AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ದಾರುಣ ಸ್ಥಿತಿ ಕರ್ನಾಟಕದ ಸಾರಿಗೆ ವ್ಯವಸ್ಥೆಯ ಅಸಮರ್ಥತೆಯನ್ನು ಎತ್ತಿ ತೋರಿಸಿದೆ. ಕೆಸರಿನಲ್ಲಿ ಸಿಲುಕಿದ ಕೆಎಸ್‌ಆರ್‌ಟಿಸಿ ಬಸ್ ದೃಶ್ಯ ವೈರಲ್ ಆಗಿದ್ದು, ರಸ್ತೆಯ ದುರಸ್ತಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಂಡ-ಗುಂಡಿಗಳಿಂದ ಕೂಡಿದ ಈ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.

ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ
ಶಿರಸಿ-ಹಾವೇರಿ ರಸ್ತೆ
ಅಕ್ಷಯ್​ ಪಲ್ಲಮಜಲು​​
|

Updated on:Apr 28, 2026 | 8:27 PM

Share

ಶಿರಸಿ, ಏ.28: ಕರ್ನಾಟಕದ ಸರ್ಕಾರಿ ಸಾರಿಗೆ ವ್ಯವಸ್ಥೆ ಎಷ್ಟೊಂದು ಕೆಟ್ಟೋಗಿದೆ ಎಂದರೆ ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸಿಗುತ್ತಿರುವ ಪ್ರತಿಫಲ ಮಾತ್ರ ಶೂನ್ಯ ಎನ್ನುವುದಕ್ಕೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯೇ ಸಾಕ್ಷಿ. ಈ ರಸ್ತೆಯ ಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಇದು ಹೆದ್ದಾರಿಯೋ ಅಥವಾ ಆಫ್-ರೋಡ್ ರ‍್ಯಾಲಿ ನಡೆಯುವ ಕೆಸರು ಗದ್ದೆಯೋ ಎಂಬ ಅನುಮಾನ ಮೂಡುತ್ತಿದೆ.

ಇಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್‌ವೊಂದು ಕೆಸರಿನಲ್ಲಿ ಸಿಲುಕಿ ಮುಂದೆ ಸಾಗಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಬಲಿಷ್ಠವಾದ ಸರ್ಕಾರಿ ಬಸ್‌ಗಳೇ ಈ ರಸ್ತೆಯಲ್ಲಿ ಸಂಚರಿಸಲು ಅಸಹಾಯಕವಾಗಿರುವಾಗ, ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳ ಪರಿಸ್ಥಿತಿ ಹೇಳತೀರದು. ತುರ್ತು ಚಿಕಿತ್ಸೆಗೆ ತೆರಳುವ ಆಂಬ್ಯುಲೆನ್ಸ್‌ಗಳೂ ಇಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಪೋಸ್ಟ್​​ವೊಂದನ್ನು @KarnatakaPortfolio ತನ್ನ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!

ಇಲ್ಲಿದೆ ನೋಡಿ ವಿಡಿಯೋ:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಮಾರ್ಗದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಸಾರ್ವಜನಿಕರು ರಸ್ತೆ ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಿದ್ದರೂ, ಕನಿಷ್ಠ ಗುಣಮಟ್ಟದ ರಸ್ತೆಯನ್ನು ನೀಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ಹೊಂಡ-ಗುಂಡಿಗಳು ಹಾಗೂ ಕೆಸರಿನಿಂದಾಗಿ ಈ ರಸ್ತೆಯು ಮೃತ್ಯುಪಂಜರವಾಗಿ ಮಾರ್ಪಟ್ಟಿದೆ ಎಂದು ಹಲವು ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೇವಲ ನೆಪಗಳನ್ನು ಹೇಳುವುದನ್ನು ಬಿಟ್ಟು ಕೂಡಲೇ ಈ ಹೆದ್ದಾರಿಯ ದುರಸ್ತಿಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿನ

Published On - 8:26 pm, Tue, 28 April 26

Follow Us
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ