AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್‌ ರೇವಣ್ಣ ಎಂದು ಪತ್ತೆಹಚ್ಚಿದ್ಹೇಗೆ ಗೊತ್ತಾ? ಸ್ಫೋಟಕ ಮಾಹಿತಿ ಬಹಿರಂಗ

ಕೆ.ಆರ್ ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. 4 ತಿಂಗಳ ಸುಧೀರ್ಘ ವಿಚಾರಣೆಯ ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ ಶಿಕ್ಷೆ ವಿಧಿಸಿದೆ. ಇನ್ನು 2024ರಲ್ಲಿ ಭಾರೀ ವೈರಲ್ ಆಗಿದ್ದ ಅಶ್ಲೀಲ ವಿಡಿಯೋಗಳಲ್ಲಿರುವುದು ಪ್ರಜ್ವಲ್ ರೇವಣ್ಣನೇ ಎಂದು ಪತ್ತೆಹಚ್ಚಿದ್ದೇ ಈ ಹೊಸ ತಂತ್ರಜ್ಞಾನ. ಭಾರತದಲ್ಲಿ ಇದು ಮೊದಲ ಪ್ರಯೋಗವಾಗಿದೆ. ಹಾಗಾದ್ರೆ, ಯಾವುದು ಆ ತಂತ್ರಜ್ಞಾನ? ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್‌ ರೇವಣ್ಣ ಎಂದು ಪತ್ತೆಹಚ್ಚಿದ್ಹೇಗೆ ಗೊತ್ತಾ? ಸ್ಫೋಟಕ ಮಾಹಿತಿ ಬಹಿರಂಗ
Prajwal Revanna
ರಮೇಶ್ ಬಿ. ಜವಳಗೇರಾ
|

Updated on:Aug 03, 2025 | 1:13 PM

Share

ಬೆಂಗಳೂರು, (ಆಗಸ್ಟ್ 03): ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಜ್ವಲ್ ರೇವಣ್ಣರದ್ದು (Prajwal Revanna) ಎನ್ನಲಾಗಿದ್ದ ಪೆನ್ಡ್ರೈವ್ನಲ್ಲಿದ್ದ ಅಶ್ಲೀಲ ವಿಡಿಯೋ (Obscene videos) ಭಾರೀ ವೈರಲ್ ಆಗಿದ್ದವು. ವಿಡಿಯೋಗಳಲ್ಲಿ ಇರುವುದು ಪ್ರಜ್ವಲ್ ರೇವಣ್ಣ ಅವರು ಎನ್ನುವುದನ್ನು ಕಂಡು ಹಿಡಿಯಲು ಎಸ್ಐಟಿ ಅಧಿಕಾರಿಗಳು ಹರಸಾಹಸವೇ ಮಾಡಿ ಕೊನೆಗೆ ವಿಡಿಯೋನಲ್ಲಿರುವುದು ಅವರೇ ಎಂದು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಪ್ರಜ್ವಲ್ಗೆ ಕೋರ್ಟ್ಜೀವಾವಧಿ ಶಿಕ್ಷೆ ವಿಧಿಸಿದೆ. ಹೌದು.. 2024ರಲ್ಲಿ ಭಾರೀ ವೈರಲ್ ಆಗಿದ್ದ ಅಶ್ಲೀಲ ವಿಡಿಯೋಗಳಲ್ಲಿರುವುದು ಪ್ರಜ್ವಲ್ರೇ ಎಂದು ಖಚಿತಪಡಿಸಿಕೊಳ್ಳಲು ಟರ್ಕಿಯಲ್ಲಿ (turkey technology) ಜಾರಿಯಲ್ಲಿರುವ Anatomical Comparison of Genital Features ಎಂಬ ತಂತ್ರಜ್ಞಾನದ ಮೊರೆ ಹೋಗಲಾಗಿತ್ತು. ಆ ತಂತ್ರಜ್ಞಾನ ಏನು, ಅದರಿಂದ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ. ಇದು ಭಾರತದಲ್ಲಿ ನಡೆದ ಮೊದಲ ಪ್ರಯೋಗವಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಂತ್ರಜ್ಞಾನ ಬಳಕೆ!

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.  ಈ ವಿಡಿಯೋಗಳಲ್ಲಿ ಎಲ್ಲೂ ಪ್ರಜ್ವಲ್ ರೇವಣ್ಣ ಮುಖ ಕಂಡಿಲ್ಲ. ಆದ್ರೆ, ಕೆಲವು ಫೋಟೋಗಳಲ್ಲಿ ಮಾತ್ರ ಕಂಡಿತ್ತು. ಹೀಗಾಗಿ ವಿಡಿಯೋನಲ್ಲಿರುವುದು ಪ್ರಜ್ವಲ್ ಅಲ್ಲ ಎಂದು ಕೆಲವರು ವಾದ ಮಾಡಿದ್ದರೆ, ಇನ್ನು ಕೆಲವರು ಇದು ಪ್ರಜ್ವಲ್ ರೇವಣ್ಣ, ಅವರ ಧ್ವನಿ ಸಹ ಇದೆ ಎಂದು ವಾದಿಸಿದ್ದರು. ಹೀಗಾಗಿ ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚಿಸಿತು. ಈ ತಂಡವು ವಿಡಿಯೋದಲ್ಲಿರುವ ವ್ಯಕ್ತಿಯ ಗುರುತನ್ನು ಖಚಿತಪಡಿಸಲು, ಎಸ್‌ಐಟಿಯು ಈ ಟರ್ಕಿ ದೇಶದ ತಂತ್ರಜ್ಞಾನವನ್ನು ಬಳಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ
Image
ಪ್ರಜ್ವಲ್​ ಶಿಕ್ಷೆ ಆದೇಶದಲ್ಲಿ ಹೆಣ್ಣಿನ ಮಹತ್ವ ತಿಳಿಸಿದ ಕೋರ್ಟ್​!
Image
ಪ್ರಜ್ವಲ್ ರೇವಣ್ಣ ಕೇಸ್​: ಅಂದಿನಿಂದ ಈವರೆಗೆ ಏನೇನಾಯ್ತು? ಇಲ್ಲಿದೆ ವಿವರ
Image
ಪ್ರಜ್ವಲ್​ಗೆ ಜೀವಾವಧಿ: ಸರ್ಕಾರಿ ವಕೀಲರ ಪ್ರತಿಕ್ರಿಯೆ ಹೇಗಿತ್ತು ನೋಡಿ
Image
ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

ಇದನ್ನೂ ಓದಿ: ಬದಲಾಗಲಿದೆ ಪ್ರಜ್ವಲ್ ರೇವಣ್ಣ ಜೀವನ ಶೈಲಿ: ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಫಿಕ್ಸ್

ಟರ್ಕಿ ತಂತ್ರಜ್ಞಾನ ಬಳಕೆ

ಪ್ರಜ್ವಲ್​ ರೇವಣ್ಣ ವೈರಲ್​ ಆದ ವಿಡಿಯೋ ಪ್ರಕರಣದ ತನಿಖೆಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಟರ್ಕಿಯಲ್ಲಿ ಬಳಕೆಯಾಗುವ ‘ಅನಾಟೋಮಿಕಲ್ ಕಾಂಪಾರೀಷನ್ ಆಫ್ ಜನಿಟಲ್ ಫೀಚರ್ಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಳಸಿದೆ. ಈ ತಂತ್ರಜ್ಞಾನದ ಮೂಲಕ ವಿಡಿಯೋದಲ್ಲಿರುವ ವ್ಯಕ್ತಿಯ ಗುರುತನ್ನು ಖಚಿತಪಡಿಸಲಾಗಿದೆ, ಇದು ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ ಎಂದು ಹೇಳಲಾಗಿದೆ.

ತಂತ್ರಜ್ಞಾನದ ಕಾರ್ಯವಿಧಾನ ಹೇಗಿತ್ತು?

‘ಅನಾಟೋಮಿಕಲ್ ಕಾಂಪಾರೀಷನ್ ಆಫ್ ಜನಿಟಲ್ ಫೀಚರ್ಸ್’ ಎಂಬ ತಂತ್ರಜ್ಞಾನವು ವ್ಯಕ್ತಿಯ ಜನನೇಂದ್ರಿಯದ ಭೌತಿಕ ಲಕ್ಷಣಗಳನ್ನು ಆಧರಿಸಿ ಗುರುತನ್ನು ಪತ್ತೆಹಚ್ಚುವ ವಿಧಾನವಾಗಿದೆ. ಈ ತಂತ್ರಜ್ಞಾನವು ಫಿಂಗರ್‌ಪ್ರಿಂಟ್ ಗುರುತಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಖಾಸಗಿ ಅಂಗಗಳ ರಚನೆಯನ್ನು ವಿಶ್ಲೇಷಿಸುತ್ತದೆ. ಒಬ್ಬ ವ್ಯಕ್ತಿಯ ಜನನೇಂದ್ರಿಯದ ರಚನೆಯು ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಇದು ಈ ತಂತ್ರಜ್ಞಾನದ ವಿಶಿಷ್ಟತೆಯಾಗಿದೆ. ಈ ವಿಧಾನವನ್ನು ಟರ್ಕಿಯಲ್ಲಿ ಕೆಲವು ಕಾನೂನು ತನಿಖೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದ್ದು, ಭಾರತದಲ್ಲಿ ಈಗ ಮೊದಲ ಬಾರಿಗೆ ಎಸ್‌ಐಟಿಯಿಂದ ಅಳವಡಿಸಲಾಗಿದೆ.

ತನಿಖೆಯ ಸಂದರ್ಭದಲ್ಲಿ ವಿಡಿಯೋದಿಂದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಅವುಗಳನ್ನು ಹೈ-ರೆಸಲ್ಯೂಶನ್ ಚಿತ್ರಗಳಾಗಿ ಪರಿವರ್ತಿಸಲಾಗುತ್ತದೆ. ನಂತರ, ಆರೋಪಿಯ ಖಾಸಗಿ ಅಂಗ, ಸೊಂಟ ಮತ್ತು ಕೈಯ ಫೋಟೋಗಳನ್ನು ಮೆಡಿಕಲ್ ಪ್ರಕ್ರಿಯೆಯ ಪ್ರಕಾರ ತೆಗೆದುಕೊಳ್ಳಲಾಗುತ್ತದೆ. ಈ ಫೋಟೋಗಳನ್ನು ಚರ್ಮವೈದ್ಯರು (ಡರ್ಮಟಾಲಜಿಸ್ಟ್‌ಗಳು) ಮತ್ತು ಮೂತ್ರಶಾಸ್ತ್ರಜ್ಞರು (ಯೂರಾಲಜಿಸ್ಟ್‌ಗಳು) ಪರಿಶೀಲಿಸುತ್ತಾರೆ. ವಿಡಿಯೋದಿಂದ ಪಡೆದ ಚಿತ್ರವನ್ನು ಆರೋಪಿಯ ಫೋಟೋದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಒಂದು ಭಾಗವಾದರೂ ಹೊಂದಿಕೆಯಾದರೆ, ವಿಡಿಯೋದಲ್ಲಿರುವ ವ್ಯಕ್ತಿಯ ಗುರುತನ್ನು ಖಚಿತಪಡಿಸಲು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ.

ವ್ಯಕ್ತಿಯಿಂದ ವ್ಯಕ್ತಿಗೆ ಜನನೇಂದ್ರಿಯಗಳು ಬದಲಾವಣೆ ಇರುತ್ತೆ. ಟರ್ಕಿಯ ತಂತ್ರಜ್ಞಾನದಿಂದ ಪ್ರಜ್ವಲ್‌ನ ಕರ್ಮಕಾಂಡ ಬಯಲಾಗಿದೆ. ಖಾಸಗಿ ಅಂಗ ಪ್ರಜ್ವಲ್‌ನದ್ದೇ ಎಂದು ಸಾಬೀತಾಗಿದೆ. ಅದೇಗೆ ಅಂದ್ರೆ, ಭಾರತದಲ್ಲಿ ಮೊದಲ ಬಾರಿಗೆ ಟರ್ಕಿ ತಂತ್ರಜ್ಞಾನ ಅಂದ್ರೆ ಅನಾಟೋಮಿಕಲ್ ಕಾಂಪಾರಿಸನ್ ತಂತ್ರಜ್ಞಾನ ಬಳಸಲಾಗಿದೆ. ಇದು ಹೇಗೆ ವರ್ಕ್ ಮಾಡುತ್ತೆ ಅಂದ್ರೆ, ಅಶ್ಲೀಲ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಪರಿಶೀಲನೆ ಮಾಡಲಾಗುತ್ತೆ. ಫೋಟೋ ಹೈರಸೊಲ್ಯೂಷನ್​ಗೆ ಪರಿವರ್ತಿಸಿ ಪರೀಕ್ಷೆ ನಡೆಸಲಾಗುತ್ತೆ. ವ್ಯಕ್ತಿಯ ಖಾಸಗಿ ಅಂಗ, ಸೊಂಟ, ಕೈ ಫೋಟೋ ಹೋಲಿಕೆ ಮಾಡಲಾಗುತ್ತೆ. ಚರ್ಮ ವೈದ್ಯರು, ಮೂತ್ರಶಾಸ್ತ್ರ ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತೆ. ಫೋಟೋ ವ್ಯಕ್ತಿಗೆ ಹೊಲಿಕೆ ಮಾಡಿ ವಿಡಿಯೋದಲ್ಲಿರುವ ವ್ಯಕ್ತಿ ಪತ್ತೆ ಮಾಡಲಾಗುತ್ತೆ) ಯಾವುದಾದರೂ ಒಂದು ಭಾಗ ಹೊಲಿಕೆ ಆದರು ಆರೋಪಿ ಪತ್ತೆಗೆ ಸಹಾಕರಿಯಾಗುತ್ತೆ. ಇದನ್ನೇ ಪ್ರಜ್ವಲ್ ಪ್ರಕರಣದಲ್ಲಿ ಎಸ್ಐಟಿ ಬಳಸಿಕೊಂಡು ಕೋರ್ಟ್‌ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಎಸ್‌ಐಟಿ ತನಿಖೆಗೆ ಕೋರ್ಟ್ ಶ್ಲಾಘನೆ

ವಿಡಿಯೋ ವೈರಲ್ ಆಗಿರುತ್ತೆ. ಆದ್ರೆ, ವಿಡಿಯೋದಲ್ಲಿರೋ ವ್ಯಕ್ತಿ ಯಾರೆಂದು ಗೊತ್ತಿರಲ್ಲ. ಹೀಗಿದ್ದರೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎಸ್ಐಟಿ ತನಿಖೆ ಮಾಡಿದೆ. ಡಿಜಿಟಲ್ ಎವಿಡೇನ್ಸ್, ಫಾರೆನ್ಸಿಕ್ ಎಕ್ಸಫರ್ಟ್ ಗಳ ಮೂಲಕ ಟೆಕ್ನಿಕಲ್ ಸಾಕ್ಷ್ಯಗಳನ್ನ ಸಂಗ್ರಹಿಸಿದ್ದಾರೆ. ಎಸ್‌ಐಟಿ ಸಂಗ್ರಹಿಸಿದ ಸಾಕ್ಷ್ಯ ಮುಂದಿಟ್ಟು ಎಸ್‌ಪಿಪಿಗಳಾದ ಅಶೋಕ್ ನಾಯಕ್ ಮತ್ತು ಬಿ.ಎನ್ ಜಗದೀಶ್ ವಾದ ಮಂಡಿಸಿದ್ದಾರೆ. ಇವರ ವಾದಕ್ಕೆ ಕೋರ್ಟ್ ಪ್ರಶಂಸೆ ವ್ಯಕ್ತಪಡಿಸಿದ್ದು, 480 ಪುಟಗಳ ತೀರ್ಪು ಬರೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Sun, 3 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ