Army Chopper Crash: ಉಡುಪಿಯ ಹೆಮ್ಮೆಯ ಅಳಿಮಯ್ಯ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಸಾವು ತಿಳಿಯುತ್ತಿದ್ದಂತೆ ಸಾಲ್ಮರದ ಮನೆಯಲ್ಲಿ ಮೌನ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಗ್ರಾಮದ ನಿವಾಸಿಗಳಾದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೇಸ್ ಪ್ರಫುಲ್ಲ ಮಿನೇಜಸ್ ಅವರನ್ನು ವಿವಾಹವಾಗಿದ್ದರು.
ಉಡುಪಿ: ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯನಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಉಡುಪಿಯ ಹೆಮ್ಮೆಯ ಅಳಿಮಯ್ಯ ಹೆಲಿಕಾಪ್ಟರ್ ದುರಂತದಲ್ಲಿ ಅಂತ್ಯ ಕಂಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಗ್ರಾಮದ ನಿವಾಸಿಗಳಾದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೇಸ್ ಪ್ರಫುಲ್ಲ ಮಿನೇಜಸ್ ಅವರನ್ನು ವಿವಾಹವಾಗಿದ್ದರು. ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಫುಲ್ಲಾ ಅವರನ್ನು ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಪ್ರೀತಿಸಿ ಮದುವೆಯಾಗಿದ್ದರು. ಈಗ ದುರಂತ ಘಟನೆ ಬಳಿಕ ಪ್ರಫುಲ್ಲಾ ಅವರ ಮನೆಯಲ್ಲಿ ಸೂತಕ ಆವರಿಸಿದೆ. ತಾಯಿ ಮೇರಿ, ಅಕ್ಕ- ಬಾವ ಕಣ್ಣೀರು ಹಾಕಿದ್ದಾರೆ.
ಪ್ರಫುಲ್ಲಾ ಸದ್ಯ ಲೆಫ್ಟಿನೆಂಟ್ ಹುದ್ದೆಯಲ್ಲಿದ್ದಾರೆ. ಹರ್ಜಿಂದರ್ ಸಿಂಗ್ ಮತ್ತು ಪ್ರಫುಲ್ಲಾ ಕರ್ತವ್ಯದಲ್ಲಿದ್ದಾಗ ಇಬ್ಬರು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ತಂದೆ-ತಾಯಿ ನೋಡಲು ಹಲವು ಬಾರಿ ಸಾಲ್ಮರಕ್ಕೆ ಭೇಟಿ ಕೊಟ್ಟಿದ್ದರು. ರಜೆ ಇದ್ದಾಗಲೆಲ್ಲ ಇಲ್ಲಿಗೆ ಬಂದು ಹೋಗುತ್ತಿದ್ದರು. ಪ್ರಫುಲ್ಲಾ ಕುಟುಂಬಸ್ಥರ ಜೊತೆ ಆತ್ಮೀಯ ಒಳನಾಟ ಹೊಂದಿದ್ದ ಹರ್ಜಿಂದರ್ ಸಿಂಗ್ ಸಾವಿನ ಸುದ್ದಿ ಕಿವಿಗೆ ಬಿದ್ದಂತೆ ಕುಟುಂಬಸ್ಥರು ಶೋಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಝೂಮ್ ವಿಡಿಯೋ ಕಾಲ್ನಲ್ಲಿ 900ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿದ ವಿಧಾನಕ್ಕೆ ವಿಶಾಲ್ ಗರ್ಗ್ ಕ್ಷಮೆ