ಪೈಪ್​ಗೆ ಬೈಕ್ ಡಿಕ್ಕಿ: BSNL ನೌಕರನ ಮೇಲೆ ನಿವೃತ್ತ ಎಸ್​ಪಿ ಕುಟುಂಬಸ್ಥರಿಂದ ಹಲ್ಲೆ

ಪೈಪ್​ಗೆ ಬೈಕ್ ಡಿಕ್ಕಿ: BSNL ನೌಕರನ ಮೇಲೆ ನಿವೃತ್ತ ಎಸ್​ಪಿ ಕುಟುಂಬಸ್ಥರಿಂದ ಹಲ್ಲೆ

ಯಾದಗಿರಿ: ವಿಶ್ವರಾಧ್ಯನಗರ ಬಡಾವಣೆಯಲ್ಲಿ BSNL ನೌಕರನ ಮೇಲೆ ನಿವೃತ್ತ ಎಸ್​ಪಿ ಎ.ಹೆಚ್.ಚಿಪ್ಪಾರ್ ಹಾಗೂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. BSNL ಮೇಲ್ವಿಚಾರಕ ಮಲಕಪ್ಪ ಜಿ.ನಾಯಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಪ್ಪಾರ್ ಕುಟುಂಬಸ್ಥರು ತಮ್ಮ ಮನೆ ಮುಂದೆ ಗಿಡಗಳಿಗೆ ನೀರು ಹಾಕ್ತಿದ್ದಾಗ ಪೈಪ್​ಗೆ ಬೈಕ್ ಡಿಕ್ಕಿ ಹೊಡಿದಿದೆ. ಹೀಗಾಗಿ ಪೈಪ್ ಹಾಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆಂದು ಗಾಯಾಳು ಮಲಕಪ್ಪ ಜಿ.ನಾಯಕ ಆರೋಪಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿವೃತ ಎಸ್​ಪಿ ಎ.ಹೆಚ್.ಚಿಪ್ಪರ್ ಕುಟುಂಬ ನಿರಾಕರಿಸಿದೆ. ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರ […]

sadhu srinath

|

Dec 27, 2019 | 4:20 PM

ಯಾದಗಿರಿ: ವಿಶ್ವರಾಧ್ಯನಗರ ಬಡಾವಣೆಯಲ್ಲಿ BSNL ನೌಕರನ ಮೇಲೆ ನಿವೃತ್ತ ಎಸ್​ಪಿ ಎ.ಹೆಚ್.ಚಿಪ್ಪಾರ್ ಹಾಗೂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. BSNL ಮೇಲ್ವಿಚಾರಕ ಮಲಕಪ್ಪ ಜಿ.ನಾಯಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಿಪ್ಪಾರ್ ಕುಟುಂಬಸ್ಥರು ತಮ್ಮ ಮನೆ ಮುಂದೆ ಗಿಡಗಳಿಗೆ ನೀರು ಹಾಕ್ತಿದ್ದಾಗ ಪೈಪ್​ಗೆ ಬೈಕ್ ಡಿಕ್ಕಿ ಹೊಡಿದಿದೆ. ಹೀಗಾಗಿ ಪೈಪ್ ಹಾಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆಂದು ಗಾಯಾಳು ಮಲಕಪ್ಪ ಜಿ.ನಾಯಕ ಆರೋಪಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿವೃತ ಎಸ್​ಪಿ ಎ.ಹೆಚ್.ಚಿಪ್ಪರ್ ಕುಟುಂಬ ನಿರಾಕರಿಸಿದೆ. ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರ ಭೇಟಿ ನೀಡಿ ಎರಡು ಕಡೆಯಿಂದ ದೂರು-ಪ್ರತಿದೂರು ದಾಖಲಿಸಿಕೊಂಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada