ಬಸವನಾಡಿನಲ್ಲಿ ಭ್ರಷ್ಟರಿಗೆ ಅವಕಾಶ ಇಲ್ಲ, ನೀವು ಧ್ವಜಾರೋಹಣ ಮಾಡಬಾರದು; ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಮಹಿಳೆಯರ ಆಕ್ರೋಶ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುತ್ತಿದ್ದ ಶಶಿಕಲಾ‌ ಜೊಲ್ಲೆಯವರನ್ನು ಮಹಿಳೆಯರು ತಡೆದು, ಭ್ರಷ್ಟಾಚಾರ ಆರೋಪ ಹೊತ್ತಿರುವ ನೀವು ಧ್ವಜಾರೋಹಣ ಮಾಡಬಾರದು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬಸವನಾಡಿನಲ್ಲಿ ಭ್ರಷ್ಟರಿಗೆ ಅವಕಾಶ ಇಲ್ಲ, ನೀವು ಧ್ವಜಾರೋಹಣ ಮಾಡಬಾರದು; ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಮಹಿಳೆಯರ ಆಕ್ರೋಶ
ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಮಹಿಳೆಯರ ಆಕ್ರೋಶ
Follow us
TV9 Web
| Updated By: ಆಯೇಷಾ ಬಾನು

Updated on:Aug 15, 2021 | 1:11 PM

ವಿಜಯಪುರ: ಜಿಲ್ಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಚ್ ಮತ್ತು ವಕ್ಫ್ ಹಾಘೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ‌ ಜೊಲ್ಲೆ ಅವರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಬಾರದೆಂದು ಒತ್ತಾಯಿಸಿ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

75 ನೇ ಸ್ವಾಂತಂತ್ರಯೋತ್ಸವದ ಧ್ವಜಾರೋಹಣ ಮಾಡಲು ತೆರಳುತ್ತಿದ್ದ ವೇಳೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಘೇರಾವ್ ಹಾಕಿ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ದಾರೆ.  ನಗರದ ಹೊರ ಭಾಗದಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹನ ಕಾರ್ಯಕ್ರಮ  ಆಯೋಜಿಸಲಾಗಿತ್ತು. ಧ್ವಜಾರೋಹನ ನೆರವೇರಿಸಲು ಸಚಿವೆ ಜೊಲ್ಲೆ ವೇದಿಕೆಯತ್ತ ಆಗಮಿಸುತ್ತಿದ್ದಂತೆ ಪೂರ್ವಭಾವಿಯಾಗಿ ವೇದಿಕೆ ಜಮಾಯಿಸಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಭ್ರಷ್ಟಾಚಾರ ಆರೋಪ ಇರುವ  ಸಚಿವೆ ಶಶಿಕಲಾ ಜೊಲ್ಲೆ ನಮಗೆ ಬೇಡಾ.

shashikala jolle

ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಮಹಿಳೆಯರ ಆಕ್ರೋಶ

ಭ್ರಷ್ಟಾಚಾರ ಆರೋಪ ಇರುವವರು ಧ್ವಜಾರೋಹಣ ನೆರವೇರಿಸಬಾರದು ಎಂದು ಘೇರಾವ್ ಹಾಕಿದರು. ದಿಡೀರ್ ನಡೆದ ಘೇರಾವ್ ಘಟನೆಯಿಂದ ಸ್ವತಃ ಸಚಿವೆ ಜೊಲ್ಲೆ ಕೆಲ ಕ್ಷಣ ದಂಗಾಗಿ ಹೋದರು. ಪೊಲೀಸರಿಗೆ ಈ ಘಟನೆ ಶಾಕ್ ನೀಡಿತ್ತು. ಸ್ಥಳದಲ್ಲಿದ್ದ ಪೊಲೀಸರು ಕಾಂಗ್ರೆಸ್ ಮಹಿಳಾ  ಕಾರ್ಯಕರ್ತನೆಯರನ್ನಾ ಹಿಂದೆ ಸರಿಸಲು ಹರ ಸಾಹಸ ಪಡಬೇಕಾಯಿತು. ಓಬವ್ವ ಪಡೆ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಘೇರಾವ್ ಹಾಕಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದ್ದ ಕೈ ಕಾರ್ಯಕರ್ತೆಯನ್ನು ಹತೋಟಿಗೆ ತರಲು ಸಾಹಸ ಪಡುವಂತಾಗಿತ್ತು. ಬಳಿಕ ಸಚಿವೆಗೆ ಘೇರಾವ್ ಹಾಕಿದ ಕಾಂಗ್ರೆಸ್  ಕಾರ್ಯಕರ್ತೆಯರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ.

ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರನ್ನು ವಶಕ್ಕೆ ಪಡೆದು ಶಶಿಕಲಾ ಜೊಲ್ಲೆಯವರಿಗೆ ಧ್ವಜಾರೋಹಣ ಮಾಡಲು ಅವಕಾಶ ಮಾಡಿಕೊಟ್ಟರು. ಬಳಿಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಪೊಲೀಸ್, ಡಿಎಆರ್‌, ಐಆರ್ಬಿ ತುಕಡಿಗಳಿಂದ ಪಥ ಸಂಚಲನ, ಗೌರವ ವಂದನೆ ನೆರವೇರಿತು. ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಡಿಸಿಪಿ ಸುನೀಲ್ ಕುಮಾರ್, ಎಸ್ಪಿ ಆನಂದಕುಮಾರ ಹಾಗೂ ಇತರ ಗಣ್ಯರು, ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: Viral Video: ಕೊವಿಡ್ ಲಸಿಕೆ ಪಡೆಯಲು ವ್ಯಕ್ತಿಯ ಸಕತ್​ ಪ್ಲಾನ್​! ವಿಡಿಯೋ ನೋಡಿದ್ರೆ ನೀವೂ ನಗ್ತೀರಾ

Published On - 1:03 pm, Sun, 15 August 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?