CM Basavaraj Bommai: ಉತ್ತರ ಕನ್ನಡ ಪ್ರವಾಹ ಪ್ರವಾಸಕ್ಕೆ ಹೊರಟ ನೂತನ ಸಿಎಂ ಬೊಮ್ಮಾಯಿ, ನೆರೆ ಪೀಡಿತ ಪ್ರದೇಶ ಪರಿಶೀಲನೆ

ರಾಜಕೀಯ ಅದೃಷ್ಟದಾಟದಲ್ಲಿ ಗೆದ್ದು ಬೀಗಿ ರಾಜ್ಯ ಭಾರ ಶುರುಮಾಡಿರೋ ನೂತನ ಸಿಎಂ ಬೊಮ್ಮಾಯಿ ನೆರೆ ಪಿಡಿತ ಪ್ರದೇಶದ ಪ್ರವಾಸಕ್ಕೆ ಸಜ್ಜಾಗಿದಾರೆ. ಇಂದು(ಜುಲೈ 29) ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿರೋ ನೂತನ ಸಿಎಂ ಬಸವರಾಜ ಬೊಮ್ಮಾಯಿ ಭೀಕರ ಪ್ರವಾಹಕ್ಕೆ ತುತ್ತಾಗಿರೋ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

CM Basavaraj Bommai: ಉತ್ತರ ಕನ್ನಡ ಪ್ರವಾಹ ಪ್ರವಾಸಕ್ಕೆ ಹೊರಟ ನೂತನ ಸಿಎಂ ಬೊಮ್ಮಾಯಿ, ನೆರೆ ಪೀಡಿತ ಪ್ರದೇಶ ಪರಿಶೀಲನೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Jul 29, 2021 | 10:23 AM

ಬೆಂಗಳೂರು: ಬದಲಾಣೆ ಬಡಿದಾಟದಲ್ಲಿ ಗೆದ್ದು, ಸಿಎಂ ಸಿಂಹಾಸನಕ್ಕೇರಿದ ಬಸವರಾಜ್ ಬೊಮ್ಮಾಯಿ ರಾಜ್ಯ ಸುತ್ತೋಕೆ ರೆಡಿಯಾಗಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದ ಮರುದಿನವೇ ಭೀಕರ ಮಳೆಯಿಂದ ನೆರೆಗೆ ತುತ್ತಾಗಿರೋ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ ಇಂದು ಉತ್ತರಕನ್ನಡ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಮೂಲಕ ನೆರೆ ಪಿಡಿತ ಜನರ ಜೊತೆ ತಮ್ಮ ಸರ್ಕಾರ ಇದೆ ಅನ್ನೋದನ್ನ ಮನದಟ್ಟು ಮಾಡೋಕೆ ಹೊಸ ಸಿಎಂ ಮುಂದಾಗಿದ್ದಾರೆ.

ಬೊಮ್ಮಾಯಿ ಪ್ರವಾಸ ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೂ ಮುನ್ನ ಆರ್.ಟಿ.ನಗರದ ನಿವಾಸದಿಂದ ಬಿಎಸ್‌ ಯಡಿಯೂರಪ್ಪನವರ ಭೇಟಿಗೆ ತೆರಳಿದ್ದಾರೆ. ಇನ್ನು ಪ್ರವಾಹ ಪ್ರವಾಸದ ಕುರಿತು ಮಾತನಾಡಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.ಮೂವರು ಮೃತಪಟ್ಟಿದ್ದಾರೆ. ಮಳೆ ಹಾನಿ ಸಮೀಕ್ಷೆ ಮಾಡಿ ಅಧಿಕಾರಿಗಳ ಜತೆ ಚರ್ಚಿಸುವೆ. ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿ ಕ್ರಮಕ್ಕೆ ಸೂಚಿಸುವೆ ಎಂದು ಹೇಳಿದ್ರು.

ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಹೆಚ್‌ಎಎಲ್‌ನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಲಿರೋ ಸಿಎಂ ಬೆಳಗ್ಗೆ 10.45ಕ್ಕೆ ಹುಬ್ಬಳ್ಳಿಗೆ ತೆರಳಲಿದ್ದಾರೆ. ಬಳಿಕ ಮೊದಲು ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿ ನಂತರ ತಂದೆ S.R.ಬೊಮ್ಮಾಯಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಹುಬ್ಬಳ್ಳಿಯಿಂದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಅಂಕೋಲಾಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ 3ರವರೆಗೆ ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಶಾಸಕರು, ಅಧಿಕಾರಿಗಳ ಜತೆ ಮಳೆ ಹಾನಿ ಬಗ್ಗೆ ಸಭೆ ನಡೆಸಲಿದ್ದಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಹುಬ್ಬಳ್ಳಿಗೆ ಸಿಎಂ ಬೊಮ್ಮಾಯಿ ಬರಲಿದ್ದಾರೆ.

ಮೊದಲಿಗೆ ರಸ್ತೆ ಮಾರ್ಗವಾಗಿ ಯಲ್ಲಾಪುರ ತಾಲೂಕಿಗೆ ಭೇಟಿ‌ ನೀಡಿಲಿರೋ ನೂತನ ಸಿಎಂ ಬೊಮ್ಮಾಯಿ ಅರಬೈಲ್ ಘಾಟ್ ನಲ್ಲಿ ಗುಡ್ಡ ಕುಸಿತದಿಂದ ರಸ್ತೆ ಹಾಳಾಗಿರೋ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೇ ಅನೇಕ ನೆರೆ ಪೀಡಿತ ಗ್ರಾಮಗಳಿಗೂ ಭೇಟಿ‌ ನೀಡಿ ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನೆರವಿನ ಭರವಸೆ ನೀಡಬಹುದು.

ಯಲ್ಲಾಪುರದಿಂದ ನೇರವಾಗಿ ಅಂಕೋಲಾ ತಾಲೂಕಿಗೆ ತೆರಳಿಲಿರೋ ಬೋಮ್ಮಾಯಿ ಅಲ್ಲಿನ ನೆರೆಯ ಪ್ರವಾಹದಿಂದ ಜೀವ ಕಳೆದುಕೊಂಡಿರೋ ಬಡ ಕುಟುಂಬಸ್ಥರ ಮನೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಅಂಕೋಲಾದಲ್ಲಾದ ಹಾನಿಯನ್ನ ಖುದ್ದಾಗಿ ನೂತನ ಸಿಎಂ ವೀಕ್ಷಣೆ ಮಾಡಿ ಸ್ಥಳದಲ್ಲೆ ಪರಿಹಾರ ಘೋಷಣೆ ಮಾಡೋ ಸಾಧ್ಯತೆ ಇದೆ.

ಒಟ್ನಲ್ಲಿ ಮುಖ್ಯಮಂತ್ರಿ ಆಗುತ್ತಿದ್ದಂತೆ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಚುರುಕಿನ ಕೆಲಸ ಮಾಡೋಕೆ ಹೊರಟಿದ್ದಾರೆ. ನೂತನ ಸಿಎಂ ತಮ್ಮ ಜಿಲ್ಲಾ ಪ್ರವಾಸವನ್ನ ನೆರೆಪೀಡಿತ ಜಿಲ್ಲೆಯಿಂದಲೇ ಆರಂಭಿಸಿದ್ದು ಭಾರಿ ಕೂತುಹಲ ಕೆರಳಿಸಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಟ್ಟು ಹಾನಿ ವಿವರ ತೊಂದರೆಗೊಳಗಾದ ಜಿಲ್ಲೆಯ ಗ್ರಾಮಗಳು- 123. ತೊಂದತೆಗೊಳಗಾದ ಜನರ ಸಂಖ್ಯೆ-19421. ಜನರ ಸಾವಿನ ಸಂಖ್ಯೆ- 6. ಗಾಯಾಳುಗಳ ಸಂಖ್ಯೆ-15. ಕಾಣೆಯಾದವರ ಸಂಖ್ಯೆ-1. ಪ್ರವಾಹದಿಂದ ಸಂಪೂರ್ಣವಾಗಿ ಹಾನಿಯಾದ ಮನೆಗಳ ಸಂಖ್ಯೆ- 294. ಅಲ್ಪ ಪ್ರಮಾಣದಲ್ಲಿ ಹಾನಿಯಾದ ಮನೆಗಳ ಸಂಖ್ಯೆ- 705. ಪ್ರಾಣಿಗಳ ಹಾನಿ-27. ಕಾಳಜಿ ಕೇಂದ್ರಗಳು-139. ಕಾಳಜಿ ಕೇಂದ್ರದಲ್ಲಿ ರಕ್ಷಣೆ ಪಡೆದವರ ಸಂಖ್ಯೆ- 16322. ಈ ವರೆಗೂ ತೆರೆದಿರುವ ಕಾಳಜಿ ಕೇಂದ್ರದ ಸಂಖ್ಯೆ-40. ಈವರೆಗೂ ಕಾಳಜಿ ಕೇಂದ್ರದಲ್ಲಿ ಇರುವವರ ಸಂಖ್ಯೆ-6943. ಕೃಷಿ ಹಾನಿ ಪ್ರದೇಶ- 487.74 ಹೆಕ್ಟೇರ್. ತೋಟಗಾರಿಕಾ ಪ್ರದೇಶ ಹಾನಿ ಸಂಖ್ಯೆ- 406 ಹೆಕ್ಟೇರ್ . ರಸ್ತೆ ನಷ್ಟ- 264.93 ಸೇತುವೆ ಹಾನಿ- 52 ಶಾಲೆಗಳ ನಷ್ಟ-39

ಇದನ್ನೂ ಓದಿ: Karnataka Weather: ನಿಟ್ಟುಸಿರು ಬಿಟ್ಟ ಕರ್ನಾಟಕ ಜನ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ

Published On - 9:05 am, Thu, 29 July 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್