ಉಡುಪಿ: ಮಲ್ಪೆ ಬೀಚ್ ಪ್ರಧಾನ ಆಕರ್ಷಣೆಯಾದ ವಾಟರ್ ಸ್ಪೋರ್ಟ್ಸ್ಗೆ ಬ್ರೇಕ್! ಯಾಕೆ ಗೊತ್ತಾ?
ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಪೆ ಬೀಚ್ ( Malpe beach) ಆಕರ್ಷಣೆಗೆ ಸದ್ಯ ಬ್ರೇಕ್ ಬಿದ್ದಿದೆ. ಸದ್ಯ ಕೇವಲ ಕಡಲ ಕಿನಾರೆಯ ವೀಕ್ಷಣೆ ಮಾಡಲು ಮಾತ್ರ ಮಲ್ಪೆ ಬೀಚ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಗಂತ ಇದು ಬರುವ ಪ್ರವಾಸಿಗರನ್ನ ರಕ್ಷಿಸುವ ನಿಟ್ಟಿನಲ್ಲಿ ಮಾಡಿರುವ ಕ್ರಮ ಎಂದರೆ ತಪ್ಪಾಗಲಾರದು. ಹಾಗಾದ್ರೆ ಏನಿದು ಆಕರ್ಷಣೆ ಯಾಕೆ ಈ ಕ್ರಮ ಅಂತೀರಾ ಈ ಸ್ಟೋರಿ ನೋಡಿ. ಉಡುಪಿ (Udupi) ಜಲ್ಲೆಯ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಮಲ್ಪೆಯ ಸುಂದರ […]

ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಪೆ ಬೀಚ್ ( Malpe beach) ಆಕರ್ಷಣೆಗೆ ಸದ್ಯ ಬ್ರೇಕ್ ಬಿದ್ದಿದೆ. ಸದ್ಯ ಕೇವಲ ಕಡಲ ಕಿನಾರೆಯ ವೀಕ್ಷಣೆ ಮಾಡಲು ಮಾತ್ರ ಮಲ್ಪೆ ಬೀಚ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಗಂತ ಇದು ಬರುವ ಪ್ರವಾಸಿಗರನ್ನ ರಕ್ಷಿಸುವ ನಿಟ್ಟಿನಲ್ಲಿ ಮಾಡಿರುವ ಕ್ರಮ ಎಂದರೆ ತಪ್ಪಾಗಲಾರದು. ಹಾಗಾದ್ರೆ ಏನಿದು ಆಕರ್ಷಣೆ ಯಾಕೆ ಈ ಕ್ರಮ ಅಂತೀರಾ ಈ ಸ್ಟೋರಿ ನೋಡಿ. ಉಡುಪಿ (Udupi) ಜಲ್ಲೆಯ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಮಲ್ಪೆಯ ಸುಂದರ ಕಡಲ ಕಿನಾರೆ ಕೂಡ ಒಂದು. ರಾಜ್ಯದ ಮೂಲೆ ಮೂಲೆಗಳಿಂದಲೂ ಕೂಡ ಇಲ್ಲಿನ ಕಡಲ ಕಿನಾರೆಯಲ್ಲಿ ಸಮಯ ಕಳೆಯಲು ಸಮುದ್ರದ ನೀರಿನಲ್ಲಿ ತೇಲುತ್ತಾ ಸಾಗುವ ಬೋಟ್ ರೈಡಿಂಗ್ (boat facility) ಮತ್ತು ವಾಟರ್ ಸ್ಪೋರ್ಟ್ಸ್ (Water Games) ಎಂಜಾಯ್ ಮಾಡಲು ಇಲ್ಲಿಗೆ ಬರುತ್ತಾರೆ. ಮಲ್ಪೆ ಬೀಚ್ನಲ್ಲಿಯೂ ಹಾಗೆ ಪ್ರವಾಸಿಗರನ್ನ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶಕ್ಕೆ ವಿವಿಧ ತರಹದ ವಾಟರ್ ಸ್ಪೋರ್ಟ್ಸ್ ಗಳನ್ನ ನೋಡಬಹುದಾಗಿದೆ.
ಇನ್ನು ಮಲ್ಪೆ ಕಡಲ ಕಿನಾರೆ ಕಡೆಯಿಂದ ಸಮುದ್ರದ ಅನತಿ ದೂರದಲ್ಲಿರುವ ಸೈಂಟ್ ಮೇರಿಸ್ ಐಲ್ಯಾಂಡ್ ಕೂಡ ಪ್ರವಾಸಿಗರ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕಡಲ ತೀರದಿಂದ ಬೋಟ್ ಮೂಲಕ ಸೈಂಟ್ ಮೇರಿ ದೀಪಕ್ಕೆ ತೆರಳಿ ಅಲ್ಲಿ ಸ್ವಲ್ಪ ಕಾಲ ಕಳೆದು ಮರಳಿ ಬರುವುದು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅತ್ಯಂತ ಇಷ್ಟದ ಕೆಲಸ. ಆದರೆ ಸದ್ಯ ಮಳೆಗಾಲದ ಹಿನ್ನೆಲೆಯಲ್ಲಿ ಬೀಚ್ ಅಭಿವೃದ್ಧಿ ಮಂಡಳಿ ಬೋಟ್ ರೈಡಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಗಳಿಗೆ ಬ್ರೇಕ್ ನೀಡಿದೆ.
ಪ್ರತಿವರ್ಷವೂ ಕೂಡ ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಒಟ್ಟಾಗಿ ಪ್ರವಾಸಿಗರ ಮುಂಜಾಗ್ರತೆಯ ನಿಟ್ಟಿನಲ್ಲಿ ಮಳೆಗಾಲದ ಮೂರು ತಿಂಗಳುಗಳ ಕಾಲ ಇಲ್ಲಿನ ವಾಟರ್ ಸ್ಪೋಟ್ಸ್ ಗಳಿಗೆ ಬ್ರೇಕ್ ನೀಡುತ್ತಾ ಬಂದಿದೆ. ಮಳೆಗಾಲದಲ್ಲಿ ಕಡಲಿನಲ್ಲಿ ಹೇಳುವ ತೂಫಾನಿನ ಒತ್ತಡದಿಂದಾಗಿ ದೊಡ್ಡ ದೊಡ್ಡ ತೆರೆಗಳು ಬಂದು ದಡಕ್ಕೆ ಅಪ್ಪಳಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ.
ಸದ್ಯ ಮಲ್ಪೆ ಬಂದರು ವ್ಯಾಪ್ತಿಯ ಮಲ್ಪೆ ಬೀಚ್ ಹಾಗೂ ಸೀ ವಾಕ್ ಪ್ರದೇಶಗಳಲ್ಲಿ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಮತ್ತು ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮೇ 16ರಿಂದ ಸೆ. 15ರ ವರೆಗೆ ಸ್ಥಗಿತಗೊಳಿಸಲಾಗಿದ್ದು, ಜಲಸಾಹಸ ಕ್ರೀಡಾ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ.
ಒಟ್ಟಾರೆಯಾಗಿ ಕಡಲ ಕಿನಾರೆಯ ಮುಖ್ಯ ಆಕರ್ಷಣೆಯಾಗಿರುವ ಬೋಟ್ ರೈಡಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಗಳು ಬಂದ್ ಆಗಿರುವುದು ಪ್ರವಾಸಿಗರಿಗೆ ನಿರಾಸೆ ಮೂಡುತ್ತಿದೆ. ಸದ್ಯ ಕೇವಲ ಸುಂದರ ಕಡಲ ಕಿನಾರೆಯನ್ನ ವೀಕ್ಷಣೆಗಷ್ಟೇ ಜನರು ಬರುತ್ತಿದ್ದು ಲೈಫ್ ಗಾರ್ಡ್ ಗಳ ಕಣ್ಗಾವಲಿನಲ್ಲಿ ನೀರಿಗೆ ಇಳಿದು ಆಟವಾಡಲು ಮಾತ್ರವಷ್ಟೇ ಅವಕಾಶ ನೀಡಲಾಗಿದೆ.
ವರದಿ: ಪ್ರಜ್ವಲ್ ಅಮಿನ್, ಟಿವಿ9, ಉಡುಪಿ
Published On - 2:49 pm, Thu, 18 May 23




