ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭಕ್ಕೆ ಶುರುವಾಯ್ತು ಕ್ರೆಡಿಟ್ ವಾರ್: ಅಸಲಿಯತ್ತೇನು ನೋಡಿ

ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪಿಸುವ ಕನಸು ಕೊನೆಗೂ ನನಸಾಗಿದೆ. ಸಿಲಿಕಾನ್ ಸಿಟಿಯಲ್ಲಿ ಯುಎಸ್ ಕಾನ್ಸುಲೇಟ್​​ ತಾತ್ಕಾಲಿಕ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು. ಇದರ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆ ಸಂಬಂಧ ಕ್ರೆಡಿಟ್ ವಾರ್ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಪೈಪೋಟಿ ಶುರುವಾಗಿದೆ. ಆದರೆ, ಅಸಲಿಯತ್ತೇನು? ಇಲ್ಲಿದೆ ವಿವರ.

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭಕ್ಕೆ ಶುರುವಾಯ್ತು ಕ್ರೆಡಿಟ್ ವಾರ್: ಅಸಲಿಯತ್ತೇನು ನೋಡಿ
ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಉದ್ಘಾಟನೆ
Follow us
Ganapathi Sharma
|

Updated on: Jan 17, 2025 | 11:42 AM

ಬೆಂಗಳೂರು, ಜನವರಿ 17: ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭವಾಗಬೇಕೆಂಬ ನಗರವಾಸಿಗಳ ಹಾಗೂ ಕರ್ನಾಟಕದ ಜನತೆಯ ಕನಸು ಕೊನೆಗೂ ಸಾಕಾರಗೊಂಡಿದೆ. ಯುಎಸ್ ಕಾನ್ಸುಲೇಟ್ ತಾತ್ಕಾಲಿಕ ಕಚೇರಿಯ ಉದ್ಘಾಟನೆ ನಗರದ ಖಾಸಗಿ ಹೋಟೆಲ್​​ನಲ್ಲಿ ಶುಕ್ರವಾರ ನೆರವೇರಿತು. ವಿದೇಶಾಂಗ ಸಚಿವ ಜೈಶಂಕರ್, ಡಿಸಿಎಂ ಡಿಕೆ ಶಿವಕುಮಾರ್, ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಕಚೇರಿಗೆ ಚಾಲನೆ ನೀಡಲಾಯಿತು. ಆದರೆ, ಖಾಯಂ ಕಚೇರಿ ಇನ್ನಷ್ಟೇ ಆರಂಭವಾಗಬೇಕಿದ್ದು, ವೀಸಾ ನೀಡಿಕೆ ಪ್ರಕ್ರಿಯೆ ವಿಳಂಬವಾಗಲಿದೆ. ಏತನ್ಮಧ್ಯೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಧ್ಯೆ ಅಮೆರಿಕ ದೂತಾವಾಸ ಕಚೇರಿಯ ಕ್ರೆಡಿಟ್ ವಾರ್ ಆರಂಭವಾಗಿದೆ.

ಒಂದೆಡೆ, ಪ್ರಧಾನಿ ಮೋದಿ ಹಾಗೂ ಜೈಶಂಕರ್ ಪ್ರಯತ್ನದಿಂದಲೇ ಇದು ಸಾಕಾರಗೊಂಡಿದೆ ಎಂದು ಬಿಜೆಪಿ ನಾಯಕರು ವಾದಿಸಿದರೆ, ಕಚೇರಿ ಆರಂಭಿಸಲು ತಾವೂ ಶ್ರಮ ಹಾಕಿದ್ದಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೊಂದೆಡೆ, ಬಿಜೆಪಿ ಸಂಸದರು ಅಥವಾ ವಿದೇಶಾಂಗ ಸಚಿವರ ಇಚ್ಛೆಯಿಂದ ಇದು ಸಾಕಾರವಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ. ಆದರೆ, ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಡಿದ ಮಾತುಗಳೇ ಕ್ರೆಡಿಟ್ ವಾರ್​ನ ಅಸಲಿಯತ್ತನ್ನು ಬಹಿರಂಗಪಡಿಸಿದಂತಿದೆ.

ಮೋದಿ, ಜೈಶಂಕರ್ ಪ್ರಯತ್ನದಿಂದಲೇ ಸಾಕಾರ ಎಂದ ಸೂರ್ಯ

ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಸತತ ಪ್ರಯತ್ನದಿಂದ ಹಾಗೂ ಕೊಡುಗೆಯಿಂದ ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಸಾಕಾರವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುರುವಾರ ಹೇಳಿದ್ದರು. ಇದಕ್ಕಾಗಿ ದೆಹಲಿಯಲ್ಲಿ ಜೈಶಂಕರ್ ಅವರನ್ನು ಭೇಟಿ ಮಾಡಿದ್ದ ಸೂರ್ಯ, ಬೆಂಗಳೂರಿನ ಹಾಗೂ ಕರ್ನಾಟಕದ ಜನರ ಪರವಾಗಿ ಜೈಶಂಕರ್​ಗೆ ಮೈಸೂರು ಪಾಕ್ ನೀಡಿ ಧನ್ಯವಾದ ಸಮರ್ಪಿಸಿದ್ದರು.

ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್

ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಸ್ಥಾಪನೆ ವಿಚಾರವಾಗಿ ಈ ಹಿಂದೆ ಕೂಡ ತೇಜಸ್ವಿ ಸೂರ್ಯ ಹಲವು ಬಾರಿ ಏನೇನು ಬೆಳವಣಿಗೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ತಾಣದ ಮೂಲಕ ಹಂಚಿಕೊಳ್ಳುತ್ತಲೇ ಇದ್ದರು.

ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದೇನು?

ವರ್ಷಗಳ ಸಹಯೋಗದ ಪ್ರಯತ್ನಗಳು ಮತ್ತು ಸತತ ಪ್ರಯತ್ನದ ನಂತರ ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಸಾಕಾರಗೊಳ್ಳುತ್ತಿದೆ. ಈ ಸಾಧನೆಯು ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಬೆಂಗಳೂರಿನ ಜಾಗತಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಇದನ್ನು ಸಾಕಾರಗೊಳಿಸುವಲ್ಲಿ ನೆರವಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರ ಬೆಂಬಲವು ಭಾರತ-ಯುಎಸ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಮುಂದುವರಿದು, 2006 ರಲ್ಲಿ ನಾನು ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದೆ ಮತ್ತು ಅದರ ಬಗ್ಗೆ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚೆ ನಡೆಸಿದ್ದೆ. ಅಲ್ಲಿಂದ ಯುಎಸ್ ಕಾನ್ಸುಲೇಟ್ ಸ್ಥಾಪನೆಯ ಪ್ರಯಾಣವು ಪ್ರಾರಂಭವಾಗಿತ್ತು. ದುರದೃಷ್ಟವಶಾತ್, ಯುಪಿಎ ಆಡಳಿತಾವಧಿಯಲ್ಲಿ, ಮತ್ತೊಂದು ರಾಜ್ಯದ ಮುಖ್ಯಮಂತ್ರಿಯಿಂದಾಗಿ ರಾಜಕೀಯ ಒತ್ತಡದಿಂದ ಕಾನ್ಸುಲೇಟ್ ಬೇರೆಡೆಗೆ ಸ್ಥಳಾಂತರಕ್ಕೆ ಕಾರಣವಾಯಿತು. ಆದರೂ ನಾನು ದೃಢ ನಿಶ್ಚಯದಿಂದ ಇದ್ದೆ. 2018 ರ ಮೇ 31 ರಂದು, ಮುಖ್ಯಮಂತ್ರಿಯಾಗಿ, ನಾನು ಆಗಿನ ಭಾರತದಲ್ಲಿನ ಯುಎಸ್ ರಾಯಭಾರಿ ಕೆನೆತ್ ಜಸ್ಟರ್ ಅವರನ್ನು ಭೇಟಿ ಮಾಡಿದ್ದೆ ಮತ್ತು ಬೆಂಗಳೂರಿನ ಯುಎಸ್ ದೂತಾವಾಸಕ್ಕಾಗಿ ನ್ಯಾಯಸಮ್ಮತವಾದ ಹಕ್ಕನ್ನು ಪ್ರತಿಪಾದಿಸಿದ್ದೆ. ಈ ಯಶಸ್ಸು ಬೆಂಗಳೂರಿನ ಜಾಗತಿಕ ಪ್ರಾಮುಖ್ಯತೆಯಲ್ಲಿ ಸಾಮೂಹಿಕ ಪ್ರಯತ್ನ ಮತ್ತು ನಂಬಿಕೆಯ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಕುಮಾರಸ್ವಾಮಿ ಗುರುವಾರ ಟ್ವೀಟ್ ಮಾಡಿದ್ದರು. ಈ ಮೂಲಕ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸಾಕಾರದಲ್ಲಿ ತಮ್ಮ ಪಾತ್ರ ಇದೆ ಎಂಬುದನ್ನು ಒತ್ತಿ ಹೇಳಿದ್ದರು.

ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿಯ ಕ್ರೆಡಿಟ್​ಗೆ ಬಿಜೆಪಿ ಹವಣಿಸುತ್ತಿದೆ ಎಂದು ಟೀಕಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಕಾನ್ಸುಲೇಟ್‌ಗಳನ್ನು ಸ್ಥಾಪಿಸುವ ನಿರ್ಧಾರವನ್ನು ಆಯಾ ಸರ್ಕಾರಗಳು ನಗರದ ಆರ್ಥಿಕ ಪ್ರಾಮುಖ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳುತ್ತವೆಯೇ ಹೊರತು ಬಿಜೆಪಿ ಸಂಸದರು ಅಥವಾ ವಿದೇಶಾಂಗ ಸಚಿವರ ಇಚ್ಛೆ ಅಥವಾ ವೈಯಕ್ತಿಕ ಆದ್ಯತೆಗಳ ಮೇಲೆ ಅಲ್ಲ ಎಂದಿದ್ದರು. ವಿವಿಧ ಸರ್ಕಾರಗಳ ಆಡಳಿತಗಳಲ್ಲಿ (ಹೆಚ್ಚಾಗಿ ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ) 38 ವರ್ಷಗಳ ಕಾಲ ಅಧಿಕಾರಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಜೈಶಂಕರ್ ಅವರು ಇದನ್ನು ಒಪ್ಪುತ್ತಾರೆ ಎಂದು ನನಗೆ ವಿಶ್ವಾಸವಿದೆ. ಅಮೆರಿಕ ಮತ್ತು ಭಾರತಕ್ಕೆ ಪರಸ್ಪರ ಲಾಭದಾಯಕವಾದ ಹೂಡಿಕೆಗಳು ಮತ್ತು ವ್ಯಾಪಾರದ ಉದ್ದೇಶಗಳನ್ನು ಗಮನಿಸಿದರೆ ಯುಎಸ್ ಕಾನ್ಸುಲೇಟ್‌ಗೆ ಬೆಂಗಳೂರು ಯಾವಾಗಲೂ ಸಹಜ ಆಯ್ಕೆಯಾಗಿದೆ ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಅಸಲಿಯತ್ತೇನು? ಡಿಕೆ ಶಿವಕುಮಾರ್ ಹೇಳಿದ್ದೇನು?

ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭಿಸಲು ಸುಮಾರು 25 ವರ್ಷಗಳಿಂದ ಪ್ರಯತ್ನ ನಡೆದಿತ್ತು. ಆದರೆ ಕಾರಣಾಂತರಗಳಿಂದ ಸಾಕಾರಗೊಂಡಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ ಮನವಿ ಸಲ್ಲಿಕೆ ಮಾಡಲಾಗಿತ್ತು. ಆಗ ಕರ್ನಾಟಕದಲ್ಲಿ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಅವರ ನೇತೃತ್ವದಲ್ಲಿ ಮನವಿ ಮಾಡಿದ್ದೆವು. ಅದಾದ ನಂತರ ಎಸ್ಎಂ ಕೃಷ್ಣ ವಿದೇಶಾಂಗ ಸಚಿವರಾದರು. ಆಗಲೂ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಆರಂಭಿಸಲು ಪ್ರಯತ್ನಿಸಲಾಗಿತ್ತು. ಆದರೆ ಸಾಕಾರಗೊಂಡಿರಲಿಲ್ಲ ಎಂದರು.

ಇದನ್ನೂ ಓದಿ: ಕನ್ನಡಿಗರಿಗೆ ಸಿಹಿ ಸುದ್ದಿ: ಬೆಂಗಳೂರಿನಲ್ಲಿ ಆರಂಭವಾಯ್ತು ಅಮೆರಿಕ ದೂತವಾಸ ಕಚೇರಿ

ಇದೀಗ ಅಂತಿಮವಾಗಿ ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಉದ್ಘಾಟನೆಯಾಗಿರುವುದು ಸಂತಸ ತಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?
Daily Devotional: ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಉತ್ತಮ?
Daily Devotional: ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಉತ್ತಮ?
ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ