AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ ಸೌಂಡ್​ ಜೋರಾಗಿ ಇಟ್ಟಿದ್ದಕ್ಕೆ ಗಲಾಟೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಕೋಲಾರ: ಇದೊಂತರಾ ವಿಚಿತ್ರ ಆದ್ರೂ ಸತ್ಯ. ಟಿವಿ ವ್ಯಾಲ್ಯೂಮ್ ಜೋರಾಗಿ ಇಟ್ಟಿದ್ದಾರೆ ಅನ್ನೋ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಫೆ.22 ರಂದು ಪಿ.ಸಿ ಬಡವಾಣೆಯ ರೋಹಿತ್ ತಮ್ಮ ಮನೆಯಲ್ಲಿ ಟಿವಿ ವಾಲ್ಯೂಮ್ ಜೋರಾಗಿ ಇಟ್ಟಿದ್ದನ್ನು ಮಂಜುಳಾ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಗಲಾಟೆ ಮಾಡಿರುವ ರೋಹಿತ್ ಮಂಜುಳಾ ಹಾಗೂ ಅವರ ತಂದೆ ಬಾಬು, ತಾಯಿ ರಾಧಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಲಾಗಿದೆ ಎಂದು […]

ಟಿವಿ ಸೌಂಡ್​ ಜೋರಾಗಿ ಇಟ್ಟಿದ್ದಕ್ಕೆ ಗಲಾಟೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಪಿ.ಸಿ ಬಡವಾಣೆಯ ರೋಹಿತ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 25, 2022 | 10:52 PM

Share

ಕೋಲಾರ: ಇದೊಂತರಾ ವಿಚಿತ್ರ ಆದ್ರೂ ಸತ್ಯ. ಟಿವಿ ವ್ಯಾಲ್ಯೂಮ್ ಜೋರಾಗಿ ಇಟ್ಟಿದ್ದಾರೆ ಅನ್ನೋ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಫೆ.22 ರಂದು ಪಿ.ಸಿ ಬಡವಾಣೆಯ ರೋಹಿತ್ ತಮ್ಮ ಮನೆಯಲ್ಲಿ ಟಿವಿ ವಾಲ್ಯೂಮ್ ಜೋರಾಗಿ ಇಟ್ಟಿದ್ದನ್ನು ಮಂಜುಳಾ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಗಲಾಟೆ ಮಾಡಿರುವ ರೋಹಿತ್ ಮಂಜುಳಾ ಹಾಗೂ ಅವರ ತಂದೆ ಬಾಬು, ತಾಯಿ ರಾಧಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇನ್ನೂ ಗಲಾಟೆ ಮನೆಯ ಬಳಿ ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರ ಎದುರೆ ವ್ಯಕ್ತಿಯಿಂದ ಹಲ್ಲೆ ಯತ್ನ ನಡೆದಿದೆ. ಕೋಲಾರ ನಗರದ ಪಿ.ಸಿ. ಬಡಾವಣೆಯಲ್ಲಿ ಕಳೆದ 2 ದಿನಗಳ ಹಿಂದೆ ಈ ಗಲಾಟೆ ನಡೆದಿದ್ದು, ಪರಸ್ಪರ ದೂರು ಪ್ರತಿ ದೂರು ದಾಖಲಾಗಿದೆ.

ಇನ್ನೂ ಮನೆ ಮುಂದೆ ನಿಲ್ಲಿಸಿದ್ದ ಕಾರ್ ಹಾಗೂ ಬೈಕ್‌ಗೂ ರೋಹಿತ್ ಹಾನಿ ಮಾಡಿದ್ದು, ವಿಡಿಯೋ ಕೂಡಾ ಸದ್ಯ ವೈರಲ್ ಆಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ರೋಹಿತ್ ಹಲ್ಲೆ ಮಾಡಿದ್ದಾನೆ ಎಂದು ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಹಲ್ಲೆಗೆ ಯತ್ನ ನಡೆಸಿರುವ ಸಿಸಿಟಿವಿ ವಿಡಿಯೋ ಕೂಡಾ ಸಿಕ್ಕಿದೆ. ಇನ್ನೂ ಕೋಲಾರ ನಗರ ಠಾಣೆ ಪೊಲೀಸರು ರೋಹಿತ್​ ಹಾಗೂ ಪತ್ನಿ ದಿವ್ಯಾ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಂಡರೇ, ಮಂಜುಳಾ ಹಾಗೂ ತಂದೆ ತಾಯಿ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ:

ಫರಿದಾಬಾದ್: ನೀವು ನನಗಾಗಿ ನಿಮಗೇನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೀರಿ. ಆದರೆ ನಾನು ಧೈರ್ಯವಂತನಾಗಿರಲು ಸಾಧ್ಯವಾಗಲಿಲ್ಲ. ಅಮ್ಮಾ.. ನೀನು ಈ ಜಗತ್ತಿನಲ್ಲೇ ಬೆಸ್ಟ್​ ಅಮ್ಮ. ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ. ನನ್ನ ಕ್ಷಮಿಸಿಬಿಡಿ’ ಎಂದು ಪತ್ರವೊಂದನ್ನು ಬರೆದಿಟ್ಟು ಫರಿದಾಬಾದ್‌ನ ಪ್ರಸಿದ್ಧ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರಿಯಾಣದ ಗ್ರೇಟರ್ ಫರಿದಾಬಾದ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ 15ನೇ ಮಹಡಿಯಿಂದ ಹಾರಿ 15 ವರ್ಷದ ಬಾಲಕ ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ. ಆ ಬಾಲಕ ಡಿಸ್ಲೆಕ್ಸಿಯಾ (ಕಲಿಕೆಯ ಅಸ್ವಸ್ಥತೆ)ಯಿಂದ ಬಳಲುತ್ತಿದ್ದ. ತನಗೆ ಶಾಲೆಯ ಟೀಚರ್​ಗಳು, ಇತರೆ ಮಕ್ಕಳು ಹೆದರಿಸುತ್ತಿದ್ದರು, ಕಿರುಕುಳ ನೀಡುತ್ತಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆ ಬಾಲಕ ಸೂಸೈಡ್ ನೋಟ್​​ನಲ್ಲಿ (Suicide Note) ಬರೆದಿದ್ದಾನೆ.

ಇದನ್ನೂ ಓದಿ:

ಮೃತ ಹರ್ಷ ಮೊಬೈಲ್ ಫೋನ್ ಪತ್ತೆಯಾಗಿಲ್ಲ, 10 ಆರೋಪಿಗಳ ಬಂಧನ; ಶಿವಮೊಗದಲ್ಲಿ ಎಸ್​ಪಿ ಮಾಹಿತಿ

ವರದಿ: ರಾಜೇಂದ್ರ ಸಿಂಹ