ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ
ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ ಆಗಿದ್ದು, ನಾಲ್ವರು ಮೀನುಗಾರರ ರಕ್ಷಣೆ ಮಾಡಿರುವಂತಹ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉತ್ತರ ಕನ್ನಡ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ (Boat) ಮುಳುಗಡೆ ಆಗಿದ್ದು, ನಾಲ್ವರು ಮೀನುಗಾರರ ರಕ್ಷಣೆ ಮಾಡಿರುವಂತಹ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಭಟ್ಕಳದ ಮಾವಿನಕುರ್ವೆ ಬಂದರಿನಲ್ಲಿ ನರಸಿಂಹ ಗೋವಿಂದ ಖಾರ್ವಿ ಎಂಬುವವರಿಗೆ ಬೋಟ್ ಸೇರಿದೆ. ಸಮುದ್ರದ ಅಲೆಯ ಹೊಡೆತಕ್ಕೆ ಮೀನುಗಾರಿಕೆ ಬೋಟ್ ಫೈಬರ್ ಡ್ಯಾಮೇಜ್ಯಿಂದಾಗಿ ಮುಳುಗಡೆ ಆಗಿದ್ದು, 6 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗುತ್ತಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ 7 ಯುವಕರ ಪೈಕಿ ನಾಲ್ವರು ನೀರುಪಾಲು
ಉಡುಪಿ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವಂತಹ ಘಟನೆ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ನದಿಯಲ್ಲಿ ಇತ್ತೀಚೆಗೆ ದುರಂತ ನಡೆದಿತ್ತು. ಇಬಾಜ್, ಫಜಾನ್, ಸೂಫಾನ್, ಫರಾನ್ ಮೃತರು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದವರು ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ: ಉಡುಪಿ: ಮಲ್ಪೆ ಬೀಚ್ ಪ್ರಧಾನ ಆಕರ್ಷಣೆಯಾದ ವಾಟರ್ ಸ್ಪೋರ್ಟ್ಸ್ಗೆ ಬ್ರೇಕ್! ಯಾಕೆ ಗೊತ್ತಾ?
ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ದೋಣಿ ಮೂಲಕ ಮೀನು ಹಿಡಿಯಲು ಏಳು ಯುವಕರು ತೆರಳಿದ್ದರು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರಿಂದ ಶೋಧ ಕಾರ್ಯ ಮಾಡಲಾಗಿದೆ.
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲು
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲಾದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಬಳಿ ನಡೆದಿತ್ತು. ಹಿರೇಗೋಣಿಗೆರೆ ಗ್ರಾಮದ ಕಿರಣ್ (14), ವರುಣ್ (15), ಪವನ್ (16) ಮೃತಪಟ್ಟ ಸಹೋದರರು. ಸ್ನಾನ ಮಾಡಲೆಂದು ನದಿಗೆ ಇಳಿದ ಮೂವರು ನೀರುಪಾಲಾಗಿದ್ದು, ಮಾಹಿತಿ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದರು.
ಇದನ್ನೂ ಓದಿ: ಮತದಾನ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾಡಳಿತ ವಿನೂತನ ಪ್ರಯತ್ನ; ಬೀಚ್ನಲ್ಲಿ ಮರಳು ಶಿಲ್ಪ ಕಲಾಕೃತಿ ರಚಿಸಿ ಜಾಗೃತಿ
ನೀರುಪಾಲಾದ ಮೂವರ ಪೈಕಿ ವರುಣ್ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹ ಪತ್ತೆಯಾಗಿರಲಿಲ್ಲ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂಪಿ ರೇಣುಕಾಚಾರ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.