ಬಾಗಲಕೋಟೆಗೆ ಕಾಲಿಟ್ಟ ವಕ್ಫ್​​: ಮನೆ, ಸರ್ಕಾರಿ ಕಟ್ಟಡಗಳಿಗೆ ನೋಟಿಸ್, ಕಾನೂನು ಹೋರಾಟಕ್ಕೆ ಗ್ರಾಮಸ್ಥರು ಸಿದ್ಧ

ವಕ್ಫ್ ಆಸ್ತಿ ವಿವಾದವು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಬಾದಾಮಿ ಮತ್ತು ಶಿರೂರಿನಲ್ಲಿ ಸರ್ಕಾರಿ ಕಟ್ಟಡಗಳು, ಶಾಲೆಗಳು ಮತ್ತು ಆಶ್ರಯ ಮನೆಗಳಿಗೆ ನೋಟಿಸ್‌ ಬಂದಿವೆ. ಇಸ್ಲಾಮಿಯಾ ತಂಜೀಮ್ ಕಮಿಟಿ ಈ ಆಸ್ತಿಗಳು ತಮ್ಮದೆಂದು ಹೇಳಿಕೊಂಡಿದೆ. ಸ್ಥಳೀಯರು ತೀವ್ರ ಆತಂಕದಲ್ಲಿದ್ದಾರೆ ಮತ್ತು ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದಾರೆ.

ಬಾಗಲಕೋಟೆಗೆ ಕಾಲಿಟ್ಟ ವಕ್ಫ್​​: ಮನೆ, ಸರ್ಕಾರಿ ಕಟ್ಟಡಗಳಿಗೆ ನೋಟಿಸ್, ಕಾನೂನು ಹೋರಾಟಕ್ಕೆ ಗ್ರಾಮಸ್ಥರು ಸಿದ್ಧ
ಬಾಗಲಕೋಟೆಗೆ ಕಾಲಿಟ್ಟ ವಕ್ಫ್​​: ಮನೆ, ಸರ್ಕಾರಿ ಕಟ್ಟಡಗಳಿಗೆ ನೋಟಿಸ್, ಕಾನೂನು ಹೋರಾಟಕ್ಕೆ ಗ್ರಾಮಸ್ಥರು ಸಿದ್ಧ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 06, 2024 | 9:04 PM

ಬಾಗಲಕೋಟೆ, ನವೆಂಬರ್​ 06: ವಕ್ಫ್​ (Waqf) ಆಸ್ತಿ ವಿವಾದ ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಸದ್ಯ ಈ ವಿವಾದ ಇದೀಗ ಜಿಲ್ಲೆಗೂ ವ್ಯಾಪಿಸಿದ್ದು, ಸರ್ಕಾರಿ ಕಚೇರಿಗಳು, ವಸತಿ ನಿಲಯಗಳು, ಆಶ್ರಯ ಯೋಜನೆ ಮನೆಗಳಿಗೆ ನೋಟಿಸ್​ ಬಂದಿವೆ. ಇದು ಸದ್ಯ ಸ್ಥಳೀಯರನ್ನು ಆತಂಕಕ್ಕೆ ಈಡುಮಾಡಿದೆ.

ಜಿಲ್ಲೆಯ ಬಾದಾಮಿ ಪಟ್ಟಣ ಹಾಗೂ ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದಲ್ಲಿರುವ ಮನೆ ಹಾಗೂ ಸರ್ಕಾರಿ ಕಟ್ಟಡಗಳಿಗೆ ಸದ್ಯ ನೋಟಿಸ್ ಬಂದಿದ್ದು, ಇವೆಲ್ಲಾ ವಕ್ಪ್ ಆಸ್ತಿಯಂತೆ. ಬಾದಾಮಿ ಪಟ್ಟಣದ ಸರ್ವೆ ನಂಬರ್​ 192 ರಲ್ಲಿನ ನಿರ್ಮಾಣ ಹಂತದ ಮಿನಿ ವಿಧಾನಸೌಧ ಕಟ್ಟಡ, ಮಲಪ್ರಭಾ ಎಡದಂಡೆ‌ ಕಾಲುವೆ ಇಂಜಿನಿಯರಿಂಗ್ ವಿಭಾಗದ ಕಚೇರಿ ಜಾಗದ ಪಹಣಿಯಲ್ಲಿ ವಕ್ಪ್ ಎಂದು ಹೆಸರು ನಮೂದಾಗಿದೆ.

ಇದನ್ನೂ ಓದಿ: ವಕ್ಫ್​ ಗುಮ್ಮ: ಜಂಟಿ ಸದನ ಸಮಿತಿ ಅಧ್ಯಕ್ಷರ ಆಗಮನಕ್ಕೆ ವಿರೋಧ, ಡೋಂಟ್ ಟಚ್ ವಕ್ಫ್​ ಎಂದ ಜಮೀರ್

ಕಾಲಂ ನಂಬರ್​ 9 ರಲ್ಲಿ ಸ್ವಾಧೀನದಾರರು, ಕಬ್ಜೆದಾರರು ಎಂದು ದಾಖಲಾಗಿದೆ. ಇನ್ನು ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದ ಸರ್ವೆ ‌ನಂಬರ್​ 92 ರಲ್ಲಿ ಬರುವ 54 ಎಕರೆ 2 ಗುಂಟೆ ಜಾಗ ಎಲ್ಲವೂ ವಕ್ಪ್ ಎಂದು ಇಸ್ಲಾಮಿಯಾ ತಂಜೀಮ್ ಕಮೀಟಿ ವಾದ ಮಾಡುತ್ತಿದೆ. ಈ ಸರ್ವೆ ನಂಬರ್​ನಲ್ಲಿ ಹೆಸ್ಕಾಮ್, ಮೊರಾರ್ಜಿ ವಸತಿ ಶಾಲೆ, ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, 1200 ಆಶ್ರಯ ಯೋಜನೆ‌ ಮನೆಗಳಿವೆ. ಇವು ವಕ್ಪ್ ಆಸ್ತಿ ತೆರವುಗೊಳಿಸಿ ಎಂದು ವಕ್ಪ್ ಇಸ್ಲಾಮಿಯಾ ತಂಜೀಮ್ ಕಮೀಟಿ ಡಿಸಿ ಹಾಗೂ ವಕ್ಫ್​ಗೆ ಅರ್ಜಿ ಸಲ್ಲಿಸಿದೆ. ನಂತರ ತಾಲೂಕು ಪಂಚಾಯತಿನಿಂದ ನೋಟಿಸ್ ಬಂದಿದ್ದು, ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ಇಲ್ಲಿ ಶಿರೂರು ಗ್ರಾಮಸ್ಥರಿಗೆ ನೇರವಾಗಿ ನೋಟಿಸ್ ಬಂದಿಲ್ಲ. ಇನ್ನು ಯಾವುದೇ ಮನೆ ಉತಾರದಲ್ಲಾಗಲಿ, ಎಲ್ಲೂ ವಕ್ಫ್​ ಎಂದು ನಮೂದಾಗಿಲ್ಲ. ಆದರೆ ಇಸ್ಲಾಮಿಯಾ ತಂಜೀಮ್‌ ಕಮೀಟಿ ಇದು ವಕ್ಪ್ ಆಸ್ತಿ, ತನ್ನ ಸುಪರ್ದಿಗೆ ತೆಗೆದುಕೊಂಡು ನಮಗೆ ನೀಡಬೇಕೆಂದು ಡಿಸಿ, ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದೆ. ತಾಲೂಕು ಪಂಚಾಯತಿನಿಂದ‌ 2023ರ ಅವಧಿಯಲ್ಲಿ ನೋಟಿಸ್ ಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ವಕ್ಫ್​ ವಿವಾದ ಬೆನ್ನಲ್ಲೇ ರೈತರ ಪಹಣಿ ಸಿಗದಂತೆ ಸರ್ವರ್ ಡೌನ್: ಸರ್ಕಾರದ ವಿರುದ್ಧ ಯತ್ನಾಳ್​ ಆರೋಪ

ಇನ್ನು ಈ‌ ವಿವಾದ ಧಾರವಾಡ ಹೈಕೋರ್ಟ್​ಗೆ ಹೋಗಿದ್ದು ಅಲೆದಾಟ ಶುರುವಾಗಿದೆ. ಸರಕಾರ, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಸ್ಲಾಮಿಯಾ ತಂಜೀಮ್‌ ಕಮೀಟಿ ಮನವಿಯಂತೆ ವಕ್ಫ್​ ಎಂದು ಉಲ್ಲೇಖ ಮಾಡಲು ಹೊರಟರೆ, ನಾವು ಕಾನೂನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕೋದಿಲ್ಲ ಎಂದು ಸ್ಥಳೀಯರಾದ ರಮೇಶ್ ಎಂಬುವವರು ಹೇಳಿದ್ದಾರೆ. ಒಟ್ಟಿನಲ್ಲಿ ವಕ್ಪ್ ಆಸ್ತಿ ಕಂಟಕ ದಿನದಿಂದ ದಿನಕ್ಕೆ ಎಲ್ಲಾ ಕಡೆ ವ್ಯಾಪಿಸುತ್ತಿದ್ದು, ಜನರಲ್ಲಿ ಆತಂಕ ಮೂಡಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ