ಬಿಜೆಪಿಯ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಬೇಕು, ಇಲ್ಲದಿದ್ದರೆ ಅವರು ಹೋಗಿದ್ದೇ ದಾರಿಯಾಗುತ್ತೆ: ಪ್ರಮೋದ್ ಮುತಾಲಿಕ್

ದತ್ತಾತ್ರೇಯ ಹೊಸಬಾಳೆ ಅವರು ಆರ್​ಎಸ್​ಎಸ್​ನಲ್ಲಿ 2ನೇ ಸ್ಥಾನದಲ್ಲಿರುವ ನಾಯಕ. ಅವರು ಅಧ್ಯಯನ ಮಾಡಿಯೇ ವಾಸ್ತವ ಸ್ಥಿತಿಯ ಬಗ್ಗೆ ತಿಳಿಸಿರುತ್ತಾರೆ’ ಎಂದು ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು.

ಬಿಜೆಪಿಯ ತಪ್ಪುಗಳನ್ನು ಯಾರಾದರೂ ಒಬ್ಬರು ಹೇಳಬೇಕು, ಇಲ್ಲದಿದ್ದರೆ ಅವರು ಹೋಗಿದ್ದೇ ದಾರಿಯಾಗುತ್ತೆ: ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 05, 2022 | 1:55 PM

ಉಡುಪಿ: ‘ದೇಶದಲ್ಲಿ ಎದ್ದು ಕಾಣುತ್ತಿರುವ ಆರ್ಥಿಕ ಅಸಮಾನತೆ ಕುರಿತು ಆರ್​ಎಸ್​ಎಸ್​ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬಾರದು’ ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೇಶದ ಬಗ್ಗೆ ಕಳಕಳಿ ಮತ್ತು ವೇದನೆಯಿಂದ ಅವರು ಆ ಮಾತು ಆಡಿದ್ದಾರೆ. ಅದರಲ್ಲಿ ಸಿಟ್ಟು ಅಥವಾ ತಪ್ಪು ಸಂದೇಶ ನೀಡುವ ಉದ್ದೇಶ ಇಲ್ಲ. ಅವರೇನು ರಾಜಕೀಯದ ವ್ಯಕ್ತಿಯಲ್ಲ. ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿಯ ಒಳಗೆ ಆಗುವ ತಪ್ಪುಗಳನ್ನು ಒಬ್ಬರು ಹೇಳಲೇಬೇಕಿದೆ. ಇಲ್ಲದಿದ್ದರೆ ಬಿಜೆಪಿ ನಾಯಕರು ತಾವು ನಡೆದದ್ದೇ ದಾರಿ ಎಂದು ಭಾವಿಸುವ ಅಪಾಯವಿದೆ’ ಎಂದು ಹೇಳಿದರು.

‘ದತ್ತಾತ್ರೇಯ ಹೊಸಬಾಳೆ ಅವರು ಆರ್​ಎಸ್​ಎಸ್​ನಲ್ಲಿ 2ನೇ ಸ್ಥಾನದಲ್ಲಿರುವ ನಾಯಕ. ಅವರು ಅಧ್ಯಯನ ಮಾಡಿಯೇ ವಾಸ್ತವ ಸ್ಥಿತಿಯ ಬಗ್ಗೆ ತಿಳಿಸಿರುತ್ತಾರೆ. ಆರ್ಥಿಕ ಅಸಮಾನತೆ ವಿಚಾರದಲ್ಲಿ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಹೊಸಬಾಳೆ ಹೇಳಿಕೆಯನ್ನು ಸ್ವೀಕರಿಸಿ ಬಿಜೆಪಿಯು ಸುಧಾರಣೆ ಹಾದಿಯಲ್ಲಿ ನಡೆಯಬೇಕು’ ಎಂದು ಸಲಹೆ ಮಾಡಿದರು.

ಸ್ವಾತಂತ್ರ್ಯ ಸಿಕ್ಕಾಗಲೇ ಮುಸಲ್ಮಾನರಲ್ಲಿ ರಾಷ್ಟ್ರೀಯತೆ ಬಿತ್ತಬೇಕಿತ್ತು. ಕಾಂಗ್ರೆಸ್​​ ಪಕ್ಷವು ತನ್ನ ತುಷ್ಟೀಕರಣ ನೀತಿಯಿಂದ ಮುಸ್ಲಿಮರನ್ನು ದಾರಿ ತಪ್ಪಿಸಿತು. ಇಂದು ದೇಶದಲ್ಲಿ ಕಾಣುತ್ತಿರುವ ಭಯೋತ್ಪಾದನೆ, ಕೊಲೆ, ಗಲಭೆಗೆ ಕಾಂಗ್ರೆಸ್​​ನ ತುಷ್ಟೀಕರಣವೇ ಕಾರಣ. ಮುಂದೆಯೂ ಮುಸ್ಲಿಮರಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂಬ ನಂಬಿಕೆ ನನ್ನಲ್ಲಿಲ್ಲ. ಮಸೀದಿಗೆ ಭೇಟಿ ನೀಡಿದರೆ ಅವರ ಮನಃಪರಿವರ್ತನೆ ಆಗುವುದಿಲ್ಲ. ನಮ್ಮ ಶತ್ರು ಯಾರು? ಮಿತ್ರ ಯಾರೆಂದು ಸ್ಪಷ್ಟ ಕಲ್ಪನೆ ಇಲ್ಲ. ಹಿಂದೂಗಳು ಸಾವಿರಾರು ವರ್ಷದಿಂದ ಇತರ ಧರ್ಮಗಳೊಂದಿಗೆ ಸೌಹಾರ್ದತೆಯಲ್ಲೇ ಇದ್ದೇವೆ. ಹಿಂದೂ ಸಮಾಜದಲ್ಲಿ ಆಕ್ರಮಣ ಮಾಡುವ ಮಾನಸಿಕತೆ ಇಲ್ಲ. ಆರ್​ಎಸ್​ಎಸ್​ ನಾಯಕರು ಮಸೀದಿಗೆ ಹೋಗುವುದರಿಂದ ಮನವರಿಕೆ ಆಗುತ್ತದೆ ಮಾಡಿಕೊಡುತ್ತೇವೆ ಎನ್ನುವುದು ಅಸಾಧ್ಯದ ಮಾತು ಎಂದರು.

ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ ಎಂಬ ಬರಹ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಫ್​ಐ ಬ್ಯಾನ್ ಮತ್ತು ಕಾರ್ಯಕರ್ತರ ಬಂಧನದಿಂದ ಇವರ ಆಟ ಮುಗಿಯುವುದಿಲ್ಲ. ಪುಂಡಾಟಿಕೆಯ ಕಡಿವಾಣಕ್ಕೆ ಸರ್ಕಾರ ಯೋಜನೆ ರೂಪಿಸಬೇಕು. ಪೊಲೀಸರು, ಗುಪ್ತಚರ ಇಲಾಖೆ ಅಲರ್ಟ್ ಆಗಬೇಕು. ಬಂಟ್ವಾಳದ ಬರಹ ಒಂದು ಎಚ್ಚರಿಕೆಯಾಗಿದೆ. ಪಿಎಫ್​​ಐ ಇನ್ನೂ ಸಕ್ರಿಯವಾಗಿದೆ ಎನ್ನುವುದರ ಸಂಕೇತ ಇದು. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಪೊಲೀಸರೊಂದಿಗೆ ಹಿಂದೂ ಸಮಾಜವು ಸಹಕರಿಸಬೇಕು. ಪೊಲೀಸ್ ಇಲಾಖೆ ಜೊತೆ ಹಿಂದೂ ಸಮಾಜ ಸಹಕರಿಸಬೇಕು ಎಂದು ತಿಳಿಸಿದರು.

Published On - 1:55 pm, Wed, 5 October 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM