AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ; ಗಾಳಿಯ ರಭಸಕ್ಕೆ ನೆಲಕ್ಕೆ ಬಿದ್ದ ಬ್ಯಾರಿಕೇಡ್​

ಶಾಲಾ ಆವರಣದಲ್ಲಿ ಜೋಶಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಚಕ್ರದ ಗಾಳಿಯ ರಭಸಕ್ಕೆ ಬ್ಯಾರಿಕೇಡ್ ನೆಲಕ್ಕುರುಳಿದೆ.

ಆಯೇಷಾ ಬಾನು
|

Updated on:Mar 18, 2023 | 1:22 PM

Share

ವಿಜಯಪುರ: ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ಕಲಬುರಗಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾಗ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದೇ ರೀತಿಯ ಮತ್ತೊಂದು ಘಟನೆ ವಿಜಯಪುರದಲ್ಲಿ ಸಂಭವಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಚಕ್ರದ ಗಾಳಿಯ ರಭಸಕ್ಕೆ ಬ್ಯಾರಿಕೇಡ್ ನೆಲಕ್ಕುರುಳಿದೆ.

ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ. ಆದ್ರೆ ಶಾಲಾ ಆವರಣದಲ್ಲಿ ಜೋಶಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಚಕ್ರದ ಗಾಳಿಯ ರಭಸಕ್ಕೆ ಬ್ಯಾರಿಕೇಡ್ ನೆಲಕ್ಕುರುಳಿದೆ. ನೆಲಕ್ಕೆ ಬಿದ್ದ ಬ್ಯಾರಿಕೇಡ್​ಗಳನ್ನು ತಕ್ಷಣ ಪೊಲೀಸರು ಸರಿಪಡಿಸಿದ್ದಾರೆ. ಅದೃಷ್ಟವಶಾತ್ ಹೆಲಿಪ್ಯಾಡ್​​ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಪ್ರಹ್ಲಾದ್ ಜೋಶಿ ಹೆಲಿಪ್ಯಾಡ್​ನಿಂದ ಪ್ರವಾಸಿ ಮಂದಿರದತ್ತ ತೆರಳಿದ್ದಾರೆ.

Minister Pralhad Joshi helicopter landing issue The barricade fell to the ground due to the wind vijayapura news

ನೆಲಕ್ಕೆ ಬಿದ್ದ ಬ್ಯಾರಿಕೇಡ್ ದಾಟಿ ಮುನ್ನುಗ್ಗಿದ ಅಭಿಮಾನಿಗಳು

ಇದನ್ನೂ ಓದಿ: ಬೆಂಗಳೂರಿನಲ್ಲಿ ಸೈನ್ಸ್​ ಗ್ಯಾಲರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಯಡಿಯೂರಪ್ಪ ಹೆಲಿಕಾಪ್ಟರ್​​​ ಲ್ಯಾಂಡಿಂಗ್ ವೇಳೆ ಹಾರಿಬಂದ ಪ್ಲಾಸ್ಟಿಕ್ ಚೀಲಗಳು

ಮಾರ್ಚ್ 6ರಂದು ಕಲಬುರಗಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬಿಎಸ್​ ಯಡಿಯೂರಪ್ಪ ಆಗಮಿಸಿದ್ದಾಗ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹೆಲಿಕಾಪ್ಟರ್ ಲ್ಯಾಂಡ್ ಆಗ್ತಿದೆ ಅನ್ನೋವಷ್ಟರಲ್ಲಿ, ಹೆಲಿಕಾಪ್ಟರ್ ನಿಂದ ಬಂದ ಬಾರಿ ಗಾಳಿಗೆ ಪ್ಲಾಸ್ಟಿಕ್ ಚೀಲಗಳು, ಹೆಲ್ಮೇಟ್, ನೀರಿನ ಕ್ಯಾನ್​ಗಳು ಹಾರಾಡಲು ಆರಂಭಿಸಿದ್ದವು. ಪೈಲೆಟ್ ಸೇರಿದಂತೆ ಅನೇಕರು ಕಂಗಾಲಾಗಿದ್ದರು. ಆದ್ರೆ ನೋಡನೋಡುತ್ತಿದ್ದಂತೆ, ಪೈಲೆಟ್ ಹೆಲಿಕಾಪ್ಟರ್ ನ್ನು ಲ್ಯಾಂಡ್ ಮಾಡದೇ, ಮತ್ತೆ ಮೇಲಕ್ಕೆ ಹೋಗಿ, ಎರಡು ರೌಂಡ್ ಬೇರಡೆ ಹೊಡೆದು, ಮತ್ತೆ ಹಲಿಪ್ಯಾಡ್ ಗೆ ಬಂದು, ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದರು. ಸುಮಾರು ಐದು ನಿಮಿಷಗಳ ಕಾಲ ಆಕಾಶದಲ್ಲೆ ಹಾರಾಡಿದ ಹೆಲಿಕ್ಯಾಪ್ಟರ್, ಹೆಲಿಪ್ಯಾಡ್ ಸುತ್ತಲೂ ಬಿದ್ದಿದ್ದ ಪ್ಲಾಸ್ಟಿಕ್ ಚೀಲಗಳನ್ನ ಸಂಗ್ರಹಿಸಿದ ನಂತರ ಮತ್ತೆ ಅದೇ ಸ್ಥಳದಲ್ಲೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದರು.

ಹೆಲಿಪ್ಯಾಡ್‌ ಬಳಿ ಸ್ವಚ್ಚತಾ ಕಾರ್ಯ ಮಾಡುವುದು ಲೋಕೋಪಯೋಗಿ ಇಲಾಖೆಯ ಜವಾಬ್ದಾರಿ. ಎಲ್ಲವು ಸರಿಯಿದೆ ಅನ್ನೋದನ್ನು ನೋಡಿಕೊಳ್ಳಬೇಕಿದ್ದು ಪೊಲೀಸರು. ಆದರೆ ಲೋಕೋಪಯೋಗಿ ಇಲಾಖೆ ಹೆಲಿಪ್ಯಾಡ್ ಸುತ್ತಮುತ್ತ ಯಾವುದೇ ರೀತಿಯ ಸ್ವಚ್ಚತಾ ಕಾರ್ಯ ಮಾಡೋದೆ ಇರೋದಕ್ಕೆ ಈ ಅವಘಡ ಸಂಭವಿಸಿದ್ದು, ಪಿಡಬ್ಲ್ಯೂಡಿ ಇಲಾಖೆ ಬೇಜವಾಬ್ದಾರಿತನಕ್ಕೆ ಹೆಲಿಕ್ಯಾಪ್ಟರ್ ಪೈಲೆಟ್ ಕೂಡ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:38 pm, Sat, 18 March 23