ಪಕ್ಕಾ ನ್ಯೂಸ್ ಅಂದ್ರೆ ಟಿವಿ9 -ನಿಖರ ಮಾಹಿತಿಯನ್ನಷ್ಟೇ ಜನರ ಮುಂದಿಡುತ್ತದೆ..
ಟಿವಿ9 ಕನ್ನಡ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಸತ್ಯ ಸುದ್ದಿಗಳ ನೆರಳಲ್ಲಿಯೇ ತನ್ನ ಕೆಲಸ, ಜವಾಬ್ದಾರಿಯನ್ನ ನಿರ್ವಹಿಸಿ ಕನ್ನಡ ನಾಡಿನ ಜನರ ಹೃದಯದಲ್ಲಿ ಮನೆ ಮಾತಾಗಿದೆ. ಟಿವಿ9 ಕನ್ನಡ ತನ್ನ ನೇರ, ನಿಷ್ಪಕ್ಷ ಹಾಗೂ ಪಕ್ಕಾ ಸುದ್ದಿಗಳ ವಿಶ್ಲೇಷಣೆಯಿಂದ ಇಂದಿಗೂ ಸಹ ನಂಬರ್ 1 ಸುದ್ದಿವಾಹಿನಿಯಾಗಿ ಜನ ಮಾನಸದಲ್ಲಿ ಅಚ್ಚಳಿಯದಂತೆ ನೆಲೆಸಿದೆ. ಟಿವಿ9 ಕನ್ನಡ ತನ್ನ ಧ್ಯೇಯ ವಾಕ್ಯದಂತೆಯೆ ಎಲ್ಲಾ ಮೂಲಗಳಿಂದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಅದನ್ನು ಜನರ ಮುಂದಿಡುತ್ತಿದೆ. ಈಗ ಅಂತಹುದೆ ಕೆಲಸವನ್ನು […]
ಟಿವಿ9 ಕನ್ನಡ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಸತ್ಯ ಸುದ್ದಿಗಳ ನೆರಳಲ್ಲಿಯೇ ತನ್ನ ಕೆಲಸ, ಜವಾಬ್ದಾರಿಯನ್ನ ನಿರ್ವಹಿಸಿ ಕನ್ನಡ ನಾಡಿನ ಜನರ ಹೃದಯದಲ್ಲಿ ಮನೆ ಮಾತಾಗಿದೆ.
ಟಿವಿ9 ಕನ್ನಡ ತನ್ನ ನೇರ, ನಿಷ್ಪಕ್ಷ ಹಾಗೂ ಪಕ್ಕಾ ಸುದ್ದಿಗಳ ವಿಶ್ಲೇಷಣೆಯಿಂದ ಇಂದಿಗೂ ಸಹ ನಂಬರ್ 1 ಸುದ್ದಿವಾಹಿನಿಯಾಗಿ ಜನ ಮಾನಸದಲ್ಲಿ ಅಚ್ಚಳಿಯದಂತೆ ನೆಲೆಸಿದೆ.
ಟಿವಿ9 ಕನ್ನಡ ತನ್ನ ಧ್ಯೇಯ ವಾಕ್ಯದಂತೆಯೆ ಎಲ್ಲಾ ಮೂಲಗಳಿಂದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಅದನ್ನು ಜನರ ಮುಂದಿಡುತ್ತಿದೆ. ಈಗ ಅಂತಹುದೆ ಕೆಲಸವನ್ನು ಟಿವಿ9 ಮಾಡಿದ್ದು ಜನರ ನಂಬಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.
ಹೌದು.. ಕೆಲವು ದಿನಗಳಿಂದ ಕರ್ನಾಟಕದ ಜನರ ನಿದ್ದೆ ಕೆಡಿಸಿರುವ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರಂಭದ ದಿನದಿಂದಲ್ಲೂ ನಿಮ್ಮ ಟಿವಿ9 ನಿಖರ ಮಾಹಿತಿಯನ್ನೇ ನಿಮ್ಮ ಮುಂದಿಡುತ್ತಿದೆ.
ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ನಡೆದ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ, CCB ಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪಿನ ಬಗೆಗಿನ ಸುದ್ದಿ ವಿಚಾರದಲ್ಲೂ ಅಷ್ಟೇ. ಟಿವಿ9 ಮಾತ್ರ ನ್ಯಾಯಾಧೀಶರು ನೀಡುವ ತೀರ್ಪಿನವರೆಗೂ ಕಾಯುತ್ತಲೇ ಇದ್ದು.. ನ್ಯಾಯಾಧೀಶರ ತೀರ್ಪಿನ ನಂತರವಷ್ಟೇ ಸತ್ಯಾಂಶವನ್ನು ಜನರ ಮುಂದಿಟ್ಟಿತು.
ನಟಿ ಸಂಜನಾ ಗಲ್ರಾನಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ನ್ಯಾಯಾಲಯ ಸರಿ ಸುಮಾರು 5.30 ಗಂಟೆಯ ನಂತರ ಪ್ರಕಟಿಸಿತು. ಜಾಮೀನು ಅರ್ಜಿ ವಿಚಾರಣೆ ಸಂಜೆ 4 ಗಂಟೆಯಿಂದಲೆ ಆರಂಭವಾಗಿತ್ತು. ಆದರೆ ಟಿವಿ9 ಮಾತ್ರ ಕೋರ್ಟ್ ತೀರ್ಪು ಬಂದ ನಂತರವಷ್ಟೇ ನಿಖರ ಸುದ್ದಿಯನ್ನು ಪ್ರಸಾರ ಮಾಡಿತು.
ನಿಖರ ಮಾಹಿತಿಗಳನ್ನೇ ಜನರ ಮುಂದಿಡುವುದು ಟಿವಿ9 ನ ಧ್ಯೇಯವಾಗಿದ್ದು, ಅದು ಈಗಲೂ ಸಹ ಮುಂದುವರೆದಿದೆ. ಇನ್ನು ಮುಂದೆಯೂ ಸಹ ನಿಮ್ಮ ಟಿವಿ9 ಜನರ ನಂಬಿಕೆಗೆ ಬದ್ಧವಾಗಿರಲಿದೆ.
ಇದನ್ನೂ ಓದಿ…
ಸಂಜನಾಗೆ ಸಿಗಲಿಲ್ಲ ರಿಲೀಫ್.. ಪರಪ್ಪನ ಅಗ್ರಹಾರ ಜೈಲೇ ಗಟ್ಟಿ
Published On - 9:33 am, Thu, 17 September 20