ಉತ್ತರ ಕನ್ನಡ: ಖಾಸಗಿ ಶಾಲೆಯೊಂದರಲ್ಲಿ ಕೈ ಕುಯ್ದುಕೊಂಡ ವಿದ್ಯಾರ್ಥಿನಿಯರು; ಕಾರಣ?
ವಿದ್ಯಾರ್ಥಿನಿಯರ ಕೈಗಳನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಘಟನೆಗೆ ಕಾರಣವನ್ನು ಬೆಳಕಿಗೆ ತರಬೇಕು ಎಂದು ಪೋಷಕರು, ಶಾಲಾ ಶಿಕ್ಷಕರಿಗೆ ಮತ್ತು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇನ್ನು ಈ ಬಗ್ಗೆ ಮುಖ್ಯೋಪಾಧ್ಯಾಯರು ಗಾಯ ಮಾಡಿಕೊಂಡಿರುವ ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದಾರೆ.
ಉತ್ತರ ಕನ್ನಡ, ಸೆ.17: ಜಿಲ್ಲೆಯ ದಾಂಡೇಲಿ (Dandeli)ಯಲ್ಲಿರುವ ಖಾಸಗಿ ಶಾಲೆ (Private School)ಯೊಂದರಲ್ಲಿ 9 ಮತ್ತು 10ನೇ ತರಗತಿ ಓದುವ ವಿದ್ಯಾರ್ಥಿನಿಯರು ತಮ್ಮ ಕೈಗೆ ಹರಿತವಾದ ವಸ್ತುವಿನಿಂದ ಕುಯ್ಯದುಕೊಂಡು ಗಾಯ ಮಾಡಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ. 7 ರಿಂದ 9 ವಿದ್ಯಾರ್ಥಿನಿಯರು ಎಡಗೈ ತೋಳಿನ ಕೆಳಭಾಗದಲ್ಲಿ ಚಾಕು ಅಥವಾ ಬ್ಲೆಡ್ ನಿಂದ ಕುಯ್ದುಕೊಂಡು ಗಾಯ ಮಾಡಿಕೊಂಡಿದ್ದಾರೆ. ಕೈ ಮೇಲೆ ಅಂದಾಜು 10 ರಿಂದ 15 ಕುಯ್ದುಕೊಂಡ ಗೆರೆಗಳು ಮೂಡಿವೆ.
ಇನ್ನು ವಿದ್ಯಾರ್ಥಿನಿಯರ ಕೈಗಳನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಘಟನೆಗೆ ಕಾರಣವನ್ನು ಬೆಳಕಿಗೆ ತರಬೇಕು ಎಂದು ಪೋಷಕರು, ಶಾಲಾ ಶಿಕ್ಷಕರಿಗೆ ಮತ್ತು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇನ್ನು ಈ ಬಗ್ಗೆ ಮುಖ್ಯೋಪಾಧ್ಯಾಯರು ಗಾಯ ಮಾಡಿಕೊಂಡಿರುವ ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದು, ಒಬ್ಬೊಬ್ಬ ವಿದ್ಯಾರ್ಥಿನಿಯರು ಒಂದೊಂದು ಕಾರಣ ನೀಡಿದ್ದಾರೆ ಎನ್ನಲಾಗುತ್ತಿದೆ. ಮಾನಸಿಕ ಖಿನ್ನತೆ ಅಥವಾ ಮನೆಯಲ್ಲಿನ ಸಮಸ್ಯೆ ಇದಕ್ಕೆ ಕಾರಣವೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರವೇ ಈ ಘಟನೆಗೆ ಪ್ರಮುಖ ಕಾರಣ ತಿಳಿದು ಬರಲಿದ್ದು, ಸದ್ಯಕ್ಕೆ ಈ ಪ್ರಕರಣ ನಿಗೂಢವಾಗಿದೆ.
ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಯುವಕ ಸಾವು
ಬೆಂಗಳೂರು ಗ್ರಾಮಾಂತರ: ನಿನ್ನೆ(ಸೆ.16) ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದಲ್ಲಿ ಡಿಟಿಹೆಚ್ ಕೇಬಲ್ ಹಾಕಲು ಹೋಗಿ ವಿದ್ಯುತ್ ಅವಘಡ ನಡೆದಿತ್ತು. ಇದರಿಂದ 40 ಪ್ರತಿಶತ ಗಾಯಗೊಂಡಿದ್ದ ವ್ಯಕ್ತಿ ಜಯ್ಕುಮಾರ್ ಇಂದು(ಸೆ.17) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಹೌದು, ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ವತ್ರೆಯಲ್ಲಿ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಡಿಟಿಹೆಚ್ ಕೇಬಲ್ ಅಳವಡಿಸುವ ವೇಳೆ ಪಕ್ಕದಲ್ಲಿ ವಿದ್ಯುತ್ ತಂತಿ ತಗುಲಿ ನರಳಾಡುತ್ತಿದ್ದರೂ ಕೆಲಕಾಲ ಭಯದಿಂದ ಯಾರು ಕೂಡ ಸಹಾಯಕ್ಕೆ ಬಂದಿರಲಿಲ್ಲ. ನಂತರ ಬಂದು ಆಸ್ವತ್ರೆಗೆ ದಾಖಲಿಸಿದ್ದರು. ಈ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ