AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಿಂದಲೇ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಕಾರ್ಯಾಚರಣೆ ಶಂಕೆ: 8 ಜನರ ಬಂಧನ

ಉಡುಪಿಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಜಾಲ ಕಾರ್ಯಾಚರಣೆ ಶಂಕೆ ವ್ಯಕ್ತವಾಗಿದ್ದು, 8 ಜನರನ್ನು ಬಂಧಿಸಲಾಗಿದೆ. ಕಾಲ್ ಸೆಂಟರ್‌ನಂತೆ ಕಾರ್ಯನಿರ್ವಹಿಸುತ್ತಿದ್ದ ಈ ಜಾಲವು ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಗೆ ಮಾದಕವಸ್ತು ಪೂರೈಸುತ್ತಿತ್ತು ಎಂದು ಶಂಕಿಸಲಾಗಿದೆ. ಉಡುಪಿಯಲ್ಲಿ ಕಾಲ್ ಸೆಂಟರ್​ ಇದ್ದ ಶಂಕೆ ವ್ಯಕ್ತವಾಗಿದೆ.

ಉಡುಪಿಯಿಂದಲೇ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಕಾರ್ಯಾಚರಣೆ ಶಂಕೆ: 8 ಜನರ ಬಂಧನ
Ncb
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 03, 2025 | 11:54 AM

Share

ಉಡುಪಿ, ಜುಲೈ 03: ಭಾರತೀಯ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ (NCB) ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಬೇಧಿಸಿದ್ದು, ಎಂಟು ಜನರನ್ನು ಬಂಧಿಸಲಾಗಿದೆ (Arrested). ಗ್ರಾಹಕರ ಕರೆಗಳನ್ನು ಸ್ವೀಕರಿಸಲು ಉಡುಪಿಯಲ್ಲಿ ಕಾಲ್ ಸೆಂಟರ್​ ಇದ್ದ ಶಂಕೆ ವ್ಯಕ್ತವಾಗಿದೆ. ತಮಿಳು ಮೂಲದ ಆರೋಪಿ ಜಾಯಲ್ ಅಲ್ಬಾ ಎಂಬಾತನನ್ನು ಎನ್​ಸಿಬಿ ಅಧಿಕಾರಿಗಳು ಉಡುಪಿಯಲ್ಲಿ ಬಂಧಿಸಿದ್ದಾರೆ.

ಆಪರೇಷನ್ ಮೇಡ್ ಮ್ಯಾಕ್ಸ್ ಹೆಸರಿನಲ್ಲಿ ಕಾರ್ಯಾಚರಣೆ

ಭಾರತದ ಮಾದಕ ದ್ರವ್ಯ ನಿಯಂತ್ರಣ ಬ್ಯುರೋ ಕಳೆದ ಮೇ ತಿಂಗಳಲ್ಲಿ ‘ಆಪರೇಷನ್ ಮೇಡ್ ಮ್ಯಾಕ್ಸ್’ ಹೆಸರಲ್ಲಿ  ಅಮೆರಿಕ, ಆಸ್ಟ್ರೇಲಿಯಾ, ಭಾರತ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳು ಮತ್ತು ನಾಲ್ಕು ಖಂಡಗಳಲ್ಲಿ ಕಾರ್ಯಚರಣೆಗೆ ಇಳಿದಿತ್ತು.

ಇದನ್ನೂ ಓದಿ: ವಸತಿ ಯೋಜನೆಯಲ್ಲಿ ಮತ್ತೊಂದು ಭ್ರಷ್ಟಾಚಾರ ಆರೋಪ: ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ!

ಇದನ್ನೂ ಓದಿ
Image
ಮತ್ತೊಂದು ಭ್ರಷ್ಟಾಚಾರ ಆರೋಪ: ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ!
Image
ಮಂಗಳೂರು ಪಾಲಿಕೆಯಲ್ಲಿ ನಕಲಿ ತೆರಿಗೆ ನೋಂದಣಿ ಜಾಲ: ಲಕ್ಷಾಂತರ ರೂ ದೋಖಾ
Image
ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ
Image
ಮೆಟ್ರೋ ದರ ಏರಿಕೆ ಪರಿಣಾಮ, ಬಿಎಂಟಿಸಿಗೆ ಹೆಚ್ಚುವರಿ 25 ಲಕ್ಷ ರೂ. ಆದಾಯ!

ದೆಹಲಿ, ಜೈಪುರ, ಉಡುಪಿ ಹಾಗೂ ರೂರ್ಕಿ ಎಲ್ಲಿ ನಡೆಸಿದ್ದ ಕಾರ್ಯಾಚರಣೆ ಬಗ್ಗೆ ಟ್ವೀಟ್ ಮಾಡುವ ಮೂಲಕ ಗ್ರಹ ಸಚಿವ ಅಮಿತ್ ಶಾ ಖಚಿತಪಡಿಸಿದ್ದರು. ಉಡುಪಿ ಸೇರಿದಂತೆ ನಾಲ್ಕು ಪಟ್ಟಣಗಳಿಂದ ಆರೋಪಿಗಳನ್ನು ಎನ್​ಸಿಬಿ ವಶಕ್ಕೆ ಪಡೆದಿತ್ತು. ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ಕಾಲ್ ಸೆಂಟರ್ ಮಾದರಿಯಲ್ಲಿ ಕಾರ್ಯಾಚರಿಸುತ್ತಿದ್ದ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ

ವಿದೇಶಗಳಲ್ಲಿ ನಿಷೇಧಿತ ಔಷಧಿ (ನಾರ್ ಕೋಟಿಕ್ಸ್ ಒಳಗೊಂಡ) ಪೂರೈಸುವ ಜಾಲ ಇದಾಗಿದ್ದು, ಆನ್​ಲೈನ್​ಜಾಹೀರಾತು ಮತ್ತು ಫೋನ್ ಸಂಖ್ಯೆ ಹಂಚಿ ವಿದೇಶಗಳಲ್ಲಿ ಡ್ರಗ್ಸ್ ವಿತರಣೆ ಮಾಡಲಾಗುತ್ತಿತ್ತು. ಗ್ರಾಹಕರ ಕರೆಗಳನ್ನು ಸ್ವೀಕರಿಸಲು ಉಡುಪಿಯಲ್ಲಿ ಕಾಲ್ ಸೆಂಟರ್ ಇದ್ದ ಅನುಮಾನಗಳು ಮೂಡಿವೆ. ಉಡುಪಿಯಲ್ಲಿ ತಮಿಳು ಮೂಲದ ವ್ಯಕ್ತಿಯ ಮೂಲಕ ಕಾರ್ಯಾಚರಣೆ ನಡೆದಿತ್ತು. ಸದ್ಯ ಆತನ ಬಂಧನವಾಗಿದೆ. ದೆಹಲಿ ಮೂಲಕ ಇತರ ದೇಶಗಳಿಗೆ ಡ್ರಗ್ಸ್ ಸರಬರಾಜಾಗುತ್ತಿತ್ತು. ಒಂದು ತಿಂಗಳ ಹಿಂದೆ ಎನ್​ಸಿಬಿ ಅಧಿಕಾರಿಗಳಿಂದ ದೆಹಲಿ ಮೂಲದ ಮುಖ್ಯಸ್ಥ ನನ್ನು ಬಂಧಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:53 am, Thu, 3 July 25