ಜಿಲ್ಲಾ,ತಾಲೂಕು ಪಂಚಾಯ್ತಿ ಎಲೆಕ್ಷನ್: ವರ್ಗವಾರು ಮೀಸಲಾತಿ ಪಟ್ಟಿ ಪ್ರಕಟ
ಹಲವು ವರ್ಷಗಳಿಂದ ಬಾಕಿ ಇರುವ ಕರ್ನಾಟಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನ ನಡೆಸಲು ಕೊನೆಗೂ ರಾಜ್ಯ ಸರ್ಕಾರ ಮುಂದಾಗಿದೆ. ನಿನ್ನೆ (ಅ.06) ನಡೆಸ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ಚುನಾವಣೆ ನಡೆಸಲು ಮುಹೂರ್ತ ಕೂಡ ಫಿಕ್ಸ್ ಮಾಡಲಾಗಿದೆ. 2027 ಜನವರಿ ಮೊದಲ ವಾರದಲ್ಲೇ ಎಲೆಕ್ಷನ್ ನಡೆಸಲು ತೀರ್ಮಾನಿಸಿದ್ದು, ಇದೀಗ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿದೆ.

ಬೆಂಗಳೂರು, (ಅಕ್ಟೋಬರ್ 07): ಕರ್ನಾಟಕದಲ್ಲಿ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು 2027ರ ಜನವರಿ ಮೊದಲ ವಾರದಲ್ಲಿ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಮಂಗಳವಾರ(ಅ,06) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗಳ್ಳಲಾಗಿದೆ. ಇದರ ಬೆನ್ನಲ್ಲೇ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಇದಕ್ಕೆ ಪೂರಕವೆಂಬಂತೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನ ವರ್ಗವಾರು ಮೀಸಲಿರಿಸಿದ ಸ್ಥಾನಗಳ ಅಧಿಸೂಚನೆ ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯಿತಿ ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ.
ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನ
ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಈ ಪೈಕಿ ಎಸ್‌ಸಿ, ಎಸ್‌ಟಿ, ಹಿಂದೂಳಿದ ವರ್ಗ ಎ, ಬಿ ವರ್ಗವಾರು ಮೀಸಲಾತಿ ಪ್ರಕಟಿಸಿದೆ. ಯಾರಿಗೆ ಎಷ್ಟು ಸ್ಥಾನ ಮೀಸಲು ಎನ್ನುವುದನ್ನು ನೋಡುವುದಾರೆ. ಪರಿಶಿಷ್ಟ ಜಾತಿ 225, ಪರಿಶಿಷ್ಟ ಪಂಗಡಕ್ಕೆ 102 ಸ್ಥಾನ ಮೀಸಲು ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಹಿಂದುಳಿದ ವರ್ಗ ಎ-183, ಹಿಂದುಳಿದ ವರ್ಗ ಬಿ-43 ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ಮೀಸಲಿಡಲಾಗಿದೆ.
ಇದನ್ನೂ ಓದಿ: ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ: ವಿಪಕ್ಷಗಳಿಂದ ಸಚಿವರ ಸ್ಟಿಂಗ್ ಆಪರೇಷನ್; ಸಿಎಂರಿಂದಲೇ ಮಂತ್ರಿಗಳಿಗೆ ಮಾಹಿತಿ
ವರ್ಗವಾರು ಒಟ್ಟು ಸ್ಥಾನಗಳ ವಿವರ
- ಎಸ್‌ಸಿ : ಒಟ್ಟು 225 ಸ್ಥಾನಗಳು ( 121 ಸ್ಥಾನಗಳು ಮಹಿಳೆಯರಿಗೆ)
- ಎಸ್‌ಟಿ: ಒಟ್ಟು 102 ಸ್ಥಾನಗಳು (59 ಸ್ಥಾನಗಳು ಮಹಿಳೆಯರಿಗೆ)
- ಹಿಂದುಳಿದ ವರ್ಗ ‘ಅ’ : ಒಟ್ಟು 183 ಸ್ಥಾನಗಳು (98 ಸ್ಥಾನಗಳು ಮಹಿಳೆಯರಿಗೆ)
- ಹಿಂದುಳಿದ ವರ್ಗ ‘ಬ’ : ಒಟ್ಟು 43 ಸ್ಥಾನಗಳು ( 25 ಸ್ಥಾನಗಳು ಮಹಿಳೆಯರಿಗೆ)
- ಸಾಮಾನ್ಯ ವರ್ಗ : ಒಟ್ಟು 576 ಸ್ಥಾನಗಳು ( 268 ಸ್ಥಾನಗಳು ಮಹಿಳೆಯರಿಗೆ)
ತಾಲೂಕು ಪಂಚಾಯ್ತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟ
ಇನ್ನು ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟವಾಗಿದ್ದು, ರಾಜ್ಯದಲ್ಲಿ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿವೆ. ಈ ಪೈಕಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394 ಸ್ಥಾನ ಮೀಸಲು. ಹಾಗೇ ಹಿಂದುಳಿದ ವರ್ಗ ಎ-508, ಹಿಂದುಳಿದ ವರ್ಗ ಎ-111 ಸ್ಥಾನ, ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳು ಮೀಸಲು. ಒಟ್ಟು ಒಟ್ಟು 3,656 ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ.
2027 ಜನವರಿ ಮೊದಲ ವಾರದಲ್ಲೇ ಎಲೆಕ್ಷನ್
ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಮಂಗಳವಾರದ ನಡೆದಿದ್ದ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಜನವರಿ ಮೊದಲ ವಾರದಲ್ಲಿ ಅಂದರೆ ಜನವರಿ 15ರೊಳಗೆ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ನಿರ್ಧರಿಸಿದೆ.
ಗ್ರಾಮ ಪಂಚಾಯತಿ ಚುನಾವಣೆ ಯಾವಾಗ?
ಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಪಂಚಾಯತ್ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆದಿದ್ದು, ಡಿಸೆಂಬರ್ ನಲ್ಲಿ ಪ್ರಕ್ರಿಯೆ ಆರಂಭಿಸಿ ಜನವರಿ ಮೊದಲ ವಾರದಲ್ಲೇ ಚುನಾವಣೆ ಪೂರ್ಣಗೊಳಿಸಲು ಸಭೆಯಲ್ಲಿ ನಿರ್ಧರಿಲಾಗಿದೆ. ಇನ್ನು ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯತ್ ಚುನಾವಣೆ ಬಳಿಕ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಂಪುಟ ಅಸ್ತು ಎಂದಿದೆ.
ಇವಿಎಂ ಬದಲಿಗೆ ಬ್ಯಾಲೆಟ್ !
ಈ ಬಾರಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ (EVM) ಬದಲಾಗಿ ಮತಪೆಟ್ಟಿಗೆಗಳನ್ನು (ಬ್ಯಾಲೆಟ್ ಬಾಕ್ಸ್) ಬಳಸಲು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಈ ಬಾರಿ ನಡೆಯುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಮಷಿನ್ ಬದಲಾಗಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ.
ಒಟ್ಟಿನಲ್ಲಿ ಪಂಚಾಯ್ತಿ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಎಲೆಕ್ಷನ್ 3 ತಿಂಗಳು ಬಾಕಿ ಇದ್ದು, ಎಲೆಕ್ಷನ್ ತಯಾರಿ ಜೋರಾಗಲಿದೆ. ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರದ ಚರ್ಚೆ ಗರಿಗೆದರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Wed, 7 October 26




