ಜಲಮಂಡಳಿಯಲ್ಲಿ ಅಧಿಕಾರಿಗಳ ಕಳ್ಳಾಟ: ಯಾರದೋ ಡ್ಯೂಟಿ, ಇನ್ಯಾರಿಗೋ ಸಂಬಳ!

ಜಲಮಂಡಳಿಯಲ್ಲಿ ಸಂಬಳಕ್ಕೆ ಗಿಂಬಳಕ್ಕೆ ಇರುವ ಆಸಕ್ತಿ, ನಿಯತ್ತಿನಿಂದ ಕೆಲಸ ಮಾಡುವುದಕ್ಕಿಲ್ಲ. ಇಂಥವರಿಂದ ಮಂಡಳಿಯ ಆದಾಯಕ್ಕೂ ಕೊಕ್ಕೆ ಬೀಳುತ್ತಿದೆ. ತಾವು ಮಾಡುವ ಕೆಲಸವನ್ನು ಬೇರೊಬ್ಬರಿಂದ ಮಾಡಿಸುತ್ತಾ, ತಾವು ಮಾತ್ರ ಆರಾಮಾಗಿ ಜೇಬಿಗೆ ಸಂಬಳ ಇಳಿಸುತ್ತಿದ್ದರೆ. ಮೀಟರ್, ರೀಡರ್, ವಾಟರ್ ಇನ್ಸ್ಪೆಕ್ಟರ್​ಗಳ ಕಳ್ಳಾಟ ಟಿವಿ9 ಬಯಲು ಮಾಡಿದೆ.

ಜಲಮಂಡಳಿಯಲ್ಲಿ ಅಧಿಕಾರಿಗಳ ಕಳ್ಳಾಟ: ಯಾರದೋ ಡ್ಯೂಟಿ, ಇನ್ಯಾರಿಗೋ ಸಂಬಳ!
ಜಲಮಂಡಳಿಯಲ್ಲಿ ಅಧಿಕಾರಿಗಳ ಕಳ್ಳಾಟ: ಯಾರದೋ ಡ್ಯೂಟಿ, ಇನ್ಯಾರಿಗೋ ಸಂಬಳ!
Follow us
|

Updated on: Sep 19, 2024 | 10:56 PM

ಬೆಂಗಳೂರು, ಸೆಪ್ಟೆಂಬರ್​ 19: ಸರ್ಕಾರಿ ಕೆಲಸ ಅಂದರೆ ಕೆಲವರಿಗೆ ಉಂಡು ಹೋದ ಕೊಂಡೂ ಹೋದ ಅನ್ನೋ ಹಾಗೆ ಆಗಿದೆ. ಕೆಲಸನೇ ಮಾಡದೇ ಕೆಲವರು ಲಕ್ಷ ಲಕ್ಷ ಸಂಬಳ ಜೇಬಿಗೆ ಇಳಿಸುತ್ತಿದ್ದಾರೆ. ಇದು ಜಲಮಂಡಳಿಯಲ್ಲಿ ಸ್ವಲ್ಪ ಜಾಸ್ತಿನೇ ಆಗಿದೆ. ಜಲಮಂಡಳಿಯಲ್ಲಿ (Bwssb) ಲಗಾಮು ಇಲ್ಲದ ಕುದುರೆಗಳಂತಗಿದ್ದಾರೆ ಅಧಿಕಾರಿಗಳು. ಕಾನೂನಿನ ಬಗ್ಗೆಯಾಗಲಿ, ತಾವು ತೆಗೆದುಕೊಳ್ಳುವ ಸಂಬಳಕ್ಕಾಗಲಿ ನಿಯತ್ತಿನಿಂದ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಮಂಡಳಿಗೆ ಆದಾಯ ತಂದುಕೊಡಬೇಕಿದ್ದ ಅಧಿಕಾರಿಗಳೇ ಕಲ್ಲಟವಾಡುತ್ತ ಮಂಡಳಿಗೆ ನಷ್ಟ ತರಿಸುತ್ತಿದ್ದಾರೆ.

ತಾವು ಮಾಡುವ ಕೆಲಸವನ್ನು ಬೇರೊಬ್ಬರಿಂದ ಮಾಡಿಸುತ್ತಾ, ತಾವು ಮಾತ್ರ ಆರಾಮಾಗಿ ಜೇಬಿಗೆ ಸಂಬಳ ಇಳಿಸುತ್ತಿದ್ದರೆ. ಲಕ್ಷ ಲಕ್ಷ ಸಂಬಳ ಪಡೆದು ಅಧಿಕಾರಿಗಳು ಅಂದ ದರ್ಬಾರ್ ನಡೆಸುತ್ತಿದ್ದಾರೆ. ಮೀಟರ್, ರೀಡರ್, ವಾಟರ್ ಇನ್ಸ್ಪೆಕ್ಟರ್​ಗಳ ಕಳ್ಳಾಟ ಟಿವಿ9 ಬಯಲು ಮಾಡಿದೆ.

ಇದನ್ನೂ ಓದಿ: ಎನ್‌ಹೆಚ್‌ಎಂ ಆರೋಗ್ಯ ಸಿಬ್ಬಂದಿಗಳ ಕೆಸಲಕ್ಕೆ ಕುತ್ತು: 96 ಸಿಬ್ಬಂದಿಗಳಿಗೆ ಗೇಟ್ ಪಾಸ್ ಕೊಟ್ಟ ಆರೋಗ್ಯ ಇಲಾಖೆ

ಫೀಲ್ಡ್ ಗಿಳಿಯದೇ ಖಾಸಗಿ ವ್ಯಕ್ತಿಗಳಿಂದ ಮೀಟರ್​ ರೀಡಿಂಗ್ ಮಾಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸುಮಾರು 100 ಮಂದಿಗೆ ಮುಂಬಡ್ತಿ ಹಾಗೂ ವರ್ಗಾವಣೆ ಮಾಡಲಾಗಿತ್ತು. ಅವರೆಲ್ಲರೂ ಮೀಟರ್ ರೀಡರ್ ಹಾಗೂ ವಾಟರ್ ಇನ್ಸ್ಪೆಕ್ಟರ್ ಗಳಾಗಿದ್ದರು. ಆದರೆ ಬಹುತೇಕ ಮಂದಿ ಫೀಲ್ಡ್ ಗೆ ಹೋಗದೆ ಖಾಸಗಿ ವ್ಯಕ್ತಿಗಳಿಂದ ಕೆಲಸ ಮಾಡಿಸುತ್ತಿದ್ದಾರೆ.

ಸಂಬಳ ಇವರ ಜೇಬಿಗೆ, ಕೆಲಸ ಬೇರೊಬ್ಬರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಪಾರ್ಟ್ಮೆಂಟ್​ಗಳಿಗೆ, ಪಿಜಿ ಬಿಲ್ಡಿಂಗ್​ಗಳಿಗೆ ಅಕ್ರಮವಾಗಿ ನೀರು ಬಿಡುವುದು, ಅಕ್ರಮವಾಗಿ ಹಣ ಸಂಪಾದಿಸುವುದು ಇವರ ಕಾಯಕ ಆಗಿದೆ. ಇವರ ಬೇಜವಾಬ್ದಾರಿ ನಡೆಯಿಂದ ಜಲಮಂಡಳಿಗೆ ಆದಾಯ ಸೋರಿಕೆ ಆಗುತ್ತಿದೆ.

ಇವರಿಂದಲೇ ಆದಾಯ ಸೋರಿಕೆ ಆಗುತ್ತಿದೆ ಅಂತಾ ಹಲವು ಬಾರಿ ದೂರುಗಳು ಬಂದಿವೆ. ಆದರೆ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕ್ರಮ ಜರುಗಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಹೇಳುತ್ತಾರೆ.

ಇದನ್ನೂ ಓದಿ: ಫೇಸ್​ಲೆಸ್​​, ಆನ್​ಲೈನ್​ ಡಿಜಿಟಲ್​ ಇ-ಖಾತಾ ವ್ಯವಸ್ಥೆ ಜಾರಿ ಮಾಡಿದ ಬಿಬಿಎಂಪಿ

ಜಲಮಂಡಳಿಯಲ್ಲಿ ಸಂಬಳಕ್ಕೆ ಗಿಂಬಳಕ್ಕೆ ಇರುವ ಆಸಕ್ತಿ, ನಿಯತ್ತಿನಿಂದ ಕೆಲಸ ಮಾಡುವುದಕ್ಕಿಲ್ಲ. ಇಂಥವರಿಂದ ಮಂಡಳಿಯ ಆದಾಯಕ್ಕೂ ಕೊಕ್ಕೆ ಬೀಳುತ್ತಿದೆ. ಇನ್ನಾದರೂ ಇದಕ್ಕೆ ಅಧ್ಯಕರು ಕಡಿವಾಣ ಹಾಕಲಿ ಅನ್ನೋದೇ ನಮ್ಮ ಆಶಯ.

ವರದಿ: ಶಿವರಾಜ್ ಕುಮಾರ್ ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.