ಜೂಜುಕೋರರ ಬಗ್ಗೆ ಮಾಹಿತಿ ನೀಡಿದವನನ್ನೇ ಥಳಿಸಿದ ವಿಜಯಪುರ ಪೊಲೀಸರು

ಲಾಕ್​ಡೌನ್​ ಸಮಯದಲ್ಲಿ ಮಸಳಿ ಊರಲ್ಲಿ ಭರ್ಜರಿ ಇಸ್ಪೀಟ್ ದಂಧೆ ನಡೆಯುತ್ತಿತ್ತು. ಮಸಳಿ ಬಿ.ಕೆ ಗ್ರಾಮದಲ್ಲಿ ಕೆಲವರು ಇಸ್ಪಿಟ್ ಆಡುತ್ತಿದ್ದರು. ಈ ಮಾಹಿತಿಯನ್ನು ಗ್ರಾಮದ ಬೀಟ್ ಪೊಲೀಸ್ ಮಹೇಶ್ ಕುಮಾರ್ ಪವಾರ್​ಗೆ ಸಂತೋಷ ನದ್ಯಾಳ್ ತಿಳಿಸಿದ್ದ. ಮಾಹಿತಿ ಕೊಟ್ಟಿದ್ದನ್ನೆ ಮಹಾಪರಾಧ ಎಂದು ಕಾನ್ಸ್​ಟೇಬಲ್ ಮಹೇಶ್ ಹಾಗೂ ಇನ್ನೋರ್ವ ಖಾಸಗಿ ವ್ಯಕ್ತಿ ಥಳಿಸಿದ್ದಾರೆ.

ಜೂಜುಕೋರರ ಬಗ್ಗೆ ಮಾಹಿತಿ ನೀಡಿದವನನ್ನೇ ಥಳಿಸಿದ ವಿಜಯಪುರ ಪೊಲೀಸರು
ಸಂತೋಷ ನದ್ಯಾಳ್

ವಿಜಯಪುರ: ಜೂಜುಕೋರರ ಬಗ್ಗೆ ಮಾಹಿತಿ ನೀಡಿದವನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ನೀಡಿದವನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಮಸಳಿ ಬಿ.ಕೆ. ಗ್ರಾಮದಲ್ಲಿ ನಡೆದಿದೆ. ಸಂತೋಷ ನದ್ಯಾಳ್ ಎಂಬಾತ ಜೂಜುಕೋರರ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಆತನ ಮೇಲೆ ಕಾನ್ಸ್​ಟೇಬಲ್ ಮಹೇಶ್ ಬಾಯಿಗೆ ಬೂಟು ಹಾಕಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಲಾಕ್​ಡೌನ್​ ಸಮಯದಲ್ಲಿ ಮಸಳಿ ಊರಲ್ಲಿ ಭರ್ಜರಿ ಇಸ್ಪೀಟ್ ದಂಧೆ ನಡೆಯುತ್ತಿತ್ತು. ಮಸಳಿ ಬಿ.ಕೆ ಗ್ರಾಮದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು. ಈ ಮಾಹಿತಿಯನ್ನು ಗ್ರಾಮದ ಬೀಟ್ ಪೊಲೀಸ್ ಮಹೇಶ್ ಕುಮಾರ್ ಪವಾರ್​ಗೆ ಸಂತೋಷ ನದ್ಯಾಳ್ ತಿಳಿಸಿದ್ದ. ಮಾಹಿತಿ ಕೊಟ್ಟಿದ್ದನ್ನೆ ಮಹಾಪರಾಧ ಎಂದು ಕಾನ್ಸ್​ಟೇಬಲ್ ಮಹೇಶ್ ಹಾಗೂ ಇನ್ನೋರ್ವ ಖಾಸಗಿ ವ್ಯಕ್ತಿ ಥಳಿಸಿದ್ದಾರೆ.

ಹಲ್ಲೆ ಬಳಿಕ ಮತ್ತೊಬ್ಬ ಖಾಸಗಿ ವ್ಯಕ್ತಿ ಮಸಳಿ ಬಳಿಯ ಬ್ರಿಡ್ಜ್ ಕೆಳಗೆ ಬಿಸಾಕಿ ಹೋಗಿದ್ದ. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ದೂರು ನೀಡಲು ಹೋದರೂ ಇಂಡಿ ಗ್ರಾಮೀಣ ಪೊಲೀಸರು ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಆ್ಯಂಬುಲೆನ್ಸ್​ಗಳ ಮೇಲೆ ಕಿಡಿಗೇಡಿಗಳಿಂದ ಕಲ್ಲೆಸೆತ
ಚಿಕ್ಕಮಗಳೂರು: ನಿಂತಿದ್ದ ಆ್ಯಂಬುಲೆನ್ಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲನ್ನು ಎಸೆದಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಪಟ್ಟಣದಲ್ಲಿ ನಡೆದಿದೆ. ಕೊರೊನಾ ರೋಗಿಗಳ ಉಚಿತ ಬಳಕೆಗಾಗಿ ಸಮಾಜ ಸೇವಕ ಗೋಪಿಕೃಷ್ಣ ಎಂಬುವರು ನೀಡಿದ್ದ ಮೂರು ಆ್ಯಂಬುಲೆನ್ಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಆ್ಯಂಬುಲೆನ್ಸ್​ಗಳು ವಿಶೇಷ ಐಸಿಯು ಸೌಲಭ್ಯವನ್ನು ಹೊಂದಿತ್ತು.

ಇದನ್ನೂ ಓದಿ

ಚಿಕ್ಕಬಳ್ಳಾಪುರ: ಕರ್ತವ್ಯಲೋಪ, ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ; ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ

ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ; ಮಗನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು

(Police have attacked an informant about gamblers at Vijaypur)