
Breaking News Today Live Updates in Kannada: ರಾಜ್ಯದ ತೀವ್ರ ಬರ ಮತ್ತು ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಕರೆಯಲಾದ 3 ದಿನಗಳ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಇಂದು . ಕಸ್ತೂರಿರಂಗನ್ ವರದಿ ಕುರಿತು ನಿನ್ನೆಯ (ಸೆ.22) ಅಧಿವೇಶನದಲ್ಲಿ ಮಹತ್ವದ ನಿರ್ಣಯ ಮಂಡನೆಯಾಗಿದೆ. ಈ ನಿರ್ಣಯಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಬಲ ಸೂಚಿಸಿದ್ದಾರೆ. ಇನ್ನೊಂದೆಡೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಲಾಂಛನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿ, ಅವರ ಭಕ್ತಿ ಹಾಗೂ ಸೇವಾ ಜೀವನ ನಿರಂತರ ಸ್ಪೂರ್ತಿ ಎಂದಿದ್ದಾರೆ. ಮತ್ತೊಂದೆಡೆ ಸೆಪ್ಟೆಂಬರ್ 23 ಮತ್ತು 24 ರಂದು ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಲವಾದ ಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಬರ ಪರಿಹಾರಕ್ಕೆ ಅನುದಾನ ಕೋರಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸೆ.10ರಂದು 3,705.30 ಕೋಟಿ ರೂ. ನೆರವಿಗೆ ಮನವಿ ಸಲ್ಲಿಸಿದ್ದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಆರಂಭದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ವೈಜ್ಞಾನಿಕ ಸಮೀಕ್ಷೆ ಬಳಿಕ ಹೆಚ್ಚುವರಿಯಾಗಿ 76 ತಾಲೂಕುಗಳು ಸೇರ್ಪಡೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು 177 ತಾಲೂಕುಗಳು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಮುಂಗಾರು ಮುಗಿಯುವಷ್ಟರಲ್ಲಿ ಬರಪೀಡಿತ ತಾಲೂಕು ಸಂಖ್ಯೆ 200 ದಾಟುವ ಸಾಧ್ಯತೆ ಇದೆ. ಹೆಚ್ಚುವರಿ ತಾಲೂಕುಗಳ ನಷ್ಟ ಪ್ರಮಾಣದ ಪರಿಶೀಲನೆ ಪ್ರಗತಿಯಲ್ಲಿದೆ. ನಷ್ಟದ ಅಂದಾಜು ಸಿಕ್ಕ ಬಳಿಕ NDRFನಿಂದ ಹೆಚ್ಚುವರಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ಜೂನ್‌ನಿಂದ ಆಗಸ್ಟ್ ಅವಧಿಯಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದೆ.ಕೃಷಿ, ಜಲವಿದ್ಯುತ್, ಅಂತರ್ಜಲ ಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಿದೆ.ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಭಾರಿ ಕುಸಿತವಾಗಿದೆ.ಬೆಂಗಳೂರು, ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿನ ಅಭಾವ ಭೀತಿ ಎದುರಾಗಿದೆ. ಬೇಸಿಗೆ ವೇಳೆಗೆ ಬರ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಆತಂಕವಿದೆ. 40 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗುವ ಸಾಧ್ಯತೆ ಇದೆ. ಕೇಂದ್ರದ ಅಧ್ಯಯನ ತಂಡ ಭೇಟಿ, ವರದಿ ತಯಾರಿಸಲು ಸುದೀರ್ಘ ಸಮಯವಾಗಲಿದೆ.ಮಶೇ.50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನು ರೈತರಿಗೆ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು ಹಾಗೂ ಜಾನುವಾರುಗಳ ರಕ್ಷಣೆಗೆ ತುರ್ತು ನೆರವು ಅಗತ್ಯವಿದೆ. ಹೀಗಾಗಿ SDRFನ ಎರಡನೇ ಕಂತಿನ ಹಣ ಮುಂಗಡವಾಗಿ ಬಿಡುಗಡೆಗೆ ಮನವಿ ಮಾಡಿದ್ದಾರೆ.
ಏಕಾಏಕಿ ಹೆಡ್ ಲೈಟ್ ಕೈಕೊಟ್ಟಿದ್ದಕ್ಕೆ ಮೊಬೈಲ್ ಟಾರ್ಚ್ ನಲ್ಲಿ ಡ್ರೈವರ್ ಬಸ್ ಚಾಲಾಯಿಸಿರುವ ಘಟನೆ ಕೊಪ್ಪಳ ಬೆಳಕಿಗೆ ಬಂದಿದೆ. ಕೊಪ್ಪಳ ಡಿಪೋಗೆ ಸೇರಿದ ಬಸ್ ಶಹಾಪುರ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಹೆಡ್ ಲೈಟ್ ಕೈಕೊಟ್ಟಿವೆ. ವಿಧಿ ಇಲ್ಲದೇ ಅನಿವಾರ್ಯವಾಗಿ ಡ್ರೈವರ್, ಮೊಬೈಲ್ ಟಾರ್ಚ್ ಲೈಟ್ ಮೂಲಕವೇ ಬಸ್ ಚಲಾಯಿಸಿದ್ದಾನೆ. ಒಂದೆಡೆ ಮಳೆಯಾಗುತ್ತಿದ್ದರೆ, ಇನ್ನೊಂದೆಡೆ ನಿರ್ವಾಹಕ ಮೊಬೈಲ್ ಟಾರ್ಚ್ ಹಿಡಿದು ಡ್ರೈವರ್ಗೆ ಬೆಳಕು ಹಾಕಿದ್ದಾರೆ. ಸಾರಿಗೆ ಸಂಸ್ಥೆ ಅವ್ಯವಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧವೇ ಶಿವಮೊಗ್ಗದಲ್ಲಿ ಸೂಡಾ ಅಧ್ಯಕ್ಷ H.S.ಸುಂದರೇಶ್ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮಧು ಬಂಗಾರಪ್ಪ ಆಪ್ತ ಸಹಾಯಕ (ಪಿಎ) ಜಿ.ಡಿ.ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈ ಸಂಬಂಧ ಇಂದು (ಸೆ.23) ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೂಡಾ ಅಧ್ಯಕ್ಷ H.S.ಸುಂದರೇಶ್, ಮೂರ್ಖರು, ದಡ್ಡರ ಸಂತೆಯಿಂದ ಕಾಂಗ್ರೆಸ್ ಪಕ್ಷ ತಳಮಟ್ಟಕ್ಕೆ ಹೋಗುತ್ತಿದೆ. ಇಲ್ಲಿ ಪಕ್ಷಕ್ಕೋಸ್ಕರ ದುಡಿದವರಿಗೆ ಅವಕಾಶವಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹಗುರವಾಗಿ ಮಾತನಾಡಿದವರಿಗೆ ಮಂತ್ರಿ ಮಾಡಿದ್ದಾರೆ. JDSನಿಂದ ಬಂದ ಮಧು ಬಂಗಾರಪ್ಪ ಪಕ್ಷ ಆಳುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರಿಗೆ ಗಂಧ ಗಾಳಿ ಗೊತ್ತಿಲ್ಲ. ಸಚಿವರ ಆಪ್ತ ಸಹಾಯಕರು ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಬೆದರಿಸಿ ಹಣಕ್ಕೆ ಬೇಡಿಕೆಯನ್ನಿಡುತ್ತಿದ್ದಾರೆ. 25 ಲಕ್ಷ, 5 ಲಕ್ಷಕ್ಕೆ ಬೇಡಿಕೆ ಇಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂದಿಗೆ ಅಂತ್ಯವಾಹಬೇಕಿದ್ದ ವಿಶೇಷ ಅಧಿವೇಶನ ಮತ್ತೊಂದು ದಿನ ನಡೆಯಲಿದೆ. ಹೌದು… ನಾಳೆ (ಸೆ.24) ಒಂದು ದಿನ ಹೆಚ್ಚುವರಿಯಾಗಿ ಕಲಾಪ ಮುಂದುವರಿಯಲಿದೆ. ಈ ಬಗ್ಗೆ ಪರಿಷತ್‌ನಲ್ಲಿ ಸಭಾನಾಯಕ ಡಾ.ಯತೀಂದ್ರ ಸಿದ್ದರಾಮಯ್ಯನವರು ಪ್ರಕಟಿಸಿದರು.
ದರ್ಶನ್ ಆ್ಯಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸಿ ಹೈಕೋರ್ಟ್ಗೆ ಮೊರೆ ಹೋಗಿದ್ದ ದರ್ಶನ್ಗೆ ಮತ್ತೆ ಹಿನ್ನಡೆಯಾಗಿದೆ. ಕ್ರಾಸ್ ಎಗ್ಸಾಮಿನೇಷ್ ವೇಳೆ ಪ್ರದೋಷ್ನನ್ನು ಪ್ರಶ್ನಿಸುವ ಹಕ್ಕಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪವಿಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.ಮಾಫಿ ಸಾಕ್ಷಿಗೆ ಮರುದಿನವೇ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದೆ. ಪ್ರಾಸಿಕ್ಯೂಷನ್ ಕ್ರಮದಲ್ಲಿ ತಪ್ಪು ಹುಡುಕಲಾಗದು. ಪ್ರದೋಷ್ ದೂರವಾಣಿಯಲ್ಲಿ ಪತ್ನಿ ಜೊತೆಗೆ ಮಾತನಾಡಿದ್ದಾನೆ. ಬೇರೆ ಹೆಸರನ್ನು ನೀಡಿ ಪತ್ನಿ ಜತೆ ಮಾತಾಡಿದ್ದಾನೆಂದು ವಾದಿಸಿದ್ದಾರೆ. ಮಾಫಿ ಆದೇಶ ಕಾನೂನುಬಾಹಿರವೆನ್ನಲು ಕಾರಣಗಳಿಲ್ಲ ಎಂದು ಹೇಳಿ 59ನೇ ಸಿಸಿಹೆಚ್ ಕೋರ್ಟ್ ಆದೇಶ ಎತ್ತಿ ಹಿಡಿದಿದೆ.
ಬಿಸಿಲಿನಿಂದ ಕಂಗಟ್ಟಿದ್ದ ರಾಯಚೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹೌದು.. ಇಮದು (ಸೆ.23) ಸಂಜೆಯಾಗುತ್ತಿದ್ದಂತೆಯೇ ರಾಯಚೂರು ಜಿಲ್ಲೆಯಾದ್ಯಂತ ಮಳೆರಾಯರ ಅಬ್ಬರಿಸಿದ್ದಾನೆ. ರಾಯಚೂರು ನಗರ,ಮಾನ್ವಿ,ಲಿಂಗಸುಗೂರು,ದೇವದುರ್ಗ, ಸಿರವಾರ,ಸಿಂಧನೂರು ಸೇರಿ ಹಲವೆಡೆ ಕಳೆದ ಎರಡು ಗಂಟೆಯಿಂದ ಗುಡುಗು ಸಹಿತ ಭಾರೀ ಮಳೆಯಾಗಿದ್ದು,ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ರೈತರ ಮೊಗದಲ್ಲಿಸಂತಸ ಮೂಡಿದೆ.
ಕೇಂದ್ರ ಚುನಾವಣಾ ಆಯುಕ್ತರ ನಡುವೆ ಭಿನ್ನಮತ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ಆಯೋಗವು ಯಾರ ಕೈಗೊಂಬೆ ಆಗಬಾರದು. ಯಾವುದೇ ಸರ್ಕಾರವೊಂದರ ಕೈಗೊಂಬೆಯಾಗಬಾರದು. ಆಯೋಗ ಭಾರತ ಪ್ರಜಾಪ್ರಭುತ್ವವನ್ನು ಬಲಪಡಿಸಲು, ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಮತದಾರನ ಮತದಾನದ ಹಕ್ಕು ರಕ್ಷಿಸಲು ಜವಾಬ್ದಾರಿ ಆಗಿರಬೇಕು.ಆಯೋಗವು ಈ ಕಾರ್ಯದಲ್ಲಿ ವಿಫಲವಾದ್ರೆ ಧ್ವನಿ ಎತ್ತುತ್ತೇವೆ. ದೇಶದ ಪ್ರಜ್ಞಾವಂತ ಪ್ರಜೆಗಳಾದ ನಾವು ಧ್ವನಿ ಎತ್ತುತ್ತೇವೆ. ಚುನಾವಣಾ ಆಯೋಗದ ನಿರ್ಧಾರಗಳಲ್ಲಿ ಸರ್ವಾಧಿಕಾರಿ ನಡೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಸರ್ವಾಧಿಕಾರಿ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಇಂತಹ ಅಧಿಕಾರಿಗಳಿಂದ ದೇಶದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ ಪಾರದರ್ಶಕ ಚುನಾವಣೆಗಳು ನಡೆಯಲು ಖಂಡಿತ ಸಾಧ್ಯವಿಲ್ಲ.ಈ ಸಾಂವಿಧಾನಿಕ ದ್ರೋಹವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರಪತಿಗಳು ಜ್ಞಾನೇಶ್ ಕುಮಾರ್ರನ್ನು ಪದಚ್ಯುತಗೊಳಿಸಿ. ಅವರ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರಕ್ಕೆ ಆದೇಶಿಸಬೇಕು ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಬಿಜೆಪಿ ಮಹತ್ವದ ಘೋಷಣೆ ಮಾಡಿದೆ. ಪ್ರಮುಖ ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ಬದಲಾವಣೆ ಮಾಡಿದ್ದು, ಕರ್ನಾಟಕದ ಜವಾಬ್ದಾರಿ ಹರೀಶ್ ದ್ವಿವೇದಿಗೆ ನೀಡಲಾಗಿದೆ. ಹೌದು..
ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಬದಲಾವಣೆಯಾಗಿದೆ. ಉಸ್ತುವಾರಿಯಾಗಿದ್ದ ರಾಧಮೋಹನ್ ದಾಸ್ ಅವರನ್ನು ಏಕಾಏಕಿ ಬದಲಾವಣೆ ಮಾಡಲಾಗಿದ್ದು, ಹೊಸ ಉಸ್ತುವಾರಿ ಹಾಗೂ ಸಹ ಉಸ್ತುವಾರಿಯನ್ನು ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ಹಾಗೂ ಸಹ ಉಸ್ತುವಾರಿಯಾಗಿ ಡಾ.ಕಸಂ ವೆಂಕಟೇಶ್ವರಲು ಅವರನ್ನು ನೇಮಕ ಮಾಡಲಾಗಿದೆ. ಹರೀಶ್ ದ್ವಿವೇದಿ ಉತ್ತರ ಪ್ರದೇಶ ಮೂಲದ ಬಿಜೆಪಿ ನಾಯಕರಾಗಿದ್ದರೆ, ಕಸಂ ವೆಂಕಟೇಶ್ವರಲು ತೆಲಂಗಾಣ ಮೂಲದ ಬಿಜೆಪಿ ನಾಯಕ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಸಹ ಆರೋಪಿಗೆ ಇದನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದ ನ್ಯಾಯಪೀಠ, ವಿಚಾರಣೆ ವೇಳೆ ಆತನನ್ನು ಪಾಟೀಸವಾಲು ನಡೆಸಲು ನಿಮಗೆ ಪೂರ್ಣ ಹಕ್ಕಿದೆ ಎಂದು ಸ್ಪಷ್ಟಪಡಿಸಿತು.
ಗ್ಯಾರಂಟಿ ನೆಪದಲ್ಲಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮಾಸಾಶನಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲು ಒತ್ತಾಯಿಸಿದ ಅವರು, ನಾಳೆ ರಾಜ್ಯಾದ್ಯಂತ ಶವಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ವಿಚಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ಇದು ನಮ್ಮ ಆಂತರಿಕ ವಿಚಾರವೆಂದು ಪರಮೇಶ್ವರ್ ತಿರುಗೇಟು ನೀಡಿದರೆ, ಶಾಸಕರು ಸರ್ಕಾರಕ್ಕೆ ಬರೆದ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ಆಡಳಿತದ ವಿರುದ್ಧ ಶಾಸಕ ಸುನೀಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ವಾರಾಂತ್ಯದ ರಜೆ ಮತ್ತು ಸೆ.28 ರಿಂದ 30 ರವರೆಗೆ ನಡೆಯಲಿರುವ ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರದಿಂದ ಸತತ 5 ದಿನ ಸೇವೆ ವ್ಯತ್ಯಯವಾಗುವ ಸಾಧ್ಯತೆಯಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ಸೆ.27 ರ ಭಾನುವಾರದಂದು ಬ್ಯಾಂಕ್ ಶಾಖೆಗಳನ್ನು ತೆರೆದು ಸೇವೆ ಒದಗಿಸಲು ಆಡಳಿತ ಮಂಡಳಿ ಸೂಚಿಸಿದೆ.
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಮಾತನಾಡಿದ ಶಾಸಕ ಬಿ.ವೈ. ವಿಜಯೇಂದ್ರ, ಸರ್ಕಾರದ ಬಳಿ ಪರಿಹಾರ ಕೇಳುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ ಎಂದು ವೀಡು ನುಡಿದರು. ಬಿಜೆಪಿ ಪಾದಯಾತ್ರೆಯಿಂದ ಎಚ್ಚೆತ್ತ ಸರ್ಕಾರ ಈಗ ಪ್ರವಾಸ ಮಾಡುತ್ತಿದ್ದು, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅವರ ಈ ದಿಢೀರ್ ನಡೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.
ವಿಧಾನಪರಿಷತ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಸದಸ್ಯ ನವೀನ್ ಹಿಂಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು. ಶಾಸಕರ ಕ್ಷಮೆಯಾಚನೆ ಬಳಿಕ ಮೇಲ್ಮನೆಯಲ್ಲಿ ಉಂಟಾಗಿದ್ದ ತೀವ್ರ ಗದ್ದಲ ಶಮನಗೊಂಡು ಕಲಾಪ ಸುಗಮವಾಗಿ ಮುಂದುವರಿಯಿತು.
ನಕಲಿ ಔಷಧ ಹಾವಳಿ ಬೆಳಕಿಗೆ ಬಂದ ಬೆನ್ನಲ್ಲೇ ಫೈಜರ್ ಇಂಡಿಯಾ ಸಂಸ್ಥೆಯು ನಕಲಿಗರು ನಕಲು ಮಾಡಿದ್ದ ಔಷಧ ಬ್ಯಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ರೋಗಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಬದ್ಧವಾಗಿದ್ದು, ತನಿಖಾಧಿಕಾರಿಗಳಿಗೆ ಸಂಪೂರ್ಣ ತಾಂತ್ರಿಕ ಮಾಹಿತಿ ಹಾಗೂ ಸಹಕಾರ ನೀಡುತ್ತಿರುವುದಾಗಿ ಕಂಪನಿ ಅಧಿಕೃತ ಸ್ಪಷ್ಟನೆ ನೀಡಿದೆ.
ಎಸ್ಐಆರ್ ಮೂರನೇ ಹಂತದಲ್ಲಿ ಸೂಕ್ತ ದಾಖಲೆಗಳಿಲ್ಲದ 6.15 ಕೋಟಿಗೂ ಅಧಿಕ (17.04 ಪ್ರತಿಶತ) ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ದಾಖಲೆ ವ್ಯತ್ಯಾಸವಿರುವ 5.43 ಕೋಟಿ ಜನರಿಗೆ ನೋಟಿಸ್ ನೀಡಲಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೊಸ ಮತದಾರರ ನೋಂದಣಿ, ಹೆಸರು ಅಳಿಸುವಿಕೆ ಮತ್ತು ECINet ಸಾಫ್ಟ್‌ವೇರ್ ಕುರಿತು 10 ತಿಂಗಳಲ್ಲಿ ಕನಿಷ್ಠ 14 ಬಾರಿ ಔಪಚಾರಿಕ ತಕರಾರು ಎತ್ತಿದ್ದಾರೆ.
ವಿಧಾನಪರಿಷತ್‌ನಲ್ಲಿ ಬಿಜೆಪಿ ಶಾಸಕ ನವೀನ್ ಧರಿಸಿದ್ದ ಹಸಿರು ಶಾಲಿನ ಬಗ್ಗೆ ಕಾಂಗ್ರೆಸ್‌ನ ಎಸ್.ರವಿ ಮಾಡಿದ ಟೀಕೆ ತೀವ್ರ ಗದ್ದಲಕ್ಕೆ ಕಾರಣವಾಯಿತು. ಶಾಸಕರ ನಡುವೆ ವಾಕ್ಸಮರ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಸಭಾಪತಿಯವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ವಿಧಾನ ಪರಿಷತ್‌ನಲ್ಲಿ ಬರ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಶಿವಕುಮಾರ್, ಬಿತ್ತನೆ ಮಾಡದ ರೈತರಿಗೂ ಪರಿಹಾರ ನೀಡಬೇಕು ಹಾಗೂ ಫಸಲ್ ಬಿಮಾ, ಕೆಲಸದ ದಿನಗಳ ವಿಸ್ತರಣೆಗೆ ಆಗ್ರಹಿಸಿದರು. ಅಲ್ಲದೆ, ನೀರಿನ ಅಭಾವದಿಂದ ನಷ್ಟಕ್ಕೊಳಗಾದ ಮೀನುಗಾರರು ಮತ್ತು ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಹಣಕಾಸು ಇಲಾಖೆಯ ಗೌಪ್ಯ ಟಿಪ್ಪಣಿ ಬಹಿರಂಗವಾದ ಹಿನ್ನೆಲೆಯಲ್ಲಿ, ಬೆಳಿಗ್ಗೆ 10.30ಕ್ಕೆ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ಶಾಸಕರು ಮತ್ತು ಎಂಎಲ್‌ಸಿಗಳು ಧರಣಿ ನಡೆಸಲಿದ್ದಾರೆ. ‘ಸರ್ಕಾರ ದಿವಾಳಿಯಾಗಿದೆ’ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿದ್ದಾರೆ.
ಸೋಪು, ಶಾಂಪೂ, ಟೂತ್‌ಪೇಸ್ಟ್ ಸೇರಿದಂತೆ ಕಾಸ್ಮೆಟಿಕ್ಸ್ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ‘ಲೀಗಲ್ ಮೆಟ್ರಾಲಜಿ’ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಪ್ಯಾಕೆಟ್‌ಗಳ ಮೇಲೆ ಸಸ್ಯಾಹಾರಿ ಉತ್ಪನ್ನಗಳಿಗೆ ಹಸಿರು ಹಾಗೂ ಮಾಂಸಾಹಾರಿ ಮೂಲದ ಉತ್ಪನ್ನಗಳಿಗೆ ಕಂದು ಬಣ್ಣದ ಚುಕ್ಕೆ ಹಾಕುವುದು ಕಡ್ಡಾಯವಾಗಿದೆ. ಮತ್ತಷ್ಟು ಓದಿ
ನಕಲಿ ಔಷಧಗಳ ಹಾವಳಿಯನ್ನು ತಡೆಯಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವೈದ್ಯರು ಹಾಗೂ ಫಾರ್ಮಸಿಸ್ಟ್‌ಗಳು ಔಷಧ ನೀಡುವಾಗ ಅನುಸರಿಸಬೇಕಾದ ಹೊಸ ನಿಯಮಗಳನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಹೆಚ್.ಬಿ.ಆರ್ ಲೇಔಟ್ 5ನೇ ಬ್ಲಾಕ್‌ನಲ್ಲಿ ಸೆಪ್ಟೆಂಬರ್ 20ರ ಸಂಜೆ ನಡೆದುಕೊಂಡು ಹೋಗುತ್ತಿದ್ದ ಯುವಕನ ಕೈಯಲ್ಲಿದ್ದ ಐಫೋನ್ ಕಸಿದು ಸ್ಕೂಟರ್ ಸವಾರ ಪರಾರಿಯಾಗಿದ್ದಾನೆ. ಈ ಕೃತ್ಯದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಬಳಿ ಟಾಟಾ ಏಸ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಹುಲ್ಲೇಶ್ ವಾಲಿಕಾರ ಹಾಗೂ ಮಾರುತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಕುಂದ್ ಸ್ಟೀಲ್ ಕಂಪನಿ ನೌಕರರಾದ ಇವರು ರಾತ್ರಿ ಕೆಲಸಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದ್ದು, ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಇಂದು ಬರ ಸ್ಥಿತಿ, ಪರಿಹಾರ ಮತ್ತು ರೈತರ ಸಂಕಷ್ಟದ ಕುರಿತು ಉಭಯ ಸದನಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯಲಿದೆ. ಸರ್ಕಾರದ ನಡೆ ವಿರುದ್ಧ ವಿಪಕ್ಷಗಳು ಮುಗಿಬೀಳಲಿದ್ದು, ಸಂಜೆ ವೇಳೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ.
ರೇಷನ್ ಕಾರ್ಡ್ ಇ-ಕೆವೈಸಿಗಾಗಿ ಆಧಾರ್ ಕಾರ್ಡ್ ತಿದ್ದುಪಡಿ ಕಡ್ಡಾಯವಾದ ಹಿನ್ನೆಲೆಯಲ್ಲಿ, ಕೊಪ್ಪಳ ಡಿಸಿ ಕಚೇರಿಯ ‘ಗ್ರಾಮ ಒನ್’ ಕೇಂದ್ರದ ಮುಂದೆ ಸಾರ್ವಜನಿಕರು ಬೆಳಗಿನ ಜಾವ 4 ಗಂಟೆಯಿಂದಲೇ ಕ್ಯೂ ನಿಂತಿದ್ದಾರೆ. ದಿನಕ್ಕೆ ಕೇವಲ 50 ಕೂಪನ್ ನೀಡಲಾಗುತ್ತಿದ್ದು, ಜನರು ಪರದಾಡುವಂತಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2020ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ರಿಷಿ ಆನಂದ್ ಅವರನ್ನು ನೇಮಿಸಿ ಡಿಪಿಎಆರ್ ಆದೇಶಿಸಿದೆ. ಹಾಲಿ ಸಿಇಒ ಹೇಮಂತ್ ಎನ್. ಅವರನ್ನು ಹುಬ್ಬಳ್ಳಿಯ ‘ಹೆಸ್ಕಾಮ್’ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್ಥಿಕ ಇಲಾಖೆ ಮಾಹಿತಿ ಲೀಕ್ ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ-ಡಿಸಿಎಂ, ಗೌಪ್ಯತೆ ಕಾಯದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಜೊತೆಗೆ ಗ್ಯಾರಂಟಿ ಸಮಿತಿ ರಚನೆ, ಬರ ನಿರ್ವಹಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಗಳೂರು ತಾಲೂಕನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಂಚೆ ಮೂರು ಬಾರಿ ಬರ ಪಟ್ಟಿಯಿಂದ ಕೈಬಿಟ್ಟಿದ್ದಾಗ ಬಿಜೆಪಿ ಬಂದ್ ನಡೆಸಿ ಪ್ರತಿಭಟಿಸಿತ್ತು. ಇದೀಗ ಪಟ್ಟಿಗೆ ಸೇರ್ಪಡೆಯಾಗಿದ್ದಕ್ಕೆ ವಿಜಯೋತ್ಸವ ಆಚರಿಸಲಾಗಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆಯಲ್ಲಿ ಪತಿ ಫರಾನ್ ಪಾಷಾ ವಿರುದ್ಧ ಪತ್ನಿ ರುಮಾನಾಝ್ ದೂರು ನೀಡಿದ್ದಾರೆ. ಮನೆಯಲ್ಲಿ 5 ತಿಂಗಳ ಮಗುವಿದ್ದರೂ ಗಾಂಜಾ-ಡ್ರಗ್ಸ್ ಸೇವಿಸಿ, ಮಾರಾಟ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಪತಿಯು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Published On - 8:18 am, Wed, 23 September 26