ಡಿ ಗ್ರೂಪ್ ನೌಕರನಿಂದ 1 ಲಕ್ಷ ರೂ ಲಂಚ ಪಡೆದಿದ್ದ ಆರೋಪ ಸಾಬೀತು; ಇಂಡಿ ತಾಲೂಕು ಆಸ್ಪತ್ರೆಯ ಅಧೀಕ್ಷಕ ಶಿವಾನಂದ ದೇವರ ಅಮಾನತು

TV9 Digital Desk

| Edited By: Ayesha Banu

Updated on:May 30, 2022 | 10:23 PM

ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರೋ ಡಿ ದರ್ಜೆ ನೌಕರರ ಬಳಿ ಲಂಚ ಸ್ವೀಕಾರ ಮಾಡಿದ್ದ ಅರೋಪ ಸಾಬೀತಾದ‌ ಕಾರಣ ಇಂಡಿ ತಾಲೂಕಾ ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರನ್ನ ಡಿಹೆಚ್ಒ ಡಾ ರಾಜಕುಮಾರ ಯರಗಲ್ ಅಮಾನತ್ತು ಆದೇಶ ಜಾರಿ ಮಾಡಿದ್ದಾರೆ.

ಡಿ ಗ್ರೂಪ್ ನೌಕರನಿಂದ 1 ಲಕ್ಷ ರೂ ಲಂಚ ಪಡೆದಿದ್ದ ಆರೋಪ ಸಾಬೀತು; ಇಂಡಿ ತಾಲೂಕು ಆಸ್ಪತ್ರೆಯ ಅಧೀಕ್ಷಕ ಶಿವಾನಂದ ದೇವರ ಅಮಾನತು
ಇಂಡಿ ತಾಲೂಕು ಆಸ್ಪತ್ರೆಯ ಅಧೀಕ್ಷಕ ಶಿವಾನಂದ ದೇವರ ಅಮಾನತು

ವಿಜಯಪುರ: ಇಂಡಿ ತಾಲೂಕು ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರನ್ನು ಅಮಾನತುಗೊಳಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರೋ ಡಿ ದರ್ಜೆ ನೌಕರರ ಬಳಿ 1 ಲಕ್ಷ ರೂಪಾಯಿ ಲಂಚ ಪಡೆದಿದ್ದ ಆರೋಪ ಸಾಬೀತಾದ‌ ಹಿನ್ನೆಲೆ ಸೇವೆಯಿಂದ ಅಮಾನತು ಮಾಡಿ ಡಿಹೆಚ್ಒ ಆದೇಶ ಹೊರಡಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರೋ ಡಿ ದರ್ಜೆ ನೌಕರರ ಬಳಿ ಲಂಚ ಸ್ವೀಕಾರ ಮಾಡಿದ್ದ ಅರೋಪ ಸಾಬೀತಾದ‌ ಕಾರಣ ಇಂಡಿ ತಾಲೂಕಾ ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರನ್ನ ಡಿಹೆಚ್ಒ ಡಾ ರಾಜಕುಮಾರ ಯರಗಲ್ ಅಮಾನತ್ತು ಆದೇಶ ಜಾರಿ ಮಾಡಿದ್ದಾರೆ. 2020-21 ರ ಕೊರೊನಾ ರಿಸ್ಕ್ ಅಲೈನ್ಸ್ ಹಣ ನೀಡಲು ಡಿ ದರ್ಜೆಯ 9 ಜನ ನೌಕರರಿಂದ ಒಂದು ಲಕ್ಷ ರೂಪಾಯಿ ಲಂಚ ಪಡೆದಿದ್ದರು. ಈ ಆರೋಪ ಕುರಿತು ಇಂಡಿ ಉಪ ವಿಭಾಗಾಧಿಕಾರಿಗಳಿಗೆ ತನಿಖೆ ನಡೆಸಲು ಡಿಸಿ ವಿಜಯ ಮಹಾಂತೇಶ ದಾನಮ್ಮನವರು ಸೂಚಿಸಿದ್ದರು. ಎಸಿ‌ ನೇತೃತ್ವದಲ್ಲಿ ತನಿಖೆಯಲ್ಲಿ ಆರೋಪ ಸಾಬೀತಾಗಿದೆ. ಡಿ ದರ್ಜೆ ನೌಕರರಿಂದ ಪೋನ್ ಪೇ ಹಾಗೂ ಬ್ಯಾಂಕ್ ಅಕೌಂಟ್ ಮೂಲಕ ಅಧಿಕಾರಿ‌ ಶಿವಾನಂದ ಹಣ ಪಡೆದಿದ್ದಾರೆ. ತಮ್ಮ ಹಣ ವಾಪಸ್ ಕೇಳಿದ್ದ ನೌಕರರ ವಿರುದ್ದ ಜಾತಿನಿಂದನೆ ಕೇಸ್ ಹಾಕೋದಾಗಿ ಬೆದರಿಕೆ ಹಾಕಿದ್ದರು ಎಂಬುವುದು ಕೂಡ ತನಿಖೆ ವೇಳೆ ಸಾಬೀತಾಗಿದೆ. ಡಿಎಚ್ಓ‌ ರಾಜಕುಮಾರ ಯರಗಲ್ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಧೀಕ್ಷಕ ಶಿವಾನಂದ ದೇವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಸ್ಪರ್ಧಾತ್ಮಕ ಪರಿಕ್ಷೆ ತೆಗೆದುಕೊಳ್ಳಲು ಬೇರೆಯವರ ಬಲವಂತಕ್ಕಿಂತ ನಿಮ್ಮೊಳಗಿನ ಪ್ರೇರೇಪಣೆ ಬಹಳ ಮುಖ್ಯ: ಬೆನಕ ಪ್ರಸಾದ, ಐಎಎಸ್ ಟಾಪರ್

ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೆಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ ಬಳ್ಳಾರಿ: ಜಮೀನಿನ ಖಾತೆ ವರ್ಗಾವಣೆ ಮಾಡಲು 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದಿದ್ದಾರೆ. ಕೆ.ಗಿರಿಧರ ಎಂಬುವವರ ಬಳಿ ಲಂಚ ಸ್ವೀಕರಿಸುವಾಗ ಕಂಪ್ಲಿ ತಾಲೂಕಿನ ದೇವಲಾಪುರದ ಗ್ರಾಮಲೆಕ್ಕಾಧಿಕಾರಿ ಅತೀಫ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಅತೀಫ್ 15 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಅದರಲ್ಲಿ 5 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಆಡಳಿತ ನಮಗೆ ಆದರ್ಶ; ಸರ್ಕಾರಿ‌ ನೌಕರರ ಕ್ರೀಡಾ -ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಡಿಯೂರಪ್ಪರನ್ನ ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada