ಯಾದಗಿರಿಯ ರಾಮಸಮುದ್ರದಲ್ಲಿ ಮಂದಿರ ಉದ್ಘಾಟನೆ ಕ್ಷಣ ಸಂಭ್ರಮಿಸೋಕೆ ಗ್ರಾಮಸ್ಥರು ಸಿದ್ದ, ಏನು ವಿಶೇಷ
ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ವಿಶೇಷ ಸಂಭ್ರಮ ಮನೆ ಮಾಡಿದೆ. ರಾಮನ ಹೆಸರೆ ಗ್ರಾಮಕ್ಕೆ ಇಟ್ಟಿರುವುದರಿಂದ ಐತಿಹಾಸಿಕ ಕ್ಷಣವನ್ನ ಸಂಭ್ರಮಿಸೋಕೆ ಗ್ರಾಮಸ್ಥರು ಸಿದ್ದರಾಗಿದ್ದಾರೆ.
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಉದ್ಘಾಟನೆಗೆ ಕೌಂಟ್ ಡೌನ್ ಶುರುವಾಗಿದೆ. ದೇಶ ಅಲ್ಲದೆ ಇಡೀ ಜಗತ್ತೆ ಆ ಐತಿಹಾಸಿಕ ಕ್ಷಣಕ್ಕೆ ಕಾತುರದಿಂದ ಕಾಯುತ್ತಿದೆ. ಆ ರಾಮಲಲ್ಲನಿಗೂ ನಮ್ಮ ಕರ್ನಾಟಕಕ್ಕೂ ಸಂಬಂಧವಿದೆ. ವನವಾಸ ಕಾಲದಲ್ಲಿ ರಾಮ ಆ ಜಿಲ್ಲೆಯ ಕೆಲ ಕಡೆ ಬಂದು ಹೋಗಿದ್ದ ಎಂಬ ಪೌರಾಣಿಕ ಮಾತಿದೆ. ಮರ್ಯಾದಾ ಪುರುಷೋತ್ತಮ ಹಾದು ಹೋಗಿದ್ದ ಆ ಸ್ಥಳ ಯಾವುದು ಅಂತೀರಾ? ಈ ಸ್ಟೋರಿ ನೋಡಿ..
ರಾಮ ಲಾಲಾಗೂ ಇಲ್ಲಿನ ರಾಮಸಮುದ್ರಕ್ಕೂ ಇದೆ ಲಿಂಕ್.. ವನವಾಸದ ವೇಳೆ ಮರ್ಯಾದಾ ಪುರುಷೋತ್ತಮ ರಾಮಸಮುದ್ರಕ್ಕೆ ಬಂದಿದ್ರಾ? ರಾಮ ಬಂದಿದ್ದಕ್ಕೆ ಗ್ರಾಮಕ್ಕೆ ರಾಮಸಮುದ್ರ ಎಂಬ ಹೆಸರು ಬಂತಾ..? ಯಸ್ ಇದಕ್ಕೆ ಕುರುಹುಗಳು ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಕಂಡುಬಂದಿದೆ.
ಹೌದು ರಾಮನಿಗೂ ದಕ್ಷಿಣ ಭಾರತಕ್ಕೆ ಸಾಕಷ್ಟು ನಂಟಿದೆ. ಅದರಲ್ಲೂ ಕರ್ನಾಟಕ ಕೆಲ ಭಾಗದಲ್ಲಿ ರಾಮ ತನ್ನ ಪರಿವಾರದೊಂದಿಗೆ ಸಂಚರಿಸಿದ್ದ ಅಂತ ಹೇಳಲಾಗುತ್ತಿದೆ. ಅದರಲ್ಲೂ ಯಾದಗಿರಿ ಜಿಲ್ಲೆಯ ಕೆಲ ಕಡೆ ರಾಮ ಬಂದಿದ್ದ ಅಂತ ಹೇಳಲಾಗುತ್ತಿದೆ. ಅದರಲ್ಲೂ ವನವಾಸದ ಸಂದರ್ಭದಲ್ಲಿ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮಕ್ಕೆ ಬಂದಿದ್ದ ಅಂತ ಹೇಳಲಾಗುತ್ತಿದೆ.
ವನವಾಸದ ಕಾಲದಲ್ಲಿ ರಾಮ ನಡೆದುಕೊಂಡು ಹೋಗುವಾಗ ರಾಮಸಮುದ್ರ ಗ್ರಾಮದ ಬಳಿ ಬಾಯಾರಿಕೆ ಆದಾಗ ಗ್ರಾಮದ ಹೊರ ಭಾಗದಲ್ಲಿರುವ ಕೆರೆಯ ನೀರು ಸೇವಿಸಿದ್ದ ಅಂತ ಹೇಳಲಾಗುತ್ತಿದೆ. ಪುರಾತನ ಕಾಲದಲ್ಲಿ ಗ್ರಾಮದ ಹೊರ ಭಾಗದಲ್ಲಿ ರಾಮಚಂದ್ರ ಎಂಬ ವ್ಯಕ್ತಿ ಗ್ರಾಮದ ಹೊರ ಭಾಗದಲ್ಲಿ ದನಕರುಗಳಿಗೆ ಹಾಗೂ ಹಕ್ಕಿಗಳಿಗೆ ನೀರಿನ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಕೆರೆ ಕಟ್ಟಿದ್ದ ಅಂತ ಹೇಳಲಾಗುತ್ತದೆ. ಕೆರೆ ಕಟ್ಟುವಾಗ ಲಿಂಗ ಸಿಕ್ಕಿದೆ ಅಂತ ಲಿಂಗವನ್ನ ಕೆರೆಯ ಪಕ್ಕದಲ್ಲಿ ಇಡಲಾಗಿತ್ತು. ರಾಮ ವನವಾಸದ ವೇಳೆ ಬಂದಾಗ ಕೆರೆ ನೀರು ಸೇವನೆ ಮಾಡಿ, ಆ ಲಿಂಗವನ್ನು ಕೆರೆ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಅಂತ ಹೇಳಲಾಗುತ್ತದೆ. ಇದೆ ಕಾರಣಕ್ಕೆ ದೇವಸ್ಥಾನಕ್ಕೆ ಗ್ರಾಮಸ್ಥರು ಹಿಂದೆ ರಾಮಲಿಂಗ ದೇವಸ್ಥಾನ ಅಂತ ಹೆಸರಿಟ್ಟಿದ್ದಾರಂತೆ. ರಾಮ ಲಿಂಗವನ್ನ ಪ್ರತಿಷ್ಠಾಪನೆ ಮಾಡಿದ್ದಕ್ಕೆ ರಾಮಲಿಂಗ ಅಂತ ಹೆಸರಲಿಡಲಾಗಿದೆಯಂತೆ ಎಂದು ಆಂಜನೇಯ ದೇವಸ್ಥಾನದ ಅರ್ಚಕ ಹನುಮಂತರಾಯ ತಿಳಿಸಿದ್ದಾರೆ.
ಇನ್ನು ಇದೇ ಕಾರಣಕ್ಕೆ ಆಗಿನ ಕಾಲದಲ್ಲಿ ಗ್ರಾಮಕ್ಕೆ ರಾಮಚಂದ್ರ ಗ್ರಾಮ ಅಂತ ಹೆಸರು ಬಂದಿದೆ. ಹಿಂದೆ ಈ ಗ್ರಾಮ ಈಗಿರುವ ಜಾಗದಿಂದ ಮೂರು ಕಿ.ಮೀ. ದೂರದಲ್ಲಿತ್ತು. ಕೆರೆ ನಿರ್ಮಾಣವಾದಾಗ ಗ್ರಾಮವು ಕೆರೆ ಪಕ್ಕದಲ್ಲಿ ನಿರ್ಮಾಣವಾಗಿದೆಯಂತೆ. ಇನ್ನು ಈಗಲೂ ಕೂಡ ಆಡು ಭಾಷೆಯಲ್ಲಿ ಗ್ರಾಮಕ್ಕೆ ರಾಮಚಂದ್ರ ಅಂತಾನೆ ಕರೆಯುತ್ತಾರೆ. ಆದ್ರೆ ಆಡಳಿತಾತ್ಮಕವಾಗಿ ಗ್ರಾಮಕ್ಕೆ ರಾಮಸಮುದ್ರ ಅಂತ ಹೆಸರಿದೆ.
ಇದನ್ನೂ ಓದಿ: ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ಗೋಕರ್ಣದಲ್ಲಿ ರಾಮ ತಪಸ್ಸು: ರಾಮತೀರ್ಥ ದೇವಸ್ಥಾನ ಜೀರ್ಣೋದ್ಧಾರ
ಇನ್ನು ಇದೆ ಕಾರಣಕ್ಕೆ ಗ್ರಾಮದಲ್ಲಿ ರಾಮಲಿಂಗ ಎಂಬ ಹೆಸರಿನ ವ್ಯಕ್ತಿಗಳು ಬಹಳಷ್ಟು ಜನ ಇದ್ದಾರೆ. ಗ್ರಾಮಕ್ಕೂ ರಾಮನಿಗೂ ಲಿಂಕ್ ಇರೋ ಕಾರಣಕ್ಕೆ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಗ್ರಾಮದ ಜನರಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿದೆ. ಇನ್ನು ಕಳೆದ ಕೆಲ ವರ್ಷಗಳಿಂದ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪ್ರತಿದಿನ ರಾಮನ ಜಪ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ರಾಮಾಯಾಣ ಪುಸ್ತಕಗಳನ್ನಿಟ್ಟು ನಿತ್ಯ ಪೂಜೆ ಮಾಡಲಾಗುತ್ತಿದೆ.
ಜೊತೆಗೆ ನಿತ್ಯ ಹುನುಮಾನ ಚಾಲಿಸಾವನ್ನ ಪಠಣೆ ಮಾಡಲಾಗುತ್ತಿದೆ. ಇನ್ನು ಇದೇ ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗುತ್ತಿರುವುದರ ಸಮ್ಮುಖದಲ್ಲಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಗ್ರಾಮಸ್ಥರು ಸಭೆ ನಡೆಸಿದ್ದಾರೆ. ಮಂದಿರ ಉದ್ಘಾಟನೆ ದಿನ ಗ್ರಾಮದ ಪ್ರತಿಯೊಂದು ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆಯನ್ನ ಮಾಡಲು ನಿರ್ಧರಿಸಿದ್ದಾರೆ. ಗ್ರಾಮಸ್ಥರೆಲ್ಲರು ಸೇರಿ ಪ್ರಸಾದ ವ್ಯವಸ್ಥೆ ಹಾಗೂ ರಾಮನ ಮೂರ್ತಿ ಮೆರವಣಿಗೆ ಮಾಡಲು ಸಭೆ ಮಾಡಿ ನಿರ್ಧಾರ ಮಾಡಿದ್ದಾರೆ ಎಂದು ಗ್ರಾಮಸ್ಥರಾದ ಬಾಬುಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
ಒಟ್ನಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮದಲ್ಲಿ ವಿಶೇಷ ರೀತಿಯ ಸಂಭ್ರಮ ಮನೆ ಮಾಡಿದೆ. ರಾಮನ ಹೆಸರೆ ಗ್ರಾಮಕ್ಕೆ ಇಟ್ಟಿರುವುದರಿಂದ ಐತಿಹಾಸಿಕ ಕ್ಷಣವನ್ನ ಸಂಭ್ರಮಿಸೋಕೆ ಗ್ರಾಮಸ್ಥರು ಸಿದ್ದರಾಗಿದ್ದಾರೆ ಅನ್ನಿ.
ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ