Uttara Kannada: ಕರಡಿಯೊಂದಿಗೆ ಹೋರಾಡಿ, ಕಣ್ಣು ಕಳೆದುಕೊಂಡು 2 ಕಿ.ಮೀ ನಡೆದುಕೊಂಡು ಬಂದ ವೃದ್ಧ

bear attack: ಉತ್ತರ ಕರ್ನಾಟಕದ ಜೋಯಿಡಾ ತಾಲೂಕಿನ ಜಗಲ್‌ಪೇಟ್ ವ್ಯಾಪ್ತಿಯಲ್ಲಿ ನಡೆದಿದೆ. ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ ದಾಳಿಯಿಂದ ಬದುಕುಳಿದಿರುವ ಘಟನೆ ನಡೆದಿದೆ.

Uttara Kannada: ಕರಡಿಯೊಂದಿಗೆ ಹೋರಾಡಿ, ಕಣ್ಣು ಕಳೆದುಕೊಂಡು 2 ಕಿ.ಮೀ ನಡೆದುಕೊಂಡು ಬಂದ ವೃದ್ಧ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 23, 2023 | 1:13 PM

ಜೋಯಿಡಾ: ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಈ ಸ್ಥಿತಿಗೆ ಮನುಷ್ಯರು ಕೂಡ ಕಾರಣ, ಕಾಡನ್ನು ನಾಡು ಮಾಡುತ್ತಿರುವುದು ನಾವೇ, ಈ ಕಾರಣದಿಂದ ಕಾಡಿನ ಪ್ರಾಣಿಗಳು ನಾಡಿಗೆ ಬಂದು ಸಾಕು ಪ್ರಾಣಿ, ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ, ಇಂತಹದೇ ಒಂದು ಘಟನೆ ಉತ್ತರ ಕರ್ನಾಟಕ(Uttara Kannada) ಜೋಯಿಡಾ ತಾಲೂಕಿನ ಜಗಲ್‌ಪೇಟ್ ವ್ಯಾಪ್ತಿಯಲ್ಲಿ ನಡೆದಿದೆ. ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ ದಾಳಿಯಿಂದ ಬದುಕುಳಿದಿರುವ ಘಟನೆ ನಡೆದಿದೆ.

ಮಾಲೋರ್ಗಿ ಗ್ರಾಮದ ನಿವಾಸಿ ವಿಠ್ಠಲ್ ಸಾಳಕೆ ಎಂಬುವರು ಸುಮಾರು 20 ನಿಮಿಷಗಳ ಕಾಲ ಕರಡಿಯೊಂದಿಗೆ ಕಾದಾಟ ನಡೆಸಿ, ಎರಡು-ಮೂರು ಕಿ.ಮೀ ನಡೆದುಕೊಂಡು ಸಂಬಂಧಿಕರ ಮನೆಗೆ ಬಂದಿದ್ದಾರೆ, ತಲೆಗೆ ಗಾಯವಾಗಿದ್ದು, ಅವರ ಒಂದು ಕಣ್ಣನ್ನು ಕರಡಿ ಕಿತ್ತು ಹಾಕಿದೆ.

ಇದನ್ನೂ ಓದಿ:Uttara Kannada News: ಪ್ರೀತಿಸಿ ಮದ್ವೆಯಾಗಿ 6 ವರ್ಷ ಸಂಸಾರ, ಈಗ ಪತಿ ಏಕಾಏಕಿ ನಾಪತ್ತೆ: ಕಂಗಾಲಾದ ಪತ್ನಿ

ನಂತರ ವಿಠ್ಠಲ್ ಅವರನ್ನು ಆಂಬ್ಯುಲೆನ್ಸ್​​​ನಲ್ಲಿ ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳಗಾವಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ವೈದ್ಯರು ಆಪರೇಷನ್ ಮಾಡುವಂತೆ ಸಲಹೆ ನೀಡಿದ್ದು. ಒಂದು ಅಥವಾ ಎರಡು ದಿನಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಹೇಳಿದ್ದಾರೆ.

ಜಗಲ್‌ಪೇಟೆ ಡಿಆರ್‌ಎಫ್‌ಒ ದೀಪಕ್ ಬಂಗೋಲೆ ಪ್ರಕಾರ, ವಿಠ್ಠಲ್ ತನ್ನ ಮೊಮ್ಮಗನನ್ನು ಭೇಟಿ ಮಾಡಲು ತಿಂಬಳಿ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Fri, 23 June 23