AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಜಾಗೊಂಡರೂ ಬುದ್ದಿ ಕಲಿಯದ ಎಎಸ್​ಐ; ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆ

ನಗರದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಎಎಸ್ಐವೊಬ್ಬ ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. ಜೊತೆಗೆ ಲೋಕಾ ಅಧಿಕಾರಿಗಳ ಹೆಸರು ಹೇಳಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಆಡಿಯೋ ಸಂಭಾಷಣೆ ಕೂಡ ಲಭ್ಯವಾಗಿದೆ.

ವಜಾಗೊಂಡರೂ ಬುದ್ದಿ ಕಲಿಯದ ಎಎಸ್​ಐ; ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆ
ಆರೋಪಿ
ಅಮೀನ್​ ಸಾಬ್​
| Edited By: |

Updated on:Jul 21, 2023 | 3:08 PM

Share

ಯಾದಗಿರಿ, ಜು.21: ನಗರದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಎಎಸ್ಐ(ASI)ವೊಬ್ಬ ಲೋಕಾಯುಕ್ತ(Lokayukta) ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. ಲೋಕಾ ಅಧಿಕಾರಿಗಳ ಹೆಸರು ಹೇಳಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಆಡಿಯೋ ಸಂಭಾಷಣೆ ಲಭ್ಯವಾಗಿದೆ. ಮುರುಗಪ್ಪ ಎಂಬುವವನೇ ಲೋಕಾ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವ ವಜಾಗೊಂಡ ಪೊಲೀಸ್​ ಅಧಿಕಾರಿ. ಇನ್ನು ಇದೀಗ ಇತನ ವಿರುದ್ದ ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಎಂಬುವವರು ಯಾದಗಿರಿ ನಗರ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಅರುಣ ಕುಮಾರ ಎಂದು ಹೇಳಿ ಹಣಕ್ಕೆ ಬೇಡಿಕೆ

ಹೌದು ಆರೋಪಿ ಮುರುಗಪ್ಪ, ಜೆಸ್ಕಾಂ ಇಇ ರಾಘವೇಂದ್ರ ಅವರಿಗೆ ಕರೆ ಮಾಡಿ, ನಾನು ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಅರುಣ ಕುಮಾರ್​ ಎಂದು ಹೇಳಿ, ನಿಮ್ಮ ಮೇಲೆ ಲೋಕಾಯುಕ್ತ ಕಚೇರಿಯಲ್ಲಿ ಕೇಸ್ ದಾಖಲಾಗಿದ್ದು, ದಾಳಿ ನಡೆಸಲಾಗುವುದು. ಬೇಗ ತಲೆಮರೆಸಿಕೊಳ್ಳಿ ಎಂದು ಸಲಹೆ ನೀಡಿದ ಬಳಿಕ ಹಣ ಕೊಡಿಯೆಂದು ಬೇಡಿಕೆಯಿಡುತ್ತಿದ್ದನಂತೆ. ಅಷ್ಟೇ ಅಲ್ಲದೇ ಕಳೆದ ಐದು ತಿಂಗಳ ಹಿಂದೆ ಹಿರಿಯ ಜೆಸ್ಕಾಂ ಅಧಿಕಾರಿಯೋರ್ವರ ಬಳಿ 5 ಲಕ್ಷ ಹಣವನ್ನ ಕೂಡ ವಸೂಲಿ ಮಾಡಿರುವುದಾಗಿ ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:​ಬೆಂಗಳೂರಿನ ಪ್ರತಿಷ್ಠಿತ ಮಠದ ಅರ್ಚಕನ ಜತೆ ಪರಿಚಯ; 1 ಕೋಟಿ ರೂ. ಅಧಿಕ ಹಣ ಪಡೆದು ವಂಚನೆ, ಆರೋಪಿ ಅರೆಸ್ಟ್

ವಿವಿಧ ಜಿಲ್ಲೆಗಳಲ್ಲಿ ವಂಚಿಸಿ, ಜೈಲು ಸೇರಿದ್ದ ಮುರುಗಪ್ಪ

ಇನ್ನು ಆರೋಪಿ ಮುರುಗಪ್ಪ ಇದೇ ರೀತಿ ಲೋಕಾಯುಕ್ತ ಹೆಸರು ಹೇಳಿ ಗದಗ ಹಾಗೂ ರಾಯಚೂರಿನಲ್ಲಿ ವಂಚಿಸಿ ಜೈಲು ಸೇರಿದ್ದನಂತೆ. ಗದಗ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಬಳಿಕ 6 ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ಇದೀಗ ಮತ್ತೇ ತನ್ನ ಹಳೇ ಚಾಳಿ ಮುಂದುವರೆಸಿರುವ ಮುರುಗಪ್ಪ. ಬೇರೆಯವರ ಹೆಸರಿನಲ್ಲಿ ಖರೀದಿಸಿದ ಸಿಮ್‌ ಕಾರ್ಡ್​ನಿಂದ ಕಾಲ್ ಮಾಡಿ ರಾಯಚೂರು, ಕಲ್ಬುರ್ಗಿ, ಯಾದಗಿರಿ ಜಿಲ್ಲೆಯ ವಿವಿಧ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆಯಿಟ್ಟು, ಸದ್ಯ ತಲೆ ಮರೆಸಿಕೊಂಡಿದ್ದಾನೆ. ಇದೀಗ ಮುರುಗಪ್ಪನಿಗಾಗಿ ಯಾದಗಿರಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Fri, 21 July 23

Follow Us
Ameen Sab
Ameen Sab

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More