ಯಾದಗಿರಿ: ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿ: 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ

ಯಾದಗಿರಿ ತಾಲೂಕಿನ ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ ಉಂಟಾಗಿದೆ. ಅರಕೇರ(ಕೆ) ಹಾಗೂ ರಾಮಸಮುದ್ರ ಗ್ರಾಮದ ಭಕ್ತರು ದೊಣ್ಣೆಗಳಿಂದ ಬಡಿದಾಟವಾಗಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದೆ. ಎರಡು ಗ್ರಾಮದ ಭಕ್ತರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. 

Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Jan 14, 2024 | 5:37 PM

ಯಾದಗಿರಿ, ಜನವರಿ 14: ತಾಲೂಕಿನ ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ (Mylaralingeshwar fair) ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ ಉಂಟಾಗಿದೆ. ಅರಕೇರ(ಕೆ) ಹಾಗೂ ರಾಮಸಮುದ್ರ ಗ್ರಾಮದ ಭಕ್ತರ ನಡುವೆ ಬಡಿದಾಟವಾಗಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದೆ. ಹೊನ್ನಕೆರೆಗೆ ಗಂಗಾ ಸ್ನಾನಕ್ಕೆ ಮೈಲಾರಲಿಂಗೇಶ್ವರ ಪಲ್ಲಕ್ಕಿ ಹೋಗುತ್ತಿತ್ತು. ರಾಮಸಮುದ್ರ ಗ್ರಾಮದ ಕಡೆ ತೆಗೆದುಕೊಂಡು ಹೋಗಲು ಭಕ್ತರು ಯತ್ನಿಸಿದ್ದಾರೆ. ಇನ್ನೊಂದು ಕಡೆ ಪಲ್ಲಕ್ಕಿಯನ್ನು ಅರಕೇರ ಗ್ರಾಮದ ಕಡೆ ಭಕ್ತರು ಎಳೆದಾಡಿದ್ದಾರೆ. ಈ ವೇಳೆ ಎರಡು ಗ್ರಾಮಗಳ ಭಕ್ತರಿಂದ ದೊಣ್ಣೆಗಳಿಂದ ಬಡಿದಾಟವಾಗಿದೆ. ಕೊನೆಗೆ ಕೆರೆ ಕಡೆ ಮೈಲಾಪುರದ ಮೈಲಾರಲಿಂಗೇಶ್ವರನ ಪಲ್ಲಕ್ಕಿ ತೆರಳಿದೆ.

ರಾಮಸಮುದ್ರ ಕಡೆ ಹೋಗಬೇಕು ಅಂತ ರಾಮಸಮುದ್ರ ಗ್ರಾಮಸ್ಥರ ವಾದವಾಗಿದ್ದರೆ, ಇನ್ನೊಂದು ಕಡೆ ಅರಕೇರ ಕಡೆ ಹೋಗಬೇಕು ಅಂತ ಅರಕೇರ ಗ್ರಾಮಸ್ಥರು ಒತ್ತಾಯವಾಗಿತ್ತು. ಇದೆ ಕಾರಣಕ್ಕೆ ಎರಡು ಗ್ರಾಮದ ಭಕ್ತರು ಕೈಯಲ್ಲಿ ದೊಣ್ಣೆಗಳನ್ನ ಹಿಡಿದುಕೊಂಡು ಹೊಡೆದಾಡಿದ್ದಾರೆ. ಎರಡು ಗ್ರಾಮದ ಭಕ್ತರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಭಂಡಾರದ ಒಡೆಯ ಮೈಲಾರಲಿಂಗನ ಜಾತ್ರೆ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಂಡಾರದ ಒಡೆಯ ಮೈಲಾರಲಿಂಗನ ಜಾತ್ರೆ ಅದ್ದೂರಿಯಾಗಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆಯೇ ಆರಂಭವಾಗಿದ್ದ ಜಾತ್ರೆಗೆ ಇವತ್ತು ಪ್ರಮುಖ ದಿನವಾಗಿತ್ತು. ಪ್ರತಿ ಸಂಕ್ರಾಮಣ ದಿನದಂದು ನಡೆಯುವ ಜಾತ್ರೆಯಾಗಿದ್ದರಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಬೆಳಗ್ಗೆ ದೇವಸ್ಥಾನದಿಂದ ಮೈಲಾರನ ಮೂರ್ತಿಯನ್ನ ಪಲ್ಲಿಕ್ಕಿಯಲ್ಲಿ ಕುರಿಸಿಕೊಂಡು ದೇವಸ್ಥಾನದ ಹಿಂಭಾಗದಲ್ಲಿರುವ ಹೊನ್ನ ಕೆರೆಗೆ ಗಂಗ ಸ್ನಾನಕ್ಕೆ ಅದ್ದೂರಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತೆ.

ಇದನ್ನೂ ಓದಿ: 200 ವರ್ಷಗಳಿಂದ ಅದು ಮುಸಲ್ಮಾನರ ಸ್ಮಶಾನವಾಗಿತ್ತು, ಈಗ ಅದರ ಮಾಲೀಕ ಗೋರಿಗಳನ್ನು ನೆಲಸಮ ಮಾಡಿದ್ದಾರೆ! ಮುಂದೇನು?

ದೇವಸ್ಥಾನದಿಂದ ಕೆರೆಗೆ ಹೋಗುವ ತನಕ ಲಕ್ಷಾಂತರ ಭಕ್ತರು ಪಲ್ಲಕ್ಕಿ ಜೊತೆಗೆ ಮೈಲಾರನಿಗೆ ಜೈಘೋಷ ಹಾಕುತ್ತ ಹೆಜ್ಜೆ ಹಾಕುತ್ತಾರೆ. ಇನ್ನು ಸಾವಿರಾರು ಜನ ಪಲ್ಲಿಕ್ಕಿ ಮೆರವಣಿಗೆಯನ್ನ ನೋಡುವುದ್ದಕ್ಕೆ ಸುತ್ತಮುತ್ತಲಿನ ಗುಡ್ಡದ ಕಲ್ಲುಗಳ ಮೇಲೆ ಕುಳಿತುಕೊಂಡಿದ್ದರು. ಅಕ್ಕಪಕ್ಕದ ಮನೆಯ ಮಹಡಿಗಳ ಮೇಲೂ ಕುಳಿತುಕೊಂಡು ಪಲ್ಲಕ್ಕಿ ಮೇಲೆ ಭಂಡಾರವನ್ನ ಎರಚುತ್ತಿದ್ದರು.

ಇದನ್ನೂ ಓದಿ: ಯಾದಗಿರಿ ಸಮುದಾಯ ಭವನದಲ್ಲಿ ನಡೆಯುತ್ತಿದೆ ಶಾಲೆ, ಅಲ್ಲಿ ಕಾರ್ಯಕ್ರಮ ಇದ್ರೆ ಶಾಲೆಗೆ ರಜೆ! ಯಾಕೀ ದುರವಸ್ಥೆ?

ಮೈಲಾರಲಿಂಗೇಶ್ವರನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ವಾಡಿಕೆಯಿತ್ತು. ಆದರೆ ಪ್ರಾಣಿ ಹಿಂಸೆ ನಿಷೇಧವಾಗಿದ್ದರಿಂದ ಈ ಬಾರಿ ಮುಖ್ಯ ರಸ್ತೆಯ ಚೆಕ್ ಪೋಸ್ಟ್​ಗಳಲ್ಲೇ ಕುರಿ ಮರಿಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ರೈತರು ಬೆಳೆದ ಜೋಳದ ದಂಡು (ಸೊಪ್ಪೆ) ಹಾಗೂ ಕುರಿಗಳ ಉಣ್ಣೆಯನ್ನ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಹೀಗೆ ಯಾಕೆ ಮಾಡುತ್ತಾರೆ ಅಂದರೆ ಕುರಿಗಳಿಗೆ ಯಾವುದೇ ರೋಗ ರುಜಿನಗಳು ಬರಲ್ಲ, ಹಾಗೆ ಬೆಳೆ ಕೂಡ ಚೆನ್ನಾಗಿ ಬರುತ್ತೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.