TV9 ಸುದ್ದಿ ಪ್ರಸಾರ ಬೆನ್ನಲ್ಲೇ ಲೈಟ್ ಫಿಶಿಂಗ್ ವಿರುದ್ಧ ಕಾರ್ಯಾಚರಣೆಗೆ ಇಳಿದ ಮೀನುಗಾರಿಕೆ ಇಲಾಖೆ
ಉಡುಪಿಯಲ್ಲಿ ಮೀನುಗಾರಿಕೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, ಟಿವಿ9 ವರದಿ ಬಳಿಕ ಅಕ್ರಮ "ಲೈಟ್ ಫಿಶಿಂಗ್" ವಿರುದ್ಧ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ದೋಣಿಗಳಿಗೆ ದಂಡ ವಿಧಿಸಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಜಂಟಿ ತಂಡ ರಚಿಸಲಾಗಿದೆ.

ಉಡುಪಿ, ಮಾರ್ಚ್ 19: ಮೀನುಗಾರಿಕೆ (Fishing) ಈ ಬಾರಿ ಕಂಡು ಕೇಳರಿಯದ ಕುಸಿತ ಕಂಡಿದೆ. ಮೇ ತಿಂಗಳ ಅಂತ್ಯದವರೆಗೆ ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿ, ಸಂಪ್ರದಾಯಿಕ ಮೀನುಗಾರರು ಡಿಸೆಂಬರ್ ಅಂತ್ಯದಲ್ಲಿಯೇ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದ್ದ ಅವೈಜ್ಣಾನಿಕ ಮೀನುಗಾರಿಕೆಯನ್ನು ಟಿವಿ9 ವರದಿ ಪ್ರಸಾರ ಮಾಡಿತ್ತು. ಅವೈಜ್ಞಾನಿಕ ಮೀನುಗಾರಿಕೆ ಬಗ್ಗೆ ಟಿವಿ9ನಲ್ಲಿ ಸುದ್ದಿ ಪ್ರಸಾರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಮೀನುಗಾರಿಕಾ ಇಲಾಖೆ “ಲೈಟ್ ಫಿಶಿಂಗ್” (Light fishing) ಮಾಡುವವರ ವಿರುದ್ಧ ಕಾರ್ಯಚರಣೆಗೆ ಇಳಿದಿದೆ.
ಎರಡು ಸ್ಪೀಡ್ ಬೋಟ್ ಮೂಲಕ ಕಾರ್ಯಚರಣೆಗೆ ಇಳಿದ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸರು, ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಸುತ್ತಿರುವರ ಮೀನುಗಾರರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು. ಅಕ್ರಮ ಮೀನುಗಾರಿಕೆ ನಡೆಸುವರ ಕ್ರಮಕ್ಕೆ ಮುಂದಾಗಿದೆ.
ಆಳ ಸಮುದ್ರದಲ್ಲಿ ನಡೆಯುತ್ತಿರುವ ಅವೈಜ್ಣಾನಿಕ ಮೀನುಗಾರಿಕೆಯಿಂದ ಮೀನಿನ ಸಂತತಿ ಕಡಿಮೆಯಾಗುತ್ತಿದ್ದು, ಮೀನುಗಾರಿಕಾ ಸಚಿವರು, ಇಲಾಖೆ, ಸರ್ಕಾರ ಯಾವುದೇ ಕ್ರಮ ಕೈಗೊಳುತ್ತಿಲ್ಲ. ನಿಷೇಧದ ನಡುವೆಯೂ ಆಳ ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ ಈ ಬಗ್ಗೆ ಟಿವಿ9 ಜತೆ ನಾಡದೋಣಿ ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದರು. ಮೀನಿನ ಸಂತತಿ ಕಡಿಮೆಯಾಗಲು ಕಾರಣ ಹುಡುಕಿಕೊಂಡು ಹೋದ ಟಿವಿ9 ತಂಡಕ್ಕೆ ಕಂಡಿದ್ದು ಅಕ್ರಮ ಮೀನುಗಾರಿಕೆ.
ಈ ಅಕ್ರಮ ಮೀನುಗಾರಿಕೆಯಿಂದ ದೊಡ್ಡ ಮೀನುಗಳ ಜೊತೆ ಸಣ್ಣ ಮೀನುಗಳು ಅಕ್ರಮ ಶಿಕಾರಿ ಮಾಡುವ ಮೀನುಗಾರರ ಬೆಲೆಗೆ ಬಿದ್ದು ಮೀನಿನ ಸಂತತಿ ಕಡಿಮೆ ಆಗುತ್ತದೆ ಎಂಬುದು ನಾಡ ದೋಣಿ ಮೀನುಗಾರರ ಮಾತು. ಈ ಬಗ್ಗೆ ಹಿಂದೆ ಸಾಕಷ್ಟು ಬಾರಿ ನಾಡ ದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರು ಪ್ರತಿಭಟನೆಯನ್ನು ನಡೆಸಿದರು. ಮೀನುಗಾರಿಕಾ ಸಚಿವರಿಗೂ ಮನವಿ ಮಾಡಿದರು. ಆದರೆ ಇದರಿಂದ ಯಾವುದೇ ಪ್ರಯೋಜನ ನಾಡ ದೋಣಿ ಮೀನುಗಾರರಿಗೆ ಆಗಲಿಲ್ಲ.
ಬದಲಾಗಿ ವರ್ಷದಿಂದ ವರ್ಷಕ್ಕೆ ಮೀನಿನ ಸಂತತಿ ಕಡಿಮೆಯಾಗುತ್ತಾ ಬಂತು. ನಾಡದುಣಿ ಮೀನುಗಾರರ ಧ್ವನಿಯಾಗಿ ಟಿವಿ9 ತಂಡ ಆಳ ಸಮುದ್ರಕ್ಕೆ ಇಳಿದ ಸಂದರ್ಭದಲ್ಲಿ ಅಲ್ಲಿ ಆಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದದನ್ನು ಎಳೆಎಳೆಯಾಗಿ ಜನತೆ ಮತ್ತು ಮೀನುಗಾರಿಕಾ ಸಚಿವರ ಮುಂದೆ ಇಟ್ಟಿತ್ತು. ಇದರ ಬೆನ್ನಲ್ಲೇ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸ್ ಎಚ್ಚೆತ್ತುಕೊಂಡು ಆಳ ಸಮುದ್ರದಲ್ಲಿ ಕಾರ್ಯಾಚರಣೆಗೆ ಇಳಿದಿದೆ.
ಕರಾವಳಿ ಕಾವಲು ಪೊಲೀಸರು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿದ್ದು ಮೂರು ಬೋಟುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರಿಗೆ ತಿಳಿಸಲಾಗಿತ್ತು. ಅವರು ವಿಚಾರಣೆ ನಡೆಸಿ ಬೋಟುಗಳ ಮಾಲಕರಿಗೆ ಒಟ್ಟು 16 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಮತ್ತೂಂದು ಬೋಟ್‌ನಲ್ಲಿ ಬೆಳಕು ಮೀನುಗಾರಿಕೆ ನಡೆಸಲು ಜನರೇಟರ್‌ಅಳವಡಿಸಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಅವರಿಗೂ 5 ಸಾವಿರ ರೂ. ದಂಡ ಹಾಕಲಾಗಿದೆ. ಬೋಟುಗಳಲ್ಲಿ ಅಳವಡಿಸಿದ ಜನರೇಟರ್ ಹಾಗೂ ಬೆಳಕು ಮೀನುಗಾರಿಕೆಗೆ ಸಂಬಂಧಿಸಿದ ಲೈಟಿಂಗ್ ಉಪಕರಣಗಳನ್ನು ತೆರವುಗೊಳಿಸಿ ಬೋಟ್ ಅನ್ನು ಬಿಡುಗಡೆಗೊಳಿಸಲಾಗಿದೆ. ನಿಷೇಧಿತ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್‌ಗಳನ್ನು ತಡೆಯಲು ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲು ಪೊಲೀಸ್ ವತಿಯಿಂದ ಜಂಟಿಯಾಗಿ ಫೈಯಿಂಗ್ ಸ್ಕ್ಯಾಡ್ ರಚಿಸಿದ್ದು ತಂಡವು ಮಲ್ಪೆ ಹಾಗೂ ಗಂಗೊಳ್ಳಿ ಬಂದರಿನಲ್ಲಿ ನಿರಂತರ ತಪಾಸಣೆ ನಡೆಸಲು ಆರಂಭಿಸಿದೆ.
ಇದನ್ನೂ ಓದಿ: ಸಮುದ್ರದ ಆಳದಲ್ಲಿ ಅಕ್ರಮ ಶಿಕಾರಿ: ನಿಷೇಧದ ನಡುವೆಯೂ ನಡೆಯುತ್ತಿದೆ ಮತ್ಸ್ಯ ಬೇಟೆ
ಒಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ನಾಡ ದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರಿಗೆ ಸಮಸ್ಯೆಯಾಗುತ್ತಿದ್ದ ಲೈಟ್ ಫಿಶಿಂಗ್ ಸುದ್ದಿ ಪ್ರಸಾರ ಬೆನ್ನಲ್ಲೇ ಮೀನುಗಾರಿಕಾ ಇಲಾಖೆ ಕರಾವಳಿ ಕಾವಲು ಪೊಲೀಸ್ ಎಚ್ಚೆತ್ತುಕೊಂಡಿದೆ. ಆಕ್ರಮ ಮೀನಿನ ಶಿಕಾರಿ ನಡೆಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 19 March 25