ಬೋನ್ಸಾಯ್​ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ; ಪರಿಸರ ಸಂರಕ್ಷಣೆಗೆ ಮುಂದಾದ ನಿವೃತ್ತ ಅರಣ್ಯಾಧಿಕಾರಿ

ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವರಮಹೀರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿ ವನ, ರಾಶಿ ವನ, ಪಂಚಫಲ ವನ, ನಕ್ಷತ್ರ ವನ, ನವಗ್ರಹ ವನ ಹೀಗೆ ಸುಮಾರು 175 ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ, ಬಹುವರ್ಷ ಬಾಳುವ ಮರಗಳನ್ನು ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.

ಬೋನ್ಸಾಯ್​ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ; ಪರಿಸರ ಸಂರಕ್ಷಣೆಗೆ ಮುಂದಾದ ನಿವೃತ್ತ ಅರಣ್ಯಾಧಿಕಾರಿ
ಬೋನ್ಸಾಯಿ ಪದ್ಧತಿ
Follow us
TV9 Web
| Updated By: preethi shettigar

Updated on:Feb 10, 2022 | 12:06 PM

ಉತ್ತರ ಕನ್ನಡ: ಆಧುನಿಕ ಯುಗದಲ್ಲಿ ಪರಿಸರ ಸಂರಕ್ಷಣೆಗಿಂತ ಅದನ್ನು ಹಾಳು ಮಾಡುವವರೇ ಹೆಚ್ಚು. ಇಂಥವರ ಮಧ್ಯದಲ್ಲಿ ಪರಿಸರ ಸಂರಕ್ಷಣೆಯ ಕಲ್ಪನೆಯೊಂದಿಗೆ ಇಳಿ ವಯಸ್ಸಿನಲ್ಲೂ ಬೋನ್ಸಾಯಿ(Bonsai) ಕೃಷಿ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೂರಾರು ವರ್ಷಗಳ ಕಾಲ ಬಾಳುವ ಮರಗಳು(Trees), ಔಷಧಿ ಗುಣವುಳ್ಳ ಗಿಡಗಳನ್ನು ನೆಟ್ಟು ಮನೆಯ(House) ಮುಂದೆ ವನ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರುಕಲ್ಲಬ್ಬೆ ಗ್ರಾಮದ ಎಲ್.ಆರ್. ಹೆಗಡೆ ಅವರು, ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆಸಲ್ಲಿದ್ದರು. ಸದ್ಯ ಇವರು ಅರಣ್ಯವಲಯ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಈಗಲೂ ತಮ್ಮ ಇಳಿ ವಯಸ್ಸಿನಲ್ಲಿ ಕಾಡು ಸಂರಕ್ಷಣೆ ಮಾಡುವ, ಮರ ಬೆಳೆಸುವ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆ ಮುಂದೆ 7 ವರ್ಷದಿಂದ ಬೋನ್ಸಾಯ್​ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವರಮಹೀರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿ ವನ, ರಾಶಿ ವನ, ಪಂಚಫಲ ವನ, ನಕ್ಷತ್ರ ವನ, ನವಗ್ರಹ ವನ ಹೀಗೆ ಸುಮಾರು 175 ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ, ಬಹುವರ್ಷ ಬಾಳುವ ಮರಗಳನ್ನು ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.

ಬೋನ್ಸಾಯ್ ಪದ್ಧತಿ ಎಂದರೆ ಆನೆಯನ್ನು ಕನ್ನಡಿಯಲ್ಲಿ ನೋಡಿದಂತೆ. ಮರವು ತನ್ನ ಮೂಲ ಗುಣದಲ್ಲಿಯೇ ಬೆಳೆಯುತ್ತದೆ. ಆದರೆ ಕುಬ್ಜವಾಗಿರುತ್ತದೆ. ಈ ವನವನ್ನು ನೋಡಿದರೆ ದೈವಿ ಭಾವನೆ ಬರುತ್ತದೆ. ಇದನ್ನು ಪಾರಂಪರಿಕ ಪ್ರವಾಸಿ ತಾಣ ಮಾಡುವ ಆಸೆಯಿದೆ ಎಂದು ನಿವೃತ್ತಿ ಅರಣ್ಯಾಧಿಕಾರಿ ಎಲ್.ಆರ್. ಹೆಗಡೆ ಹೇಳಿದ್ದಾರೆ.

L.R.Hegde

ಎಲ್.ಆರ್. ಹೆಗಡೆ

ಕಲ್ಲಬ್ಬೆಯ ತಮ್ಮ ಮನೆ ಆವರಣದಲ್ಲೆ ಕಲಾನಿಕೇತನ ಕುಬ್ಜವನ ನಿರ್ಮಾಣ ಮಾಡಿದ್ದಾರೆ. ನೂರಾರು ವರ್ಷಗಳ ಕಾಲ ಬದುಕುವ ಮರಗಳನ್ನು ಬೆಳೆದಿದ್ದಾರೆ. ಧಾರ್ಮಿಕ ಆಚರಣೆಗೆ ಅನುಕೂಲವಾಗುವ ನವಗ್ರಹ ವನ, ರಾಶಿ ವನ ಬೆಳೆಯುವುದರ ಜೊತೆಗೆ ಔಷಧಿ ಗುಣವುಳ್ಳ ಗಿಡಗಳನ್ನು ಬೆಳೆದಿದ್ದಾರೆ. ಇದರಿಂದ ಜನರಿಗೂ ಅನುಕೂಲ ವಾಗಲಿದೆ. ಇನ್ನೂ ಈ ವನದಲ್ಲಿ ಆಲ, ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ಶಿವಣಿ, ದೇವಕೃಕ್ಷ ಹೀಗೆ ಸುಮಾರು 175 ಕ್ಕಿಂತ ಹೆಚ್ಚು ಜಾತಿಯ 400 ಗಿಡಗಳನ್ನು ಬೆಳೆಯಲಾಗಿದೆ.

ಅತೀ ಕಡಿಮೆ ನೀರು, ಕಡಿಮೆ ಜಾಗದಲ್ಲಿ ಮಾಡಬಹುದಾದ ಬೋನ್ಸಾಯ್ ಕೃಷಿ ಇದಾಗಿದೆ. ವನ ಮತ್ತು ವನ್ಯಜೀವಿ ಹೇಗೆ ಜೀವನ ಮಾಡುತ್ತವೆ ಎನ್ನುವ ನಿದರ್ಶನ ಇಟ್ಟಿಕೊಂಡು ವನ ನಿರ್ಮಾಣ ಮಾಡಲಾಗಿದೆ. ಎಲ್.ಆರ್. ಹೆಗಡೆಯವರು ಮಾರಾಟ ಮಾಡಲಿಕ್ಕೆ ಅಥವಾ ಇದರಿಂದ ಲಾಭ ಗಳಿಸಲು ಈ ವನ ನಿರ್ಮಾಣ ಮಾಡಿಲ್ಲ ಬದಲಿಗೆ. ಕಾಡು ಬೆಳಸಿ ನಾಡು ಉಳಿಸಿ ಎಂಬ ಸಾರಾಂಶ ಸಾರಲು ಈ ಕಾರ್ಯ ಮಾಡಿದ್ದಾರೆ. ಜೊತೆಗೆ ಇಲ್ಲಿ ಬಂದು ಬೋನ್ಸಾಯಿ ಕೃಷಿ ಪದ್ಧತಿ ಬಗ್ಗೆ ಉಚಿತವಾಗಿ ಮಾಹಿತಿ ಪಡೆಯಬಹುದು ಎಂದು ಸ್ಥಳೀಯರಾದ ಸುರೇಶ ಭಟ್ ಹೇಳಿದ್ದಾರೆ.

ಒಟ್ಟಾರೆಯಾಗಿ ಆಧುನಿಕ ಯುಗದಲ್ಲಿ ಗಿಡಮರಗಳನ್ನು ಬೆಳೆಸುವವರ ಸಂಖ್ಯೆ ಕಡಿಮೆಯಾಗಿದ್ದು, ಇಂತವರ ಮಧ್ಯದಲ್ಲಿ ವನ ನಿರ್ಮಾಣ ಮಾಡಿ ಭಾರತೀಯ ಸಂಸ್ಕೃತಿಯ ಸಂಪ್ರದಾಯವನ್ನು ತೋರಲು ಹೋರಟಿದ್ದಾರೆ. ಮನೆ ಮುಂದೆ, ಕಟ್ಟಡದ ಮೇಲೆ ಬೋನ್ಸಾಯ್ ಪದ್ಧತಿಯ ಗಿಡಗಳನ್ನು ನೆಟ್ಟು ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ವರದಿ: ವಿನಾಯಕ ಬಡಿಗೇರ

ಇದನ್ನೂ ಓದಿ: ಯಾದಗಿರಿ: ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಅಪರೂಪದ ಸಸ್ಯಸಂಕುಲ ರಕ್ಷಣೆ; ವಿಶೇಷ ವರದಿ ಇಲ್ಲಿದೆ

ಬ್ಯಾಂಕ್ ಅಧಿಕಾರಿ, ಪಿಎಸ್ಐ ನೌಕರಿ ನಿರಾಕರಣೆ ಮಾಡಿದ ಮಹಿಳೆ; ಕುರಿ ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಆದಾಯ ಗಳಿಕೆ

Published On - 12:04 pm, Thu, 10 February 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ