AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಂಡೇಲಿಯ ಕಾಳಿ ನದಿಯಲ್ಲಿ ಈಜಲು ಹೋಗಿದವನನ್ನು ಎಳೆದೊಯ್ದ ಮೊಸಳೆ, ಭಯ ಭೀತರಾದ ಜನ

ಈಜಲು ತೆರಳಿದ್ದ ಅಪರಿಚಿತ ವ್ಯಕ್ತಿಯನ್ನು ಮೊಸಳೆ ಎಳೆದೊಯ್ಯುವುದನ್ನು ಸ್ಥಳೀಯರು ತಮ್ಮ ಕಣ್ಣಾರೆ ನೋಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾಂಡೇಲಿಯ ಕಾಳಿ ನದಿಯಲ್ಲಿ ಈಜಲು ಹೋಗಿದವನನ್ನು ಎಳೆದೊಯ್ದ ಮೊಸಳೆ, ಭಯ ಭೀತರಾದ ಜನ
ದಾಂಡೇಲಿಯ ಕಾಳಿ ನದಿಯಲ್ಲಿ ಈಜಲು ಹೋಗಿದವನನ್ನು ಎಳೆದೊಯ್ದ ಮೊಸಳೆ
TV9 Web
| Edited By: ಆಯೇಷಾ ಬಾನು|

Updated on:Nov 03, 2022 | 9:49 AM

Share

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಜನರು ಅಪಾಯಕಾರಿ ಮೊಸಳೆಯ(Crocodile) ಕಾಟವನ್ನು ಎದುರಿಸುತ್ತಿದ್ದಾರೆ. ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಇರುವ ಮೊಸಳೆಗಳು ಕಂಡು ಬಂದಿದ್ದು ಕೆಲವು ದಿನಗಳಿಂದ ಜನ ಅಲ್ಲಿಗೆ ತೆರಳಲು ಭಯ ಪಡುವಂತಾಗಿದೆ. ಇದರ ನಡುವೆ ಇದೀಗ ನದಿಯಲ್ಲಿ ಈಜಲು ಹೋದವನನ್ನು ಮೊಸಳೆಗಳು ಎಳೆದೊಯ್ದ ಘಟನೆ ನಡೆದಿದೆ.

ದಾಂಡೇಲಿ ನಗರ ಪ್ರಾವಾಸೊಧ್ಯಮಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪಕ್ಷಿಗಳು, ರಿವರ್ ರ್ಯಾಪ್ಟಿಂಗ್ ದೇಶದಲ್ಲೇ ಪ್ರಸಿದ್ಧ. ಈ ಹಿಂದೆ ಕಾಳಿ ನದಿಯಲ್ಲಿ ಅಲ್ಪವಿದ್ದ ಮೊಸಳೆಗಳ ಸಂತತಿ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ ಊರಲ್ಲಿ ಮೊಸಳೆಗಳ ಕಾಟ ಮಿತಿಮೀರಿದ್ದು, ಹಾಲಮಡ್ಡಿ ಗ್ರಾಮ, ಹೊಸಕೊಣಪಾ ಗ್ರಾಮ ದಾಂಡೇಲಪ್ಪ ನಗರ, ಹಳಿಯಾಳ ರಸ್ತೆ ಹೀಗೆ ಹಲವು ಭಾಗದ ಕಾಲೋನಿಗಳಲ್ಲಿ ಮೊಸಳೆಗಳು ನದಿ ಬಿಟ್ಟು ಆಹಾರ ಅರಸಿ ಬರುತ್ತಿವೆ. ಹೀಗೆ ಬಂದ ಮೊಸಳೆಗಳು ಮನೆಗಳಿಗೆ ನುಗ್ಗಿ ಸಾಕುಪ್ರಾಣಿ, ಕೋಳಿ, ಹಸುಗಳನ್ನು ಕೊಂದು ತಿನ್ನುತ್ತಿವೆ. ಅಲ್ಲದೆ ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಅಪರಿಚಿತ ವ್ಯಕ್ತಿಯನ್ನು ಮೊಸಳೆ ಎಳೆದೊಯ್ಯುವುದನ್ನು ಸ್ಥಳೀಯರು ತಮ್ಮ ಕಣ್ಣಾರೆ ನೋಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: PSI Recruitment Scam: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಸುಪ್ರಿಯಾ ಬಂಧನ

ದಾಂಡೇಲಿ ನಗರದ ತ್ಯಾಜ್ಯ ಹಾಗೂ ಮಳೆ ನೀರು ಹೊಗಲು ನಾಲೆಗಳನ್ನು ಕಾಳಿ ನದಿಗೆ ಬಿಡಲಾಗಿದೆ. ಇದರ ಮೂಲಕ ಮೊಸಳೆಗಳು ಗ್ರಾಮ ಮತ್ತು ನಗರ ಭಾಗಕ್ಕೆ ಬರುತ್ತಿವೆ. ಹೀಗಾಗಿ ಪ್ರತಿ ದಿನ ಮೊಸಳೆಯ ಕಾಟಕ್ಕೆ ಬೇಸತ್ತ ಜನ ಮೊಸಳೆಗಳು ನಗರ ಭಾಗಕ್ಕೆ ಬಾರದಂತೆ ತಪ್ಪಿಸಲು ನದಿ ಪ್ರದೇಶದ ನಾಲೆಗಳಿಗೆ ತಂತಿಯ ಜರಡಿಯನ್ನು ಹಾಕುವಂತೆ ಒತ್ತಾಯಿಸುತ್ತಿದ್ದಾರೆ.ದಾಂಡೇಲಿಯಲ್ಲಿ ಮೊಸಳೆಗಳ ಸಂತತಿ ಹೆಚ್ಚಾಗುತಿದ್ದಂತೆ ಹಾಲಮಡ್ಡಿ ಗ್ರಾಮದ ಭಾಗದಲ್ಲಿ ಪ್ರವಾಸೋಧ್ಯಮ ಇಲಾಖೆ ಮೊಸಳೆ ಪಾರ್ಕ ಅನ್ನು ನಿರ್ಮಿಸಿದೆ. ಆದರೆ ಈ ಭಾಗದಲ್ಲಿ ಎತೇಚ್ಚವಾಗಿ ವೃದ್ಧಿಯಾಗುತ್ತಿರಿವ ಮೊಸಳೆಗಳಿಗೆ ಆಹಾರದ ಕೊರತೆ ಎದುರಾಗಿದೆ‌. ಹೀಗಾಗಿ ಆಹಾರ ಅರಸಿ ಮೊಸಳೆಗಳು ಎಲ್ಲೆಂದರಲ್ಲಿ ಹೊಗುತಿದ್ದು, ಇದೇ ವರ್ಷ ಎರಡು ಜನರನ್ನು ಮೊಸಳೆ ಭಕ್ಷಿಸಿದರೆ ಓರ್ವ ಮೊಸಳೆ ದಾಳಿಯಿಂದ ಗಾಯಗೊಂಡಿದ್ದಾನೆ. ಇದಲ್ಲದೇ ಮೂರು ಜಾನುವಾರ ಸಹ ಈ ಬಾರಿ ಮೊಸಳೆಗೆ ಬಲಿಯಾಗಿದೆ. ಈಗ ಮತ್ತೆ ಈಜಲು ಹೋಗಿದ್ದ ವ್ಯಕ್ತಿಯನ್ನೂ ಮೊಸಳೆ ಎಳೆದುಕೊಂಡು ಹೋಗಿದೆ.

Published On - 9:49 am, Thu, 3 November 22

Follow Us
TV9 Web
TV9 Web

TV9 Kannada

Read More
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ