ಜಾತಿ ಗಣತಿ: ಕಾಂಗ್ರೆಸ್ ಹೈಕಮಾಂಡ್ ನಡೆ ಸ್ವಾಗತಿಸಿದ ಕರ್ನಾಟಕ ವೀರಶೈವ ಮಹಾಸಭಾ
ಜಾತಿ ಗಣತಿ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿದ್ದು, ಬುಗಿಲೆದ್ದಿದ್ದ ಬೆಂಕಿಯನ್ನು ತಣ್ಣಗಾಗಿಸಿದೆ. ಜಾತಿ ಗಣತಿ ಮರು ಸಮೀಕ್ಷೆ ನಡೆಸಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ವೀರಶೈವ ಮಹಾಸಭೆ ಈ ನಿರ್ಧಾರವನ್ನು ಸ್ವಾಗತಿಸಿದೆ. ಹೊಸ ಗಣತಿ ಹೆಚ್ಚು ಪಾರದರ್ಶಕ ಮತ್ತು ವೈಜ್ಞಾನಿಕವಾಗಿರಬೇಕೆಂಬುದು ಮಹಾಸಭೆಯ ಆಶಯ.

ಬೆಂಗಳೂರು, ಜೂನ್ 10: ರಾಜ್ಯದಲ್ಲಿ ಹೊತ್ತಿದ್ದ ಜಾತಿ ಗಣತಿ (Caste census) ಜಾರಿ ಬೆಂಕಿಯನ್ನು ಕಾಂಗ್ರೆಸ್ (Congress) ಹೈಕಮಾಂಡ್ ತಣ್ಣಗಾಗಿಸಿದೆ. ಜಾತಿ ಗಣತಿ ಜಾರಿಗೆ ಕಾಂಗ್ರೆಸ್ (Congress) ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಸಚಿವರೇ ಜಾತಿ ಗಣತಿ ಜಾರಿಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು. ಕೇವಲ ಸಚಿವರು ಮಾತ್ರವಲ್ಲದೇ, ವಿಪಕ್ಷಗಳು ಮತ್ತು ಕೆಲ ಮಠಾಧೀಶರು ಜಾತಿ ಗಣತಿಯನ್ನು ವಿರೋಧಿಸಿದ್ದರು. ಇದರಿಂದ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂಬುವುದನ್ನು ಮನಗಂಡ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಮಂಗಳವಾರ (ಜೂ.10) ಸಭೆ ನಡೆಸಿ, ಬುಗಿಲೆದ್ದಿರುವ ಜಾತಿ ಗಣತಿ ಜಾರಿ ವಿರೋಧದ ಕಿಡಿಯನ್ನು ತಣ್ಣಗಾಗಿಸಿದ್ದು, ಮರು ಸಮೀಕ್ಷೆ ನಡೆಸುವಂತೆ ಸೂಚಿಸಿದೆ. ಕಾಂಗ್ರೆಸ್ ಹೈಕಮಾಂಡ್ನ ಈ ನಡೆಯನ್ನು ವೀರಶೈವ ಮಹಾಸಭಾ ಸ್ವಾಗತಿಸಿದೆ.
ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾಪ್ರಸನ್ನ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಅತ್ಯಾಧುನಿಕ ಪದ್ಧತಿ ಅಳವಡಿಸಿಕೊಂಡು ಮರುಸಮೀಕ್ಷೆ(ಜಾತಿಗಣತಿ) ನಡೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯು ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳಿಗೆ ಮನವಿ ಮಾಡುತ್ತಲೇ ಬಂದಿರುತ್ತದೆ. ಮಹಾಸಭೆಯ ಹೋರಾಟದ ಫಲವಾಗಿ ಮರುಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ವೀರಶೈವ ಮಹಾಸಭೆಯು ಸ್ವಾಗತಿಸುತ್ತದೆ ಎಂದಿದೆ.
ಈ ಹಿಂದೆ ಆಗಿರುವ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಎಲ್ಲರ ಸಹಕಾರದೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸರ್ವರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ಸರ್ಕಾರ ಗಣತಿಯನ್ನು ನಡೆಸಿದಲ್ಲಿ ಸರ್ವರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ರಾಜ್ಯ ಸರ್ಕಾರ ಗಣತಿಯನ್ನು ನಡೆಸಿದಲ್ಲಿ ಮಹಾಸಭೆಯ ಸಂಪೂರ್ಣ ಸಹಕಾರವಿರುತ್ತದೆ ಎಂದು ಹೇಳಿದೆ.
ಇನ್ನು, ಈಗಿನ ಜಾತಿಗಣತಿ ವರದಿಗೆ ಅಖಿಲ ಭಾರತ ವೀರಶೈವ ಮಹಾಸಭೆಯ ವಿರೋಧವಿಲ್ಲ. ಆದರೆ, ಜಾತಿಗಣತಿ ಸಮೀಕ್ಷೆಯು ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲವೆಂದು ಮಹಾಸಭೆಯು ಪ್ರತಿಭಟಿಸುತ್ತಲೇ ಬಂದಿರುತ್ತದೆ. ಪಾರದರ್ಶಕವಾಗಿಲ್ಲವೆಂದು ಆಧಾರಗಳ ಸಹಿತ ಪ್ರತಿಭಟಿಸುತ್ತಲೇ ಬಂದಿರುತ್ತದೆ. ಈ ಹಿಂದೆ ಆಗಿರುವ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ಜನಗಣತಿ ಮರು ಸರ್ವೇ: ಹೈಕಮಾಂಡ್ ಸಭೆ ಬಳಿಕ ಸಿದ್ದರಾಮಯ್ಯ ಮಹತ್ವದ ಘೋಷಣೆ
ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಲು ತೀರ್ಮಾನ ಎಂದ ಡಿಕೆಶಿ
ಜಾತಿಗಣತಿ ಬಗ್ಗೆ ಚರ್ಚಿಸಲು ಜೂ.12ರಂದು ವಿಶೇಷ ಸಂಪುಟ ಕರೆಯಲಾಗಿತ್ತು. ಜಾತಿಗಣತಿ ಬಗ್ಗೆ ಅನೇಕ ಮಠಾಧೀಶರು ವರಿಷ್ಠರನ್ನು ಭೇಟಿಯಾಗಿದ್ದರು. ಅಂಕಿ ಸಂಖ್ಯೆಯ ಬಗ್ಗೆ ಆಕ್ಷೇಪ ಇದೆ ಅಂತ ಕೆಲವರು ಹೇಳಿದ್ದರು. ಅಪಸ್ವರ ಬರಬಾರದೆಂಬ ಉದ್ದೇಶದಿಂದ ಮತ್ತೆ ಜಾತಿಗಣತಿಗೆ ಸಲಹೆ ನೀಡಿದ್ದಾರೆ. ಹಾಗಾಗಿ ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ. ನಮ್ಮ ಸರ್ಕಾರದ ಬಗ್ಗೆ ಯಾರಿಗೂ ಆತಂಕ ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಲಿದ್ದೇವೆ. ಆನ್ಲೈನ್ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡುತ್ತೇವೆ. ಅಪಸ್ವರ ಕೇಳಿ ಬಂದಿರುವುದಿಂದ ಮತ್ತೆ ಸಮೀಕ್ಷೆ ಮಾಡುತ್ತಿದ್ದೇವೆ ಎಂದರು.








