​ ಆಗಿರುವ ಹಿಂಬದಿ ಸವಾರ

ತುಮಕೂರು/ಧಾರವಾಡ, ಜೂನ್​​ 26: ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ ನಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ. ನಂದೀಶ್​​ ಕುಮಾರ್​​ (19) ಮೃತದುರ್ದೈವಿಯಾಗಿದ್ದು, ವೇಗವಾಗಿ ಬಂದ ಟಿಪ್ಪರ್​​ ಬೈಕ್​​ಗೆ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂದೀಶ್​​ ಮೂಲತಃ ಪಾವಗಡದ ದೊಡ್ಡಹಳ್ಳಿ ನಿವಾಸಿ ಎಂಬುದು ಗೊತ್ತಾಗಿದೆ.

ನಿನ್ನೆಯಷ್ಟೇ ಹೊಸ ಬೈಕ್​​ ಖರೀದಿ

ನಿನ್ನೆಯಷ್ಟೇ ಹೊಸ ಬೈಕ್​​ ಖರೀದಿಸಿದ್ದ ನಂದೀಶ್​​ ಕುಮಾರ್​​ ಸ್ನೇಹಿತನ ಜೊತೆ ಸ್ವಗ್ರಾಮಕ್ಕೆ ಬರುತ್ತಿದ್ದ. ಈ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್​​ಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ನಂದೀಶ್​​ ಮೃತಪಟ್ಟಿದ್ದರೆ ಹಿಂಬದಿ ಸವಾರ ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಾದ್ದಾನೆ. ಘಟನೆ ಸಂಬಂಧ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?; ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!

ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಹಳೇ ತೇಗೂರಿನ ಷಣ್ಮುಖ ಜೋಗಿ(28), ಉತ್ತರ ಪ್ರದೇಶ ಮೂಲದ ಸಾಗರ್​(30) ಮೃತ ದುರ್ದೈವಿಗಳಾಗಿದ್ದು, ಘಟನಾ ಸ್ಥಳಕ್ಕೆ ಗರಗ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೈರ್ ಬ್ಲಾಸ್ಟ್‌ ಆಗಿದ್ದ ಹಿನ್ನೆಲೆ ಲಾರಿ ಚಾಲಕ ಟೈರ್​​ ಬದಲಿಸುತ್ತಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಕ್ಯಾಂಟರ್​​ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us