AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

Kannada News Digest: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 26, 2021 | 6:39 PM

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

1. ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ. Link: ಪಂಚರಾಜ್ಯ ಚುನಾವಣೆ ದಿನಾಂಕ

2. ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ ವಸುಧೇಂದ್ರ, ಶಿವಾನಂದ ಕಳವೆ ಸೇರಿ ಹಲವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಘೋಷಣೆ Link: ಸಾಹಿತ್ಯ ಅಕಾಡೆಮಿ ಪ್ರಶಸ್ತಿ

3. ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲಿ ಅವ್ಯವಸ್ಥೆ ಕೋಟೆ ನಾಡು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲಿ ಅವ್ಯವಸ್ಥೆ, ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮಕ್ಕಳ ವಾರ್ಡ್​ನಲ್ಲಿ ಹಾಸಿಗೆಯ ಮೇಲೆ ನಾಯಿಯೊಂದು ಮಲಗಿರುವ ವಿಡಿಯೋ ವೈರಲ್ ಆಗಿದ್ದು ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ. Link: ಚಿತ್ರದುರ್ಗ ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಮಕ್ಕಳ ವಾರ್ಡ್‌ನ ಬೆಡ್ ಮೇಲೆ ಮಲಗಿರುವ ನಾಯಿ! ಫೋಟೋ ವೈರಲ್

4. ಬಾಲಾಕೋಟ್ ದಾಳಿಗೆ ಎರಡು ವರ್ಷ ಬಾಲಾಕೋಟ್ ದಾಳಿ ನಡೆದು ಇಂದಿಗೆ ಎರಡು ವರ್ಷ ಕಳೆದಿದೆ. ಫೆಬ್ರವರಿ 26, 2019ರಂದು ಬಾಲಾಕೋಟ್​​ನಲ್ಲಿ ಏನೋ ಆಗಿದೆ ಎಂಬುದನ್ನು ಟ್ವೀಟ್ ಮೂಲಕ ಹೊರ ಜಗತ್ತಿಗೆ ಬಿಟ್ಟು ಕೊಟ್ಟ ವ್ಯಕ್ತಿಯೇ ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್. ನಸುಕಿನ 5 ಗಂಟೆ 12 ನಿಮಿಷಕ್ಕೆ ಟ್ವೀಟ್ ಮಾಡಿದ್ದರು. ಅಂದು ನಡೆದ ಬೆಳವಣೆಗೆ ಹಾಗೂ ಧೀರ ಅಭಿನಂದನ್​ ವರ್ಧಮಾನ್ ಅವರನ್ನು ನೆನಪಿಸಿಕೊಳ್ಳುವ ಸಮಯವಿದು. Link: ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್

5. ಬಿಗ್ ಬಾಸ್ 8 ಸ್ಪರ್ಧಿಗಳ ಪಟ್ಟಿ ಕನ್ನಡಿಗರು ಕಾತುರದಿಂದ ಕಾಯುತ್ತಿರುವ ಕನ್ನಡದ ರಿಯಾಲಿಟಿ ಷೋ ಬಿಗ್ ಬಾಸ್ 8 ಫೆಬ್ರವರಿ 28ರಂದು ಶುರುವಾಗಲಿದೆ. ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇವೆ. ಈ ಬಾರಿ ದೊಡ್ಮನೆ ಪ್ರವೇಶಿಸಲಿರುವ ಸ್ಪರ್ಧಿಗಳು ಯಾರು ಎಂಬ ಕಾತುರ ಎಲ್ಲರಲ್ಲೂ ಇದೆ. ಸದ್ಯ ಈ ಕುತೂಹಲಕ್ಕೆ ತೆರ ಬಿದ್ದಿದ್ದು ಬಹುತೇಕ ಖಚಿತವಾಗಿರುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ. Link: Bigg Boss Kannada 8: ಈ ಬಾರಿ ಕನ್ನಡ ಬಿಗ್​ಬಾಸ್​ನಲ್ಲಿ​ ಇವರೆಲ್ಲಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ!

6. ಎರಡು ಸೆಷನ್‌ಗಳಲ್ಲಿ ಬಿತ್ತು ಬರೋಬ್ಬರಿ 17 ವಿಕೆಟ್‌ಗಳು ಇಂಡಿಯಾ- ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಈ ಎರಡೂ ಘಟನೆಗಳು ನಡೆದವು. ಕೇವಲ ಎರಡು ಸೆಷನ್‌ಗಳಲ್ಲಿ ಬರೋಬ್ಬರಿ 17 ವಿಕೆಟ್‌ಗಳು ಬಿದ್ದರೆ, ಭಾರತವು ಕೇವಲ ಎರಡು ದಿನಗಳಲ್ಲಿ ಪಂದ್ಯವನ್ನು ಗೆದ್ದು, ಸರಣಿಯಲ್ಲಿ ಎರಡನೇ ಗೆಲುವು ಸಾಧಿಸಿತು. Link: India vs England: ಕೇವಲ 842 ಎಸೆತಗಳಲ್ಲಿ ಮುಗಿದ 3ನೇ ಟೆಸ್ಟ್​ಗೆ 7ನೇ ಸ್ಥಾನ.. ಇದಕ್ಕೂ ಮೊದಲಿನವು ಯಾವುವು ಗೊತ್ತಾ?

7. ಕಾರಿನ ಟೈರು ಬದಲಾಯಿಸಿದ ಮೈಸೂರು ಡಿಸಿ ಮೈಸೂರು ಜಿಲ್ಲೆಯ ಡಿಸಿ ರೋಹಿಣಿ‌ ಸಿಂಧೂರಿ ಕಾರಿಗೆ ಜಾಕ್ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸಿಂಧೂರಿಯವರು ಕುಟುಂಬದ ಜೊತೆ ಹೊರ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಕಳಚಿ ಪಂಕ್ಚರ್ ಹಾಕಿದ್ದಾರೆ. Link: ಕಾರಿಗೆ ಪಂಕ್ಚರ್​ ಹಾಕಿದ್ರಾ ಮೈಸೂರು DC ರೋಹಿಣಿ ಸಿಂಧೂರಿ‌?

8. ಅದಾನಿ, ರಿಲಯನ್ಸ್ ಎಂಡ್​ಗಳ ಹಿಂದಿರುವ ಸತ್ಯಾಸತ್ಯತೆ ಏನು? ಚರ್ಚೆಯಲ್ಲಿದೆ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ: ಅದಾನಿ, ರಿಲಯನ್ಸ್ ಎಂಡ್​ಗಳ ಹಿಂದಿರುವ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ Link: ಅದಾನಿ ಎಂಡ್, ರಿಲಯನ್ಸ್ ಎಂಡ್

9. ಅಂದು ಪಾಕ್ ಯುದ್ಧವಿಮಾನಗಳು ಭಾರತದತ್ತ ಬರದಿದ್ದರೆ ಈಗ ಲಡಾಖ್ ಸಂಘರ್ಷ ಇಷ್ಟು ಬೇಗ ಕೊನೆಯಾಗುತ್ತಿತ್ತೇ? ‘ನಮ್ಮ ಬೆನ್ನು ನಮಗೆ ಕಾಣದು’ ಎಂಬ ಕನ್ನಡ ಗಾದೆಯೊಂದಿದೆಯಲ್ಲವೇ? ‘ಬಾಲಾಕೋಟ್​ ನಂತರ ನಮ್ಮ ವಾಯುಪಡೆಯಲ್ಲಿ ತುರ್ತಾಗಿ ಆಗಲೇಬೇಕಾದ ಸುಧಾರಣೆಗಳೇನು ಎಂಬುದು ನಮಗೆ ಮನವರಿಕೆಯಾಯಿತು’ ಎಂಬ ಮಾತನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಇದೇ ಕನ್ನಡಗಾದೆ ಅನ್ವರ್ಥವಾಗುತ್ತದೆ. Link: ಬಾಲಾಕೋಟ್ ನಂತರ ಭಾರತ ಕಲಿತ ಪಾಠಗಳು

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.

Published On - 6:38 pm, Fri, 26 February 21

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್