ವಕ್ಫ್ ಆಸ್ತಿ ಅವರ ಅಪ್ಪನ ಆಸ್ತಿಯಲ್ಲ: ಶಾಸಕ ಯತ್ನಾಳ್​ ವಿರುದ್ಧ​ ಸಚಿವ ಜಮೀರ್ ವಾಗ್ದಾಳಿ

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಯತ್ನಾಳ್​ ಆಸ್ತಿಯೋ ಅಥವಾ ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯೂ ಅಲ್ಲ, ಇದು ವಕ್ಪ್ ಆಸ್ತಿ ಎಂದು ಯತ್ನಾಳ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ನೀಡಿದ್ದಾರೆ. 

ವಕ್ಫ್ ಆಸ್ತಿ ಅವರ ಅಪ್ಪನ ಆಸ್ತಿಯಲ್ಲ: ಶಾಸಕ ಯತ್ನಾಳ್​ ವಿರುದ್ಧ​ ಸಚಿವ ಜಮೀರ್ ವಾಗ್ದಾಳಿ
ವಕ್ಫ್ ಆಸ್ತಿ ಅವರ ಅಪ್ಪನ ಆಸ್ತಿಯಲ್ಲ: ಶಾಸಕ ಯತ್ನಾಳ್​ ವಿರುದ್ಧ​ ಸಚಿವ ಜಮೀರ್ ವಾಗ್ದಾಳಿ
Edited By:

Updated on: Jun 22, 2024 | 7:19 PM

ವಿಜಯಪುರ, ಜೂನ್​ 22: ವಕ್ಫ್ ಆಸ್ತಿ 12 ಲಕ್ಷ ಎಕರೆಯಲ್ಲ 34 ಸಾವಿರ ಎಕರೆ ಇದೆ. ಅದು ಶಾಸಕ ಯತ್ನಾಳ್​ (Basangouda Patil Yatnal) ಅವರ ಅಪ್ಪನ ಆಸ್ತಿಯಲ್ಲ. ಬಡವರಿಗೆ ಅದನ್ನು ಎತ್ತಿ ಕೊಡುವುದಕ್ಕೆ ಎಂದು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan)​ ವಾಗ್ದಾಳಿ ಮಾಡಿದ್ದಾರೆ. ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಜಮೀನು ವಕ್ಫ್ ಆಸ್ತಿಯಿದೆ. ಅದನ್ನು ಬಡವರ ಕೆಲಸಕ್ಕೆ ಉಪಯೋಗಿಸಬೇಕು ಎಂಬ ಯತ್ನಾಳ್​ ಹೇಳಿಕೆ ಜಮೀರ್ ಟಾಂಗ್​ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್​, ಯತ್ನಾಳ್​ ಆಸ್ತಿಯೋ, ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯೂ ಅಲ್ಲ, ಇದು ವಕ್ಪ್ ಆಸ್ತಿ ಎಂದು ಕಿಡಿಕಾದ್ದಾರೆ.

ಇದನ್ನೂ ಓದಿ: ದರ್ಶನ್ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ನೀಡಿದರು ಸ್ಪಷ್ಟನೆ, ಏನವರ ಅನಿಸಿಕೆ?

ವಕ್ಫ್​ಗೆ ಆಸ್ತಿ ಕೊಟ್ಟಿರುವುದು ಯಾರು? ದಾನಿಗಳು ಕೊಟ್ಟಿದ್ದು. ನಮ್ಮಪ್ಪನ ಆಸ್ತಿ ಇದ್ದರೆ ಅದನ್ನ ಯಾರಿಗಾದರೂ ಕೊಡಬಹುದು. ಆದರೆ ಅದು ನನ್ನ ಆಸ್ತಿಯಲ್ಲ ಬಡವರಿಗೆ ಎತ್ತಿ ಕೊಡುವುದಕ್ಕೆ. ನಾಳೆ ಅವರ ಅಪ್ಪನ ಆಸ್ತಿಯಿದ್ದರೆ ಅದನ್ನು ಯಾರಿಗಾದರೂ ಕೊಡಬಹುದು ಎಂದಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರನ್ನು ವಂಚಿಸಿದೆ: ವಿ ಸೋಮಣ್ಣ, ಕೇಂದ್ರ ಸಚಿವ

ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ನೀಡಿದ್ದಾರೆ. ದಾನ ಮಾಡಿದವರು ಯಾವುದಕ್ಕೆ ಉಪಯೋಗ ಮಾಡಬೇಕೆಂಬುದನ್ನು ಕೂಡ ತಿಳಿಸಿರುತ್ತಾರೆ. ಶಿಕ್ಷಣ, ಸ್ಮಶಾನ, ಈದ್ಗಾ, ಮಸೀದಿ ಕಟ್ಟಲು ಉಪಯೋಗಿಸಬೇಕೆಂದು ದಾನ ಮಾಡಿರುತ್ತಾರೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲ್ಲ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಗ್ಯಾರಂಟಿ ಯೋಜನೆಗಳಿಗಾಗಿ ಎಂದು ವಿರೋಧ ಪಕ್ಷಗಳ ವಾಗ್ದಾಳಿ ವಿಚಾರವಾಗಿ ಮಾತನಾಡಿದ್ದು, ಗ್ಯಾರಂಟಿ ಯೋಜನೆಗಳನ್ನ ರಾಜಕೀಯ ಲಾಭಕ್ಕೆ ಕೊಟ್ಟಿಲ್ಲ  ಎಂದು ನಮ್ಮ ಸಿಎಂ ಅವರೇ ಹೇಳಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಬಡವರಿಗೆ ಸಹಾಯ ಆಗಲಿ ಎಂದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ.

ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನು?

ಡಿಸಿಎಂ ವಿಚಾರವಾಗಿ ಮಾತನಾಡಿದ್ದು, ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನು. ಎಲ್ಲ ಸಮಾಜದವರಿಗೂ ಉಪಮುಖ್ಯಂಮತ್ರಿ ಸ್ಥಾನ ಕೊಡಬೇಕೆಂಬ ಬೇಡಿಕೆ ಇದೆ. ಈ ವಿಚಾರದಲ್ಲಿ ಯಾವುದೇ ಆಂತರಿಕ ಅಸಮಾಧಾನವಿಲ್ಲ. ಅದನ್ನು ಕೊಡುವವರು ನಮ್ಮ ಹೈಕಮಾಂಡ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us