ಬೆಲೆ ಕುಸಿತ: ಹತ್ತಿ ಬೆಳೆಗಾರರಿಗೆ ಶಾಕ್, ಕಂಗಲಾದ ಯಾದಗಿರಿ ರೈತರು

ಯಾದಗಿರಿ ಜಿಲ್ಲೆಯಲ್ಲಿ ಭರ್ಜರಿ ಬೆಲೆಯಲ್ಲಿ ನಿರೀಕ್ಷೆಯಲ್ಲಿದ್ದ ಹತ್ತಿ ಬೆಳೆದ ರೈತರಿಗೆ ಡಬಲ್ ಶಾಕ್ ಎದುರಾಗಿದೆ. ಒಂದು ಕಡೆ ಮಳೆ ಬಾರದ ಕಾರಣಕ್ಕೆ ಇಳುವರಿ ಕಡಿಮೆಯಾದರೆ ಇನ್ನೊಂದು ಕಡೆ ಬೆಲೆ ಕುಸಿತದಿಂದ ಮತ್ತೊಂದು ಆಘಾತ ಎದುರಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಮಧ್ಯೆ ಪ್ರವೇಶ ಮಾಡಿ ರೈತರು ಬೆಳೆದ ಹತ್ತಿಯ ಬೆಲೆಯನ್ನ ಹೆಚ್ಚಿಸಬೇಕಿದೆ. 

ಬೆಲೆ ಕುಸಿತ: ಹತ್ತಿ ಬೆಳೆಗಾರರಿಗೆ ಶಾಕ್, ಕಂಗಲಾದ ಯಾದಗಿರಿ ರೈತರು
ಹತ್ತಿ
Follow us
ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2023 | 10:04 PM

ಯಾದಗಿರಿ, ಡಿಸೆಂಬರ್​ 22: ಜಿಲ್ಲೆಯಲ್ಲಿ ಹತ್ತಿ (cotton) ಬೆಳೆಯ ಬೆಲೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಕಳೆದ ವರ್ಷಗಿಂತ ಈ ವರ್ಷ 5 ರಿಂದ 6 ಸಾವಿರ ರೂ. ದಷ್ಟು ಬೆಲೆ ಕುಸಿತವಾಗಿದೆ. ಇದೆ ಕಾರಣಕ್ಕೆ ಬರಗಾಲದಿಂದ ತತ್ತರಿಸಿದ ರೈತರಿಗೆ ಬೆಲೆ ಕುಸಿತದ ಬರೆ ಬಿದ್ದಂತಾಗಿದೆ. ಹೀಗಾಗಿ ಸರ್ಕಾರ ರೈತರಿಂದ ಹೆಚ್ಚಿನ ಬೆಲೆಗೆ ಹತ್ತಿಯನ್ನು ಖರೀದಿ ಮಾಡಿ ನಮ್ಮ ಸಹಾಯಕ್ಕೆ ನಿಲ್ಲಬೇಕು ರೈತರು ಆಗ್ರಹಿಸಿದ್ದಾರೆ.

ಜಿಲ್ಲೆಯ ರೈತರು ಪ್ರತಿ ವರ್ಷವೂ ಹತ್ತಿ ಬೆಳೆಯನ್ನ ಬೆಳೆಯುವುದರಲ್ಲಿ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹತ್ತಿ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಹತ್ತಿಗೆ ಬಂಗಾರದಂತ ಬೆಲೆ ಸಿಗ್ತಾಯಿದೆ. ಕಳೆದ ಬಾರಿ ಸುಮಾರು 1.82 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯನ್ನ ಬೆಳೆದಿದ್ರು.

ಇದನ್ನೂ ಓದಿ: ಮೆಣಸಿನಕಾಯಿ ಬೆಳೆ ಚೆನ್ನಾಗಿಯೇ ಬಂದಿದೆ, ಆದ್ರೆ KBJNL ಅಧಿಕಾರಿಗಳು ಈಗ ಕಾಲುವೆ ನೀರು ಬಂದ್ ಮಾಡಿದ್ದಾರೆ

ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಇಳುವರಿ ಚೆನ್ನಾಗಿ ಬಂದಿತ್ತು. ಇದರ ಜೊತೆಗೆ ಬೆಲೆ ಕೂಡ ಭರ್ಜರಿಯಾಗಿ ಸಿಕ್ಕ ಕಾರಣಕ್ಕೆ ರೈತರು ಭರ್ಜರಿಯಾಗಿ ಲಾಭ ಪಡೆದಿದ್ದರು. ಆದರೆ ಕಳೆದ ವರ್ಷದಂತೆ ಈ ವರ್ಷವೂ ಹೆಚ್ಚಿನ ಬೆಲೆ ಸಿಗುತ್ತೆ ಅಂತ ಜಿಲ್ಲೆಯ ರೈತರು ಸುಮಾರು 2 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹತ್ತಿಯನ್ನ ಬೆಳೆದಿದ್ದಾರೆ. ಆದರೆ ಈ ವರ್ಷ ರೈತರಿಗೆ ಮಳೆ ಬಾರದ ಕಾರಣಕ್ಕೆ ಭೀಕರ ಬರದ ಎಫೆಕ್ಟ್ ಆಗಿದೆ. ಇದೆ ಕಾರಣಕ್ಕೆ ಹತ್ತಿ ಇಳುವರಿ ಕಡಿಮೆಯಾಗಿದೆ. ಪ್ರತಿ ಎಕರೆಗೆ ಕೇವಲ 3 ರಿಂದ 4 ಕ್ವಿಂಟಲ್ ಮಾತ್ರ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಹತ್ತಿಗೆ ಬೆಲೆ ಕುಸಿದ ಆಗಿರುವ ಕಾರಣಕ್ಕೆ ರೈತರಿಗೆ ಬರ ಸಿಡಿಲು ಬಡಿದಂತಾಗಿದೆ.

ಕಳೆದ ವರ್ಷ ರೈತರಿಗೆ ಮಳೆ ಹೆಚ್ಚಾಗಿ ಆಗಿದ್ದರಿಂದ ಪ್ರತಿ ಎಕರೆಗೆ 10 ರಿಂದ 15 ಕ್ವಿಂಟಲ್ ಹತ್ತಿ ಇಳುವರಿ ಬರ್ತಾಯಿತ್ತು. ಜೊತೆಗೆ ಬೆಲೆ ಕೂಡ ಭರ್ಜರಿಯಾಗಿ ಸಿಕ್ಕಿದೆ. ಪ್ರತಿ ಎಕರೆಗೆ 10 ರಿಂದ 13 ಸಾವಿರ ರೂ. ವರೆಗೆ ರೈತರು ಕ್ವಿಂಟಲ್ ಹತ್ತಿಯನ್ನ ಮಾರಾಟ ಮಾಡಿದ್ದಾರೆ. ಆದರೆ ಈ ಬಾರಿ ಸಂಪೂರ್ಣವಾಗಿ ಉಲ್ಟಾ ಆಗಿದೆ. ಈ ಬಾರಿ ಪ್ರತಿ ಕ್ವಿಂಟಲ್ ಹತ್ತಿ ಕೇವಲ 6 ರಿಂದ 7 ಸಾವಿರ ರೂ. ಕ್ವಿಂಟಲ್​ಗೆ ಮಾರಾಟವಾಗ್ತಾಯಿದೆ. ಇದೆ ಕಾರಣಕ್ಕೆ ರೈತರಿಗೆ ನಷ್ಟ ಉಂಟಾಗುತ್ತಿದೆ.

ಇದನ್ನೂ ಓದಿ: ಇಂದು ರಾತ್ರಿಯಿಂದ ಸುರಪುರ ದೇವಿಕೇರಾ ಜಾತ್ರೆ; ಕೋಣಗಳ ಬಲಿ ತಡೆಯಲು ಪೊಲೀಸ್ ಭದ್ರತೆ

ನೇರವಾಗಿ ರೈತರು ರಾಶಿ ಮಾಡಿದ ಕೂಡಲೇ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಹತ್ತಿಯನ್ನ ಮಾರಾಟ ಮಾಡ್ತಾಯಿದ್ದಾರೆ. ಪ್ರತಿ ಎಕರೆಗೆ 20 ರಿಂದ 25 ಸಾವಿರ ರೂ. ಖರ್ಚು ಮಾಡಿರುವ ರೈತರಿಗೆ ಖರ್ಚು ಮಾಡಿದ ಹಣ ವಾಪಸ್ ಬಾರದಂತ ಪರಸ್ಥಿತಿ ನಿರ್ಮಾಣವಾಗಿದೆ. ಏಕೆಂದ್ರೆ ಎಕರೆಗೆ ಕೇವಲ 3 ರಿಂದ 4 ಕ್ವಿಂಟಲ್ ಹತ್ತಿ ಮಾತ್ರ ಬರ್ತಾಯಿದ್ದು 7 ಸಾವಿರ ರೂ. ಕ್ವಿಂಟಲ್ ಗೆ ಮಾರಾಟ ಮಾಡಿದ್ದರು. ಕೇವಲ ಎಕರೆಗೆ 21 ಸಾವಿರ ಹಣ ಸಿಗ್ತಾಯಿದೆ.

ಸಾಲದಕ್ಕೆ ರೈತರ ಕೂಲಿ ಆಳುಗಳಿಗೆ ಸಾವಿರಾರು ರೂ ಕೊಡಬೇಕಾಗಿದೆ. ಮಳೆ ಬೇರೆ ಕೈಕೊಟ್ಟ ಕಾರಣಕ್ಕೆ ಇಳುವರಿ ಪೂರ್ತಿ ಕಡಿಮೆ ಬರ್ತಾಯಿದೆ. ಕಳೆದ ವರ್ಷದ ಕೊನೆಯಲ್ಲಿಂದ್ಲೇ ಹತ್ತಿ ಬೆಳೆಯ ಬೆಲೆ ಕ್ರಮೇಣವಾಗಿ ಕುಸಿಯುತ್ತಿದೆ. ಹೀಗಾಗಿ ಕೆಲ ರೈತರು ಕಳೆದ ವರ್ಷ ರಾಶಿ ಮಾಡಿದ ಹತ್ತಿ ಕೂಡ ಶೇಖರಣೆ ಮಾಡಿಟ್ಟಿದ್ದಾರೆ. ಈ ವರ್ಷ ಬೆಲೆ ಜಾಸ್ತಿಯಾದ್ರೆ ಮಾರಾಟ ಮಾಡಬೇಕು ಅಂತ ಅಂದುಕೊಂಡಿದ್ದ ರೈತರಿಗೆ ಶಾಕ್ ಎದುರಾಗಿದೆ. ಹೀಗಾಗಿ ಸರ್ಕಾರ ಮೀಲ್ ಮಾಲೀಕರಿಂದ ಹೆಚ್ಚಿನ ಬೆಲೆ ಹತ್ತಿ ಖರೀದಿ ಮಾಡಿಸಿ ರೈತರ ಸಹಾಯ ನಿಲ್ಲಬೇಕು. ಜೊತೆಗೆ ಬರಗಾಲದಿಂದ ಬೆಳೆಯನ್ನ ಕಳೆದುಕೊಂಡ ರೈತರಿಗೆ ಪರಿಹಾರದ ಹಣವನ್ನ ಬಿಡುಗಡೆ ಮಾಡಬೇಕು ಎಂದಿ ರೈತ ಮುಖಂಡರ ಆಗ್ರಹವಾಗಿದೆ.

ಭರ್ಜರಿ ಬೆಲೆಯಲ್ಲಿ ನಿರೀಕ್ಷೆಯಲ್ಲಿದ್ದ ಹತ್ತಿ ಬೆಳೆದ ರೈತರಿಗೆ ಡಬಲ್ ಶಾಕ್ ಎದುರಾಗಿದೆ. ಒಂದು ಕಡೆ ಮಳೆ ಬಾರದ ಕಾರಣಕ್ಕೆ ಇಳುವರಿ ಕಡಿಮೆಯಾದರೆ ಇನ್ನೊಂದು ಕಡೆ ಬೆಲೆ ಕುಸಿತದಿಂದ ಮತ್ತೊಂದು ಆಘಾತ ಎದುರಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಮಧ್ಯೆ ಪ್ರವೇಶ ಮಾಡಿ ರೈತರು ಬೆಳೆದ ಹತ್ತಿಯ ಬೆಲೆಯನ್ನ ಹೆಚ್ಚಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ