ಕೊನೆಗೂ ಕೈ ಹಿಡಿದ ಹೈಕಮಾಂಡ್, ಹಳ್ಳಿಯಿಂದ ದಿಲ್ಲಿಗೆ ಜಿಗಿದ ವಿ. ಸೋಮಣ್ಣ!

V Somanna Political Profile: ಕಳೆದ ವರ್ಷ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಹೇಳಿದಂತೆ ಸ್ವಕ್ಷೇತ್ರ ಬಿಟ್ಟು ಎರಡೂ ಕ್ಷೇತ್ರಳಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಹೈಕಮಾಂಡ್​ ಹೇಳಿದಂತೆ ಮಾಡಿ ಸೋಲುಕಂಡಿದ್ದ ಸೋಮಣ್ಣ ಅವರ ರಾಜಕೀಯ ಅಂತ್ಯ ಎನ್ನಲಾಗಿತ್ತು. ಆದ್ರೆ, ಇದೀಗ ಅದೇ ಹೈಕಮಾಂಡ್, ಸೋಮಣ್ಣನನ್ನು ಕೈಹಿಡಿದು ರಾಜಕೀಯವಾಗಿ ಮೇಲೇತ್ತಿದೆ. ಇನ್ನು ಸೋಮಣ್ಣ ನಡೆದಬಂದ ಹಾದಿ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಕೊನೆಗೂ ಕೈ ಹಿಡಿದ ಹೈಕಮಾಂಡ್, ಹಳ್ಳಿಯಿಂದ ದಿಲ್ಲಿಗೆ ಜಿಗಿದ ವಿ. ಸೋಮಣ್ಣ!
ವಿ ಸೋಮಣ್ಣ
Follow us
|

Updated on: Jun 09, 2024 | 9:09 PM

ನವದೆಹಲಿ, (ಜೂನ್ 09): ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿ ಅಧಿಕಾರ ಸ್ವೀಕಾರ ಮಾಡಿದರು.  ಇನ್ನು ಮೋದಿ ಜೊತೆ ಕರ್ನಾಟಕದ ನಾಲ್ವರು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕದಿಂದ ಎಚ್‌ಡಿ ಕುಮಾರಸ್ವಾಮಿ (HD Kumaraswamy), ಪ್ರಹ್ಲಾದ್‌ ಜೋಶಿ (Prahlad Joshi), ಶೋಭಾ ಕರಂದ್ಲಾಜೆ (Shobha Karandlaje), ವಿ ಸೋಮಣ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರಲ್ಲಿ ಪ್ರಮುಖವಾಗಿ ಅಚ್ಚರಿ ಎನ್ನುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ.ಸೋಮಣ್ಣ (V. Somanna) ಅವರಿಗೆ ಮಣೆ ಹಾಕಲಾಗಿದೆ.

ವಿಶೇಷ ಎಂದರೆ ಸೋಮಣ್ಣ ಅವರದ್ದು ಅಚ್ಚರಿಯ ಆಯ್ಕೆ. ಉಳಿದ ನಾಲ್ವರ ನಾಲ್ವರ ಹೆಸರು ಮೊದಲೇ ಚಾಲ್ತಿಯಲ್ಲಿದ್ದರೂ ಸೋಮಣ್ಣ ಅವರ ಬಗ್ಗೆ ಹೆಚ್ಚು ಚರ್ಚೆ ನಡೆದಿರಲಿಲ್ಲ. ಇದೀಗ ಅವರು ಅಚ್ಚರಿ ಎಂಬಂತೆ ಆಯ್ಕೆಯಾಗಿದ್ದಾರೆ. ವಿ. ಸೋಮಣ್ಣ ಅವರು ಈ ಹಿಂದೆ ಗೋವಿಂದ ರಾಜ ನಗರ ಕ್ಷೇತ್ರದ ಶಾಸಕರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಅಮಿತ್‌ ಶಾ ಅವರ ಸೂಚನೆ ಮೇರೆಗೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಮತ್ತು ಚಾಮರಾಜ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ತಮ್ಮನ್ನು ಅತಂತ್ರಗೊಳಿಸಿದ ವಿಚಾರದಲ್ಲಿ ಅವರು ಸಿಟ್ಟಾಗಿದ್ದು, ಬಿಜೆಪಿ ಬಿಡುವ ಬಗ್ಗೆ ಮಾತನಾಡಿದ್ದರು. ಬಳಿಕ ಹೈಕಮಾಂಡ್‌ ಅವರನ್ನು ಸಮಾಧಾನ ಮಾಡಿತ್ತು.ಒಂದು ಹಂತದಲ್ಲಿ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಸುದ್ದಿ ಹರಡಿತ್ತಾದರೂ ಅದು ನಾರಾಯಣ ಭಾಂಡಗೆ ಅವರಿಗೆ ಒಲಿದ ಹಿನ್ನೆಲೆಯಲ್ಲಿ ವಿ. ಸೋಮಣ್ಣ ಮತ್ತೆ ನಿರಾಸೆ ಅನುಭವಿಸಿದ್ದರು. ಇದೀಗ ಅವರು ಬಯಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಸ್ಪರ್ಧಿಸಿ ಜಯ ಗಳಿಸಿದ್ದು, ಸಚಿವ ಸ್ಥಾನ ಒಲಿದಿದೆ.

ಇದನ್ನೂ ಓದಿ: ಹಲವು ಏಳು-ಬೀಳುಗಳ ನಡುವೆಯೂ ಮಂಡ್ಯ ಗೆದ್ದು ಮೋದಿ ಸರ್ಕಾರದಲ್ಲಿ ಮಂತ್ರಿಯಾದ ಕುಮಾರಸ್ವಾಮಿ

ಕೊನೆಗೂ ಸೋಮಣ್ಣ ಕೈ ಹಿಡಿದ ಹೈಕಮಾಂಡ್

ಹೌದು….ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿ ಸೋಮಣ್ಣ ಅವರನ್ನು ಸ್ವಕ್ಷೇತ್ರ ಗೋವಿಂದರಾಜನಗರ ಬಿಟ್ಟು ಚಾಮರಾನಗರ ಹಾಗೂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿತ್ತು. ಖುದ್ದು ಹೈಕಮಾಂಡ್​ ನಾಯಕರೇ ಸೋಮಣ್ಣ ಅವರನ್ನು ಈ ರೀತಿ ಪ್ರಯೋಗ ಮಾಡಿದ್ದರು. ಆದ್ರೆ, ಹೈಕಮಾಂಡ್​ ಪ್ರಯೋಗ ಫಲ ನೀಡಿಲ್ಲ. ಸೋಮಣ್ಣ ಸ್ಪರ್ಧೆ ಮಾಡಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಮಣ್ಣ ಸೋತು ಸುಣ್ಣವಾಗಿದ್ದರು. ಬಳಿಕ ಸೋಮಣ್ಣ ಹೈಕಮಾಂಡ್ ಹಾಗೂ ಕೆಲ ರಾಜ್ಯ ನಾಯಕರ ನಡೆಗೆ ಬೇಸತ್ತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದೀಗ ಹೈಕಮಾಂಡ್​, ಸೋಮಣ್ಣ ಅವರ ಕೈಹಿಡಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತು ಕಂಗೆಟ್ಟಿದ್ದ ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ನೀಡಲಾಗಿತ್ತು. ಇದೀಗ ತುಮಕೂರು ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸೋಮಣ್ಣ ಅವರಿಗೆ ಹೈಕಮಾಂಡ್​ ಕೇಂದ್ರ ಸಚಿವ ಸ್ಥಾನವನ್ನೂ ಸಹ ನೀಡಲಾಗಿದೆ. ಈ  ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್​ ತಂತ್ರಗಾರಿಕೆಗೆ ಬಲಿಯಾಗಿದ್ದ ಸೋಮಣ್ಣ ಅವರನ್ನು ಅದೇ ಹೈಕಮಾಂಡ್​ ಕಯ ಹಿಡಿದು ರಾಜಕೀಯವಾಗಿ ಮೇಲೆತ್ತಿರುವುದು ವಿಶೇಷ. ಈ ಮೂಲಕ ಹೈಕಮಾಂಡ್​, ವಿ ಸೋಮಣ್ಣ ಅವರಿಗೆ ನ್ಯಾಯ ದೊರಕಿಸಿದೆ.

ಸೋಮಣ್ಣ  ರಾಜಕೀಯ ಹಾದಿ

  • ಸೋಮಣ್ಣ  ಅವರು  1951,  ಜುಲೈ 20 ರಂದು ವೀರಣ್ಣ ಮತ್ತು ಕೆಂಪಮ್ಮ ದಂಪತಿಯ ಪುತ್ರನಾಗಿ ರಾಮನಗರ ಜಿಲ್ಲೆಯ ದೊಡ್ಡಮರಳವಾಡಿಯಲ್ಲಿ ಜನಿಸಿದ್ದಾರೆ.
  • ಶೈಲಜಾ ಎಂಬಾಕೆಯನ್ನು ಮದುವೆಯಾಗಿ ಮೂರು ಮಕ್ಕಳಿದ್ದಾರೆ.
  • 1983 – 1987: ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆ.
  • 1994 – ಜನತಾದಳ ಟಿಕೆಟ್‌ನಲ್ಲಿ ಬಿನ್ನಿಪೇಟೆಯಿಂದ ಶಾಸಕರಾಗಿ ಆಯ್ಕೆ
  • 1996 – 1999: ಕಾರಾಗೃಹಗಳ ಸಚಿವರು, ಬೆಂಗಳೂರು ನಗರಾಭಿವೃದ್ಧಿ ಸಚಿವರು
  • 1999 – ಬಿನ್ನಿಪೇಟೆಯಿಂದ ಸ್ವತಂತ್ರವಾಗಿ ಆಯ್ಕೆ
  • 2004 – ಕಾಂಗ್ರೆಸ್‌ ಸೇರಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ
  • 2008 – ಕಾಂಗ್ರೆಸ್ ನಿಂದ ಗೋವಿಂದರಾಜನಗರದಿಂದ ಆಯ್ಕೆ
  • 2010 – 2018: ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ.
  • 10 ಜೂನ್ 2016 ರಂದು ಅವರು ಕರ್ನಾಟಕ ವಿಧಾನ ಪರಿಷತ್ತಿ ಸದಸ್ಯರಾಗಿದ್ದರು.
  • 2018- ಬಿಜೆಪಿಯಿಂದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
  • ಮೇ 2018 ರಿಂದ 13 ಮೇ 2023 ರವರೆಗೆ ಗೋವಿಂದರಾಜ್ ನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು.
  • 2019 – 2020: ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಸಚಿವರು
  • 2021 -2023: ವಸತಿ ಸಚಿವರು ಮತ್ತು ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಚಿವರು
  • ಸೋಮಣ್ಣ 4 ಆಗಸ್ಟ್ 2021 ರಿಂದ 13 ಮೇ 2023 ರವರೆಗೆ ಕರ್ನಾಟಕದ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು.
  • 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಸಂಸದರಾಗಿ ಆಯ್ಕೆ
  • 2024 ಜೂನ್​ 09ರಂದು ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ
ತಾಜಾ ಸುದ್ದಿ
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ