ಸೆಲ್ಫಿ ವಿಥ್​ ಸಂಸದೆ ಶೋಭಾ ಕರಂದ್ಲಾಜೆ: ವಿಜೇತ 5 ಮಂದಿಗೆ ತಲಾ 5 ಸಾವಿರ ನೀಡುವುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ

ಉಡುಪಿಗೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡಕ್ಕೆ ನಳಿನ್ ಕಟೀಲು ಇಬ್ಬರು ಇರುವ ತನಕ ಕ್ಷೇತ್ರ ಉದ್ಧಾರ ಆಗಲ್ಲ. ರಾಜ್ಯ ಬಿಜೆಪಿ ಸರಕಾರ ನಿದ್ದೆ ಮಾಡುತ್ತಿದೆ.

ಸೆಲ್ಫಿ ವಿಥ್​ ಸಂಸದೆ ಶೋಭಾ ಕರಂದ್ಲಾಜೆ: ವಿಜೇತ 5 ಮಂದಿಗೆ ತಲಾ 5 ಸಾವಿರ ನೀಡುವುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ
ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಮುಖಂಡ ಮಿಥುನ್ ರೈ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 28, 2022 | 12:37 PM

ಉಡುಪಿ: ರಸ್ತೆ ಅವ್ಯವಸ್ಥೆ ಹಿನ್ನೆಲೆ ಕಾಂಗ್ರೆಸ್​ನಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ವಿಥ್​ ಸೆಲ್ಪಿ (Selfie with MP Shobha Karandlaje) ವಿನೂತನ ಪ್ರತಿಭಟನೆ ಮಾಡಲಾಗಿದೆ. ಉಡುಪಿಯಿಂದ ಮಲ್ಪೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ವಿಜೇತ 5 ಮಂದಿಗೆ ತಲಾ 5 ಸಾವಿರ ನೀಡುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ ಮಾಡಿದ್ದಾರೆ. ಸಂಸದೆ ಶೋಭಾ ಜೊತೆಗೆ ಸೆಲ್ಪಿ ತೆಗೆದು ಕಳುಹಿಸುವ ವಿಶೇಷ ಸ್ಪರ್ಧೆ  ಆಯೋಜನೆ ಮಾಡಿದ್ದು, ಅಕ್ಟೋಬರ್ 6 ರಿಂದ 14ರೊಳಗೆ ಉಡುಪಿ, ಕಾಪು, ಕುಂದಾಪುರದಲ್ಲಿ ಶೋಭಾ ಜೊತೆ ಸೆಲ್ಫಿ ತೆಗೆದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಬೇಕು. ಅಕ್ಟೋಬರ್ 14ರ ನಂತರವೂ ಸಂಸದೆ ಶೋಭಾ ಉಡುಪಿಗೆ ಬಾರದೇ ಇದರೆ, ಎಲ್ಲಾ ಠಾಣೆಯಲ್ಲೂ ನಾಪತ್ತೆ ದೂರು ದಾಖಲಿಸುತ್ತೇವೆ. ಉಡುಪಿಯ ಪ್ಲೈ ಓವರ್ ಮೇಲೆ ಶೋಭಾ ಕರಂದ್ಲಾಜೆ ಪೋಸ್ಟರ್ ಅಂಟಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ ಮಿಥುನ್ ರೈ ವ್ಯಂಗವಾಡಿದ್ದಾರೆ.

ಉಡುಪಿಗೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡಕ್ಕೆ ನಳಿನ್ ಕಟೀಲು ಇಬ್ಬರು ಇರುವ ತನಕ ಕ್ಷೇತ್ರ ಉದ್ಧಾರ ಆಗಲ್ಲ. ರಾಜ್ಯ ಬಿಜೆಪಿ ಸರಕಾರ ನಿದ್ದೆ ಮಾಡುತ್ತಿದೆ. ಘೋರ ನಿದ್ರೆಯಲ್ಲಿರುವ ಶಾಸಕ ರಘುಪತಿ ಭಟ್ ಮಣಿಪಾಲದಲ್ಲಿ ರಾತ್ರಿ ದುಡ್ಡು ಎಣಿಸುವುದರಲ್ಲಿ ಬ್ಯುಸಿ ಇದ್ದಾರೆ. ಗುತ್ತಿಗೆದಾರರು ಭಟ್‌ರಿಗೆ, ಶೋಭಾ ಕರಂದ್ಲಾಜೆ ಶೇ.40 ಕಮಿಷನ್ ಕೊಟ್ಟಿಲ್ಲ ಅಂತಾನೇ ರಸ್ತೆ ದುರಸ್ತಿಗೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಸ್ತೆಯ ಅವ್ಯವಸ್ಥೆಯಿಂದಾಗಿ ಅಮಾಯಕರ ಬಲಿಯಾಗುತ್ತಿದೆ. ರಾಜ್ಯ ಬಿಜೆಪಿ ಸರಕಾರ ಎಚ್ಚೆತ್ತುಕೊಳ್ಳಲಿ. ಅಧಿಕಾರಿಗಳ ಭ್ರಷ್ಟಚಾರ ಕೊನೆಗೊಳ್ಳಲಿ. ದುಷ್ಟರ ಸಂಹಾರಕ್ಕೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಮಿಥುನ್ ರೈ ಎಚ್ಚರಿಸಿದರು.

ಮುಖಂಡರಾದ ಅಮೃತ್ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಯತೀಶ್ ಕರ್ಕೇರ, ಬಿ.ನರಸಿಂಹ ಮೂರ್ತಿ, ಆನಂದಿ, ಉದ್ಯಾವರ ನಾಗೇಶ್ ಕುಮಾರ್, ಅಣ್ಣಯ್ಯ ಶೇರಿಗಾರ್, ಮೀನಾಕ್ಷಿ ಮಾಧವ ಬನ್ನಂಜೆ, ಫಾ. ವಿಲಿಯಂ ಮಾರ್ಟಿಸ್, ಗಣೇಶ್ ನೆರ್ಗಿ, ವೆರೆನಿಕಾ ಕರ್ನೇಲಿಯೋ, ಡಾ. ಸುನೀತಾ ಶೆಟ್ಟಿ, ಪ್ರಶಾಂತ್ ಜತ್ತನ್ನ, ರೋಶನಿ ಒಲಿವೆರಾ,  ಬಿ. ಕುಶಲ ಶೆಟ್ಟಿ, ಸುರಯ್ಯ ಅಂಜಮ್, ಲೂವಿಸ್ ಲೋಬೊ, ದಿನೇಶ್ ಪುತ್ರನ್, ಸುಂದರ್ ಮಾಸ್ಟರ್, ನಾರಾಯಣ ಕುಂದರ್ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada